ETV Bharat / entertainment

ಶುರುವಾಯಿತು 'ಆದಿಪುರುಷ್'​ ಸಿನಿಮಾ ಕ್ರೇಜ್​: ಪ್ರಮುಖ ನಗರಗಳಲ್ಲಿ 2 ಸಾವಿರ ರೂಗೆ ಟಿಕೆಟ್​ ಮಾರಾಟ

ರಾಮಾಯಣ ಕಥೆ ಆಧರಿತ ಈ ಚಿತ್ರ ಗ್ರಾಫಿಕ್ಸ್​ ಮೂಲಕ ಪ್ರೇಕ್ಷಕರಿಗೆ ಹೊಸ ಅನುಭವ ನೀಡಲು ಸಿದ್ದವಾಗಿದೆ.

Adipurush movie craze started; Tickets are sold at Rs 2,000 in major cities

author img

By

Published : Jun 14, 2023, 12:02 PM IST

ಬೆಂಗಳೂರು​: ಬಹು ನಿರೀಕ್ಷೆಯ ಪ್ಯಾನ್​ ಇಂಡಿಯಾ ಸಿನಿಮಾ 'ಆದಿಪುರುಷ್'​​ ಬಿಡುಗಡೆಗೆ ಕೌಂಟ್ ಡೌನ್​ ಶುರುವಾಗಿದೆ. ನಟ ಪ್ರಭಾಸ್​ ರಾಮನಾಗಿ ನಟಿ ಕೃತಿ ಸನೋನ್​ ಸೀತೆಯಾಗಿ ಕಾಣಿಸಿಕೊಳ್ಳುತ್ತಿರುವ ಈ ಚಿತ್ರದ ಬಗ್ಗೆ ಈಗಾಗಲೇ ನಿರೀಕ್ಷೆಗಳು ಹೆಚ್ಚಿದ್ದು, ಮುಖಂಡರ ಟಿಕೆಟ್​ ಖರೀದಿ ಆರಂಭವಾಗಿದೆ. ಚಿತ್ರ ಬಿಡುಗಡೆಗೂ ಎರಡು ದಿನ ಮೊದಲೇ ಟಿಕೆಟ್​​ಗಳು ದುಬಾರಿ ಬೆಲೆಯಲ್ಲಿ ಮಾರಾಟ ಆಗುತ್ತಿವೆ. ಇತ್ತೀಚಿನ ವರದಿ ಅನುಸಾರ, ದೆಹಲಿ ಮತ್ತು ಮುಂಬೈನಂತಹ ಪ್ರಮುಖ ನಗರಗಳಲ್ಲಿ ಈಗಾಗಲೇ 2000ರೂಗೆ ಒಂದರಂತೆ ಟಿಕೆಟ್​ಗಳು ಮಾರಾಟ ಆಗುತ್ತಿದ್ದು, ಹೌಸ್​ಫುಲ್​ ಆಗುತ್ತಿವೆ.

ಓಂ ರಾವತ್​​ ನಿರ್ದೇಶದನ 'ಆದಿಪುರುಷ್'​ ಚಿತ್ರನ್ನು ದೊಡ್ಡ ಬಜೆಟ್​ನಲ್ಲಿ ನಿರ್ಮಾಣ ಮಾಡಲಾಗುತ್ತಿದೆ. ಮಹಾಪುರಾಣವಾದ ರಾಮಾಯಣದ ಕಥೆಯಾಧಾರಿತ ಈ ಚಿತ್ರದ ಪ್ರಮುಖ ಹೈಲೈಟ್​ ಗ್ರಾಫಿಕ್ಸ್​ ಆಗಿದೆ. ನಟ ಸೈಫ್​ ಆಲಿ ಖಾನ್​, ಸನ್ನಿಸಿಂಗ್​ ಮತ್ತು ದೇವದತ್ತ್​​ ನೇಗ್​ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಜೂನ್​ 16ರಂದು ಈ ಚಿತ್ರ 3ಡಿ ರೂಪದಲ್ಲಿ ವಿಶ್ವಾದ್ಯಂತ ಬಿಡುಗಡೆ ಕಾಣುತ್ತಿದೆ.

ವರದಿ ಅನುಸಾರ, ಕೆಲವು ಥಿಯೇಟರ್​ಗಳು ಚಿತ್ರದ ಮೊದಲ ದಿನದ ಟಿಕೆಟ್​ಗಳನ್ನು 2 ಸಾವಿರ ರೂಗೆ ಮಾರಾಟ ಮಾಡುತ್ತಿದೆ. ದೆಹಲಿಯ ಪಿವಿಆರ್ ವೆಗಸ್​ ಲುಕ್ಸ್​​, ದ್ವಾರಕಾ ದಲ್ಲಿ ಈಗಾಗಲೇ 2000ಕ್ಕೆ ಟಿಕೆಟ್​ ಮಾರಾಟವಾಗುತ್ತಿದೆ. ಆಯ್ದ ನಗರಗಳಲ್ಲಿ ಪಿವಿಆರ್​ ಗೋಲ್ಡ್​​ನಲ್ಲಿ 1800 ರೂ.ಗೆ ಟಿಕೆಟ್​ ಮಾರಾಟ ಆಗುತ್ತಿದೆ. ನೋಯ್ಡಾದ ಪಿವಿಆರ್​ ಗೋಲ್ಡ್​​ ಲೊಗಿಕ್ಸ್​​ನಲ್ಲಿ 1650 ರೂ.ಗೆ ಒಂದು ಟಿಕೆಟ್​ ಮಾರಾಟ ಆಗುತ್ತಿದೆ. ಪಿವಿಆರ್​ ಲೊಜಿಕ್ಸ್​ ಸಿಟಿ ಸೆಂಟರ್​ನಲ್ಲಿ ಫ್ಲಾಶ್​ ಟಿಕೆಟ್​ 1150 ರೂಗೆ ಮಾರಾಟವಾಗುತ್ತಿದೆ.

ಮುಂಬೈನ ಮೆಸೊನ್​ ಪಿವಿಆರ್​: ಲಿವಿಂಗ್​ ರೂಂ, ಲುಕ್ಸ್​, ಜಿಯೋ ವರ್ಲ್ಡ್​​ ಡ್ರೈವ್​​, ಬಿಕೆಸಿ, ಟಿಕೆಟ್​​ಗಳು 2000ರೂಗೆ ಟಿಕೆಟ್​ ಮಾರಾಟವಾಗುತ್ತಿದೆ. ಕಲ್ಕತ್ತಾ ಮತ್ತು ಬೆಂಗಳೂರಿನದಲ್ಲೂ ಕೂಡ ದುಬಾರಿ ಬೆಲೆಗೆ ಟಿಕೆಟ್​ ಮಾರಾಟವಾಗುತ್ತಿದ್ದು, ಚೆನ್ನೈ ಮತ್ತು ಹೈದರಾಬಾದ್​ನಲ್ಲಿ ಕೈಗೆಟುಕುವ ದರದಲ್ಲಿ ಟಿಕೆಟ್​​ ಮಾರಾಟವಾಗುತ್ತಿದೆ. ಇನ್ನು ಚಿತ್ರದ ಕುರಿತು ಸಿನಿ ಮಂದಿ ಕೂಡ ಮೆಚ್ಚುಗೆ ಮಾತನಾಡಿದ್ದು, ಇದಕ್ಕೆ ಪ್ರೋತ್ಸಾಹ ನೋಡುತ್ತಿದ್ದಾರೆ. ಇತ್ತೀಚೆಗೆ ನಟ ರಣಬೀರ್​ ಕೂಡ ಆದಿಪುರುಷ್​ ಚಿತ್ರದ 10000 ಟಿಕೆಟ್​ಗಳನ್ನು ಬಡ ಮಕ್ಕಳಿಗೆ ಚಿತ್ರ ವೀಕ್ಷಣೆಗೆ ನೀಡುತ್ತಿರುವುದಾಗಿ ತಿಳಿಸಿದ್ದರು.

ಇನ್ನು ಖ್ಯಾತ ಸಿನಿಮಾ ವಿಶ್ಲೇಷಕ ತರಣ್​ ಆದರ್ಶ್​​ ಈ ಕುರಿತು ಟ್ವಿಟರ್​ನಲ್ಲಿ ತಿಳಿಸಿದ್ದರು. ರಣಬೀರ್​ ಕಪೂರ್​ ಆದಿ ಪುರಷ್​ ಸಿನಿಮಾದ 10 ಸಾವಿರ ಟಿಕೆಟ್​ಗಳನ್ನು ಬಡ ಮಕ್ಕಳಿಗಾಗಿ ಬುಕ್​ ಮಾಡಿದ್ದಾರೆ ಎಂದು ತಿಳಿಸಿದ್ದರು.

ರಣಬೀರ್​​ ಬೆನ್ನಲ್ಲೇ ಟಾಲಿವುಡ್​ ನಿರ್ಮಾಪಕ ಅಭಿಷೇಕ್​ ಅಗರ್ವಾಲ್​ ಕೂಡ ಆದಿಪುರುಷ್​ ಸಿನಿಮಾದ 10 ಸಾವಿರ ಟಿಕೆಟ್​ಗಳನ್ನು ತೆಲಂಗಾಣದ ಸರ್ಕಾರಿ ಶಾಲೆ, ಅನಾಥಾಶ್ರಮ ಮತ್ತು ವೃದ್ಧಾಶ್ರಮಗಳಿಗೆ ನೀಡುವುದಾಗಿ ಘೋಷಿಸಿದರು. ಇನ್ನು ಜೂನ್​ 16ರಂದು ಸಿನಿಮಾ ಬಿಡುಗಡೆಗೆ ಮುನ್ನವೇ ಈ ಚಿತ್ರ ಈಗಾಗಲೇ ಟ್ರಬೆಕಾ ಫಿಲ್ಮ್​​ ಫೆಸ್ಟಿವಲ್​ನಲ್ಲಿ ಪ್ರದರ್ಶನ ಕಂಡಿದೆ. ಅದ್ಭುತ ಗ್ರಾಫಿಕ್ಸ್​ ಮೂಲಕ ಮೂಡಿ ಬಂದಿರುವ ಚಿತ್ರದ ಕುರಿತು ಮೆಚ್ಚುಗೆ ಮಾತು ಕೇಳಿ ಬಂದಿದೆ.

ಇದನ್ನೂ ಓದಿ: Adipurush ಬಿಡುಗಡೆಗೆ ಎರಡೇ ದಿನ ಬಾಕಿ: ಮೊದಲ ದಿನದ ಕಲೆಕ್ಷನ್​ ಬಗ್ಗೆ ಈಗ್ಲೇ ಲೆಕ್ಕಾಚಾರ ಶುರು!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.