ದಕ್ಷಿಣ ಸಿನಿ ರಂಗದ ಪ್ರಭಾಸ್ ಮತ್ತು ಬಾಲಿವುಡ್ ಬಹುಬೇಡಿಕೆ ನಟಿ ಕೃತಿ ಸನೋನ್ ಅಭಿನಯದ ಪೌರಾಣಿಕ ಚಲನಚಿತ್ರ ಆದಿಪುರುಷ್ ಜೂನ್ 16ರಂದು (ನಿನ್ನೆ, ಶುಕ್ರವಾರ) ಅದ್ಧೂರಿಯಾಗಿ ತೆರೆ ಕಂಡಿದೆ. ಮಿಶ್ರ ಪ್ರತಿಕ್ರಿಯೆ ಪಡೆದಿರುವ ಈ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಧೂಳೆಬ್ಬಿಸುತ್ತಿದೆ. ವಿಶ್ವಾದ್ಯಂತ ಪ್ಯಾನ್ ಇಂಡಿಯಾ ಮಟ್ಟದಲ್ಲಿ ತೆರೆ ಕಂಡ ಆದಿಪುರುಷ್ ಮೊದಲ ದಿನವೇ ಸರಿಸುಮಾರು 130 - 140 ಕೋಟಿ ರೂ. ಸಂಪಾದಿಸಿದೆ ಎಂಬ ಮಾಹಿತಿ ಲಭ್ಯವಾಗಿದೆ.
-
Sensational Start #BoxOffice 💥💥🌈
— Girish Johar (@girishjohar) June 17, 2023 " class="align-text-top noRightClick twitterSection" data="
Day 1 #Adipurush
Early Estimates... Grosses approx
Hindi ~ ₹40crs
Telugu ~ ₹50crs
Rest ~ ₹8crs
Total Domestic ~ ₹98crs
Overseas ~ ₹35crs, all langs
Global ~ ₹133crs #BOEstimates #BOTrends ... continuing the momentum is key !… pic.twitter.com/PFLDOZ708A
">Sensational Start #BoxOffice 💥💥🌈
— Girish Johar (@girishjohar) June 17, 2023
Day 1 #Adipurush
Early Estimates... Grosses approx
Hindi ~ ₹40crs
Telugu ~ ₹50crs
Rest ~ ₹8crs
Total Domestic ~ ₹98crs
Overseas ~ ₹35crs, all langs
Global ~ ₹133crs #BOEstimates #BOTrends ... continuing the momentum is key !… pic.twitter.com/PFLDOZ708ASensational Start #BoxOffice 💥💥🌈
— Girish Johar (@girishjohar) June 17, 2023
Day 1 #Adipurush
Early Estimates... Grosses approx
Hindi ~ ₹40crs
Telugu ~ ₹50crs
Rest ~ ₹8crs
Total Domestic ~ ₹98crs
Overseas ~ ₹35crs, all langs
Global ~ ₹133crs #BOEstimates #BOTrends ... continuing the momentum is key !… pic.twitter.com/PFLDOZ708A
ಅಭಿಮಾನಿಗಳ ಶ್ಲಾಘನೆ ಮತ್ತು ಮಿಶ್ರ ವಿಮರ್ಶೆಗಳ ನಡುವೆಯೂ ದೊಡ್ಡ ಪರದೆಯಲ್ಲಿ ಸಖತ್ ಸದ್ದು ಮಾಡುತ್ತಿದೆ. ಅಭಿಮಾನಿಗಳು ಪ್ರಭಾಸ್ ಅವರನ್ನು ಭಗವಾನ್ ಶ್ರೀ ರಾಮನ ರೂಪದಲ್ಲಿ ಕಾಣಲು ಉತ್ಸುಕರಾಗಿದ್ದರು. ಚಿತ್ರವು ರಾಮಾಯಣ ಆಧರಿಸಿರುವುದರಿಂದ ಸಿನಿ ಪ್ರಿಯರನ್ನು ಸೆಳೆದಿರುವುದು ಎಷ್ಟು ಸತ್ಯವೋ, ಗ್ರಾಫಿಕ್ ವಿಚಾರವಾಗಿ ಟ್ರೋಲ್ಗೆ ಒಳಗಾಗಿರೋದು ಕೂಡ ಅಷ್ಟೇ ನಿಜ. ಕಳಪೆ ವಿಮರ್ಶೆಗಳ ಹೊರತಾಗಿಯೂ, ಆರಂಭಿಕ ಮಾಹಿತಿ ಪ್ರಕಾರ, ಮೊದಲ ದಿನದಂದೇ ಆದಿಪುರುಷ್ ಬಾಕ್ಸ್ ಆಫೀಸ್ನಲ್ಲಿ ಗುಡುಗಿದೆ.
ಸಿನಿ ಟ್ರೇಡ್ ವರದಿಗಳ ಪ್ರಕಾರ, ಆದಿಪುರುಷ್ ಮೊದಲ ದಿನ ಕೇವಲ ಹಿಂದಿ ಆವೃತ್ತಿಯೊಂದರಲ್ಲೇ ಸಂಗ್ರಹಿಸಿದ ಹಣ ಸುಮಾರು 36-38 ಕೋಟಿ ರೂ.ಗಳು. ಇತರ ಭಾಷೆಗಳು ಸೇರಿದಂತೆ ಭಾರತದಲ್ಲಿ ಸುಮಾರು 90 ಕೋಟಿ ರೂ. ಕಲೆಕ್ಷನ್ ಮಾಡಿದೆ. ಸಾಗರೋತ್ತರ ವ್ಯವಹಾರದ ಮಾಹಿತಿ ಇನ್ನು ಬರಬೇಕಿದೆಯಷ್ಟೇ. ಓಂ ರಾವುತ್ ನಿರ್ದೇಶನದ ಈ ಚಿತ್ರ ವಿಶ್ವಾದ್ಯಂತ ಒಟ್ಟು 140 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡುವ ಸಾಧ್ಯತೆಯಿದೆ ಎಂದು ವ್ಯವಹಾರ ಪಂಡಿತರು ಅಂದಾಜಿಸಿದ್ದಾರೆ. ಬಾಹುಬಲಿ 2, ಸಾಹೋ ನಂತರ 'ಆದಿಪುರುಷ್' ಮೊದಲ ದಿನವೇ 100 ಕೋಟಿ ರೂ. ಗಡಿ ದಾಟಿದ ಪ್ರಭಾಸ್ನ ಮೂರನೇ ಸಿನಿಮಾ ಆಗಿದೆ.
-
#Adipurush WW Box Office
— Manobala Vijayabalan (@ManobalaV) June 17, 2023 " class="align-text-top noRightClick twitterSection" data="
Film registers Earth Shattering opening day collections!
AP/TS - ₹ 50.93 cr
KA - ₹ 8.57 cr
KL/TN - ₹ 2.35 cr
ROI - ₹ 48.24 cr
Overseas - ₹ 26.75 cr[Reported Locs]
Total - ₹ 136.84 cr
HUMONGOUS
3rd ₹100cr + opening for #Prabhas.
Biggest WW… pic.twitter.com/mJdtobnUhU
">#Adipurush WW Box Office
— Manobala Vijayabalan (@ManobalaV) June 17, 2023
Film registers Earth Shattering opening day collections!
AP/TS - ₹ 50.93 cr
KA - ₹ 8.57 cr
KL/TN - ₹ 2.35 cr
ROI - ₹ 48.24 cr
Overseas - ₹ 26.75 cr[Reported Locs]
Total - ₹ 136.84 cr
HUMONGOUS
3rd ₹100cr + opening for #Prabhas.
Biggest WW… pic.twitter.com/mJdtobnUhU#Adipurush WW Box Office
— Manobala Vijayabalan (@ManobalaV) June 17, 2023
Film registers Earth Shattering opening day collections!
AP/TS - ₹ 50.93 cr
KA - ₹ 8.57 cr
KL/TN - ₹ 2.35 cr
ROI - ₹ 48.24 cr
Overseas - ₹ 26.75 cr[Reported Locs]
Total - ₹ 136.84 cr
HUMONGOUS
3rd ₹100cr + opening for #Prabhas.
Biggest WW… pic.twitter.com/mJdtobnUhU
ಆದಿಪುರುಷ್ ಸಿನಿಮಾ ಭಾರತ ಮಾತ್ರವಲ್ಲದೇ ಅಮೇರಿಕದಲ್ಲೂ ಸಖತ್ ಸದ್ದು ಮಾಡುತ್ತಿದೆ. ಜನಪ್ರಿಯ ನಿರ್ಮಾಣ ಸಂಸ್ಥೆ ಪೀಪಲ್ ಮೀಡಿಯಾ ಫ್ಯಾಕ್ಟರಿ ಟ್ವೀಟ್ ಮಾಡಿದ್ದು, ಈ ಸಿನಿಮಾ ಮೊದಲ ದಿನವೇ ಒಂದು ಮಿಲಿಯನ್ ಯುಎಸ್ ಡಾಲರ್ಗೂ ಹೆಚ್ಚು ಕಲೆಕ್ಷನ್ ಮಾಡಿ ದಾಖಲೆ ಸೃಷ್ಟಿಸಿದೆ ಎಂದು ತಿಳಿಸಿದೆ. ವಾರಾಂತ್ಯದ ವೇಳೆಗೆ, ಚಿತ್ರ ಯುಎಸ್ನಲ್ಲಿ 4 ಮಿಲಿಯನ್ ಡಾಲರ್ ಸಂಗ್ರಹಿಸಲಿದೆ ಎಂದು ವಿಶ್ಲೇಷಕರು ಅಂದಾಜಿಸಿದ್ದಾರೆ.
ಇದನ್ನೂ ಓದಿ: ಕರಣ್ ಡಿಯೋಲ್ - ದ್ರಿಶಾ ಆಚಾರ್ಯ ಸಂಗೀತ ಸಮಾರಂಭ
ಈ ಕಲೆಕ್ಷನ್ ಮೂಲಕ ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್ ಮತ್ತೊಂದು ಅಪರೂಪದ ದಾಖಲೆಯನ್ನು ಮಾಡಿದ್ದಾರೆ. ಈವರೆಗೆ 6 ಚಿತ್ರಗಳು ಮೊದಲ ದಿನ 100 ಕೋಟಿ ರೂ. ಕಲೆಕ್ಷನ್ ಮಾಡಿವೆ. ಆ ಪೈಕಿ ಮೂರು ಚಿತ್ರಗಳು ಪ್ರಭಾಸ್ ಅವರದ್ದು ಎಂಬುದು ಗಮನಾರ್ಹ. 'ಬಾಹುಬಲಿ 2' ಕೋಟಿ ಕೋಟಿ ಕಲೆಕ್ಷನ್ ಮಾಡಿದ ಮೊದಲ ಸಿನಿಮಾ ಆಗಿದ್ದರೆ, ಆ ನಂತರ ಬಂದ 'ಸಾಹೋ' ಚಿತ್ರದ ಕಲೆಕ್ಷನ್ ಮೂಲಕ ಪ್ರಭಾಸ್ ಮತ್ತೊಮ್ಮೆ ದಾಖಲೆ ಬರೆದಿದ್ದಾರೆ. ಇದೀಗ 'ಆದಿಪುರುಷ್' ಮೂಲಕ ಮತ್ತೆ ಸದ್ದು ಮಾಡುತ್ತಿದ್ದಾರೆ.
ಇದನ್ನೂ ಓದಿ: Kangana Ranaut - ಮದುವೆ ಬಗ್ಗೆ ಬಹಿರಂಗಪಡಿಸಿದ ನಟಿ ಕಂಗನಾ ರಣಾವತ್
ಚಿತ್ರದಲ್ಲಿ ರಾಘವ್ ಪಾತ್ರದಲ್ಲಿ ಪ್ರಭಾಸ್, ಜಾನಕಿಯಾಗಿ ಕೃತಿ ಸನೋನ್, ಲಂಕೇಶ್ ಪಾತ್ರದಲ್ಲಿ ಸೈಫ್ ಅಲಿ ಖಾನ್ ಮತ್ತು ಲಕ್ಷ್ಮಣನ ಪಾತ್ರದಲ್ಲಿ ಸನ್ನಿ ಸಿಂಗ್, ಹನುಮಂತನ ಪಾತ್ರದಲ್ಲಿ ದೇವದತ್ತ ನಟಿಸಿದ್ದಾರೆ. ಟಿ ಸೀರಿಸ್ 500 ಕೋಟಿ ರೂ. ಬಜೆಟ್‌ನಲ್ಲಿ ಈ ಚಿತ್ರ ನಿರ್ಮಿಸಿದೆ. ಪಠಾಣ್, ದಿ ಕೇರಳ ಸ್ಟೋರಿ 2023ರ ಸೂಪರ್ ಹಿಟ್ ಸಿನಿಮಾ. ಆದಿಪುರುಷ್ ಕೂಡ ಈ ಸಾಲಿಗೆ ಸೇರುವ ವಿಶ್ವಾಸ ಅಭಿಮಾನಿಗಳು ಮತ್ತು ಚಿತ್ರತಂಡದ್ದು.