ಇಡೀ ಭಾರತೀಯ ಚಿತ್ರರಂಗ ಎದುರು ನೋಡುತ್ತಿರುವ ಸ್ಯಾಂಡಲ್ವುಡ್ನ ಹೈ ವೊಲ್ಟೇಜ್ ಚಿತ್ರ 'ಕಬ್ಜ'. ಅದರಲ್ಲೂ ವಿಶೇಷವಾಗಿ ದಕ್ಷಿಣ ಭಾರತದಲ್ಲಿ ಹವಾ ಸೃಷ್ಟಿಸಿರೋ ಕಬ್ಜ ಸಿನಿಮಾ ರಿಯಲ್ ಸ್ಟಾರ್ ಉಪೇಂದ್ರ ಅಭಿನಯದಲ್ಲಿ, ಆರ್ ಚಂದ್ರು ನಿರ್ದೇಶನದಲ್ಲಿ ನಿರ್ಮಾಣವಾಗಿರುವ ಪ್ಯಾನ್ ಇಂಡಿಯಾ ಸಿನಿಮಾ. ದಿ. ಪುನೀತ್ ರಾಜ್‍ಕುಮಾರ್ ಹುಟ್ಟಿದ ದಿನ ಮಾರ್ಚ್ 17ರಂದು ಈ ಪ್ಯಾನ್ ಇಂಡಿಯಾ ಸಿನಿಮಾ ವಿಶ್ವಾದ್ಯಂತ ಅದ್ಧೂರಿಯಾಗಿ ಬಿಡುಗಡೆ ಆಗಲಿದೆ.
ಈಗಾಗಲೇ ಟೀಸರ್ನಿಂದಲೇ ದಾಖಲೆ ಬರೆದಿರೋ ಕಬ್ಜ ಚಿತ್ರ ಕೆಲ ದಿನಗಳ ಹಿಂದೆ ಕಬ್ಜ ಕಬ್ಜ ಎಂಬ ಟೈಟಲ್ ಹಾಡನ್ನು ಬಿಡುಗಡೆ ಮಾಡಿತ್ತು. ರೆಟ್ರೋ ಅವತಾರದಲ್ಲಿ ರಿಯಲ್ ಸ್ಟಾರ್ ಉಪೇಂದ್ರ ಸಿನಿಪ್ರಿಯರಿಗೆ ದರ್ಶನ ಕೊಟ್ಟಿದ್ದರು. ಈ ಬುದ್ಧಿವಂತ ನಟನ ನಯಾ ಅವತಾರಕ್ಕೆ ಹೆಚ್ಚಿನ ಸಂಖ್ಯೆಯ ಅಭಿಮಾನಿಗಳು ಫಿದಾ ಆಗಿದ್ದಾರೆ. ಈ ಮಧ್ಯೆ ಕಬ್ಜ ಚಿತ್ರ ತಂಡದಿಂದ ಹೊಸ ವಿಷಯವೊಂದು ರಿವೀಲ್ ಆಗಿದೆ.
ಕಬ್ಜ ಸಿನಿಮಾದಲ್ಲಿ ತಾನ್ಯಾ ಡ್ಯಾನ್ಸ್: ಹೌದು, ನಿರ್ದೇಶಕ ಆರ್ ಚಂದ್ರು ಕಬ್ಜ ಚಿತ್ರದಲ್ಲಿ ಒಂದು ಸ್ಪೆಷಲ್ ಸಾಂಗ್ ಶೂಟ್ ಮಾಡಬೇಕು ಎಂದು ಹೇಳಿದ್ದರು. ಪ್ಯಾನ್ ಇಂಡಿಯಾ ಸಿನಿಮಾ ಆದ್ದರಿಂದ ಈ ಸ್ಪೆಷಲ್ ಸಾಂಗ್ನಲ್ಲಿ ಸೊಂಟ ಬಳುಕಿಸಲು ಪರಭಾಷೆಯ ಫೇಮಸ್ ನಟಿಯೊಬ್ಬರು ಬರಲಿದ್ದಾರೆ ಎಂದು ಹೇಳಿದ್ದರು. ಆದರೆ, ಆ ನಟಿ ಯಾರೆಂದು ನಿರ್ದೇಶಕ ಚಂದ್ರು ಸುಳಿವು ನೀಡಿರಲಿಲ್ಲ. ಫೈನಲಿ ಕಬ್ಜ ಚಿತ್ರದ ವಿಶೇಷ ಹಾಡಿನಲ್ಲಿ ಅಮರ್ ಚಿತ್ರದ ಬೆಡಗಿ ಹಾಗೂ ಬಸಣ್ಣಿ ಖ್ಯಾತಿಯ ತಾನ್ಯಾ ಹೋಪ್ (Tanya Hope) ಸೊಂಟ ಬಳುಕಿಸಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಮುಂದಿನ ವಾರದಲ್ಲಿ ಡೈರೆಕ್ಟರ್ ಚಂದ್ರು ಈ ಸ್ಪೆಷಲ್ ಹಾಡನ್ನು ಚಿತ್ರೀಕರಣ ಮಾಡಲು ಪ್ಲ್ಯಾನ್ ಮಾಡಿದ್ದಾರೆ. ರೆಟ್ರೋ ಬ್ಯಾಕ್ ಟ್ರಾಪ್ ಸೆಟ್ ಹಾಕಿ ನೂರಾರು ಡ್ಯಾನ್ಸರ್ ಮಧ್ಯೆ ಈ ಹಾಡನ್ನು ಚಿತ್ರೀಕರಣ ಮಾಡಲು ನಿರ್ದೇಶಕ ಆರ್ ಚಂದ್ರು ಪ್ಲ್ಯಾನ್ ಮಾಡಿದ್ದಾರೆ. ಈ ಹಾಡಿನಲ್ಲಿ ರಿಯಲ್ ಸ್ಟಾರ್ ಉಪೇಂದ್ರ ಕೂಡ ಕಾಣಿಸಿಕೊಳ್ಳಲಿದ್ದಾರೆ. ಸೌತ್ ಸಿನಿಮಾ ಇಂಡಸ್ಟ್ರಿಯ ಬಹು ಬೇಡಿಕೆಯ ಕೋರಿಯೋಗ್ರಾಫರ್ ಜಾನಿ ಮಾಸ್ಟರ್ ಈ ಹಾಡಿಗೆ ನೃತ್ಯ ಸಂಯೋಜನೆ ಮಾಡಲಿದ್ದಾರೆ.
ಈಗಾಗಲೇ ಚಿತ್ರದ ಹಿಂದಿ ವಿತರಣೆ ಹಕ್ಕನ್ನು ಬಾಲಿವುಡ್ ಖ್ಯಾತ ವಿತರಕ ಹಾಗೂ ನಿರ್ಮಾಪಕ ಆನಂದ್ ಪಂಡಿತ್ ದೊಡ್ಡ ಮೊತ್ತಕ್ಕೆ ಖರೀದಿಸಿದ್ದಾರೆ. ತೆಲುಗು ಅವತರಣಿಕೆಯ ವಿತರಣೆ ರೈಟ್ಸ್ ತೆಲುಗಿನ ಖ್ಯಾತ ನಟ ನಿತಿನ್ ತಂದೆ ಹೊತ್ತಿದ್ದಾರೆ.
ಇದನ್ನೂ ಓದಿ: 3 ಮಿಲಿಯನ್ ವೀಕ್ಷಣೆ ಕಂಡ 'ಕಬ್ಜ' ಚಿತ್ರದ ಮಾಸ್ ಸಾಂಗ್: ರೆಟ್ರೋ ಅವತಾರದಲ್ಲಿ ಅಬ್ಬರಿಸಿದ ರಿಯಲ್ ಸ್ಟಾರ್
1960 ಹಾಗೂ 80ರಲ್ಲಿ ನಡೆಯುವ ಕಥೆಯಾದ್ದರಿಂದ, ಅದ್ಧೂರಿ ಮೇಕಿಂಗ್ ಇರುವುದರಿಂದ ಈ ಚಿತ್ರ ಬಹು ದೊಡ್ಡ ಸ್ಟಾರ್ ಕಾಸ್ಟ್ ಹೊಂದಿದೆ. ರಿಯಲ್ ಸ್ಟಾರ್ ಒಬ್ಬ ಗ್ಯಾಂಗ್ಸ್ಟರ್ ಆಗಿದ್ದು, ಕಿಚ್ಚ ಸುದೀಪ್ ಖಡಕ್ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದಾರೆ. ಇನ್ನು ರಿಯಲ್ ಸ್ಟಾರ್ ಉಪ್ಪಿ ಜೋಡಿಯಾಗಿ ಶ್ರಿಯಾ ಶರಣ್ ನಟಿಸಿದ್ದಾರೆ. ಇನ್ನೂ ತೆಲುಗಿನ ಖ್ಯಾತ ನಟರಾದ ಪೊಸನಿ ಕೃಷ್ಣ ಮುರಳಿ ಮತ್ತು ಮುರಳಿ ಶರ್ಮಾ, ಐ ಮೂವಿ ಖ್ಯಾತಿಯ ಕಾಮರಾಜನ್, ನವಾಬ್ ಷಾ, ಜಗಪತಿ ಬಾಬು, ರಾಹುಲ್ ಜಗತಪ್, ಅನೂಪ್ ರೇವಣ್ಣ, ಜಾನ್ ಕೊಕ್ಕಿನ್, ರಾಹುಲ್ ದೇವ್, ನವೀನ್, ಕೋಟ ಶ್ರೀನಿವಾಸ್, ಜಯಪ್ರಕಾಶ್, ಕಾಟ್ ರಾಜು, ಸುಬ್ಬರಾಜು ಹೀಗೆ ದೊಡ್ಡ ಕಲಾವಿರ ದಂಡು ಇದೆ.
ಇದನ್ನೂ ಓದಿ: 'ವೇದ' ಈವೆಂಟ್ನಲ್ಲಿ ಕಣ್ಣೀರಿಟ್ಟ ಶಿವಣ್ಣ: ಸಮಾಧಾನಪಡಿಸಿದ ಬಾಲಯ್ಯ
ಎಂ.ಟಿ.ಬಿ ನಾಗರಾಜ್ ಅರ್ಪಿಸುವ, ಶ್ರೀ ಸಿದ್ದೇಶ್ವರ ಎಂಟರ್ಪ್ರೈಸಸ್ ಲಾಂಛನದಲ್ಲಿ ಆರ್ ಚಂದ್ರು ನಿರ್ದೇಶನದ ಜೊತೆಗೆ ಬಹು ಕೋಟಿ ವೆಚ್ಚದಲ್ಲಿ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಈ ಚಿತ್ರಕ್ಕೆ ಕೆ.ಜಿ.ಎಫ್ ಖ್ಯಾತಿಯ ರವಿ ಬಸ್ರೂರು ಸಂಗೀತ ನಿರ್ದೇಶನವಿದೆ. ಕಾರ್ಯಕಾರಿ ನಿರ್ಮಾಪಕರಾಗಿ ಮುನೀಂದ್ರ ಹಾಗೂ ಲೈನ್ ಪ್ರೊಡ್ಯೂಸರ್ ಆಗಿ ರಾಜಶೇಖರ್ ಕಾರ್ಯನಿರ್ವಹಿಸುತ್ತಿದ್ದಾರೆ. ಎ.ಜೆ.ಶೆಟ್ಟಿ ಛಾಯಾಗ್ರಹಣ, ಮಹೇಶ್ ಸಂಕಲನ, ರಾಜು ಸುಂದರಂ, ಗಣೇಶ್, ಶೇಖರ್ ನೃತ್ಯ ನಿರ್ದೇಶನ ಹಾಗೂ ರವಿವರ್ಮ, ವಿಕ್ರಂಮೋರ್, ವಿಜಯ್ ಸಾಹಸ ನಿರ್ದೇಶನವಿದೆ. ಒಟ್ಟಾರೆ ಕನ್ನಡ ಚಿತ್ರವೊಂದು ಬೃಹತ್ ಮಟ್ಟದಲ್ಲಿ ಮೂಡಿ ಬರುತ್ತಿರೋದು ಸ್ಯಾಂಡಲ್ವುಡ್ಗೆ ಒಂದು ಗೌರವ.