ಪಂಜಾಬ್‌ನ ಕತ್ರಿನಾ ಕೈಫ್ ಎಂದು ಜನಪ್ರಿಯವಾಗಿರುವ ಹಿಂದಿ ಬಿಗ್ಬಾಸ್ ಖ್ಯಾತಿಯ ಶೆಹನಾಜ್ ಗಿಲ್ ತಮ್ಮ ವಿಭಿನ್ನ ಅಭಿನಯಕ್ಕಾಗಿ ಹೆಸರುವಾಸಿ. ಅಲ್ಲದೇ ತಮ್ಮ ನಡೆ ನುಡಿಯಿಂದ ಬಹುತೇಕ ಮಂದಿಯ ಮನಸ್ಸಿಗೆ ಹತ್ತಿರವಾಗಿದ್ದಾರೆ. ಬಗೆ ಬಗೆಯ ಫೋಟೋಗಳನ್ನು ಶೇರ್ ಮಾಡುವ ಮೂಲಕವೂ ಶೆಹನಾಜ್ ಜನಪ್ರಿಯರಾಗಿದ್ದಾರೆ.
ಗೆಳೆಯ, ಬಿಗ್ ಬಾಸ್ 13ರ ವಿಜೇತ ಸಿದ್ದಾರ್ಥ್ ಶುಕ್ಲಾ ಹೃದಯಾಘಾತದಿಂದ ಇಹಲೋಕ ತ್ಯಜಿಸಿದ ಬಳಿಕ ವೃತ್ತಿ ಜೀವನದಲ್ಲಿ ಯಶಸ್ಸು ಕಾಣುತ್ತಿರುವ ಶೆಹನಾಜ್ ಗಿಲ್ ಹೆಸರೀಗ ನೃತ್ಯ ನಿರ್ದೇಶಕ ರಾಘವ್ ಜುಯಲ್ ಅವರೊಂದಿಗೆ ತಳಕುಹಾಕಿಕೊಂಡಿದೆ. ರಾಘವ್ ಜುಯಲ್ ಜೊತೆ ಶೆಹನಾಜ್ ಡೇಟಿಂಗ್ ಮಾಡುತ್ತಿದ್ದಾರೆಂಬ ಸುದ್ದಿ ಕಳೆದ ಕೆಲ ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಈ ವದಂತಿಗೆ ಬ್ರೇಕ್ ಹಾಕಿದ್ದಾರೆ ಶೆಹನಾಜ್ ಗಿಲ್.
- " class="align-text-top noRightClick twitterSection" data="
">
ಬುಧವಾರ ನಡೆದ ಕಾರ್ಯಕ್ರಮವೊಂದರ ಬಳಿಕ ಮಾಧ್ಯಮದವರು ಡೇಟಿಂಗ್ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿರುವ ಶೆಹನಾಜ್, ಯಾರಾದರೂ ಒಟ್ಟಿಗೆ ನಿಂತರೆ, ಒಟ್ಟಿಗೆ ನಡೆದುಕೊಂಡು ಹೋದರೆ, ಒಟ್ಟಿಗೆ ಸಂಭ್ರಮಿಸಿದರೆ ಅವರಿಬ್ಬರ ನಡುವೆ ಸಂಬಂಧವಿದೆಯೆಂದು ಅರ್ಥವಲ್ಲ. ಮಾಧ್ಯಮಗಳು ಏಕೆ ಸುಳ್ಳು ಹೇಳುತ್ತವೆ, ಪ್ರತೀ ಬಾರಿಯೂ ಕೆಲ ಮಾಧ್ಯಮಗಳು ಸುಳ್ಳು ಹೇಳುತ್ತವೆ. ನನಗೆ ಸಿಟ್ಟು ಬರುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ನಂತರ ತಮ್ಮ ವೈಯಕ್ತಿಕ ಜೀವನಕ್ಕೆ ಸಂಬಂಧಿಸಿದ ಪ್ರಶ್ನೆಗಳನ್ನು ಎತ್ತಬೇಡಿ ಎಂದು ಮಾಧ್ಯಮಗಳಿಗೆ ಮನವಿ ಮಾಡಿದರು.
ಇದನ್ನೂ ಓದಿ: ವ್ಹೀಲ್ಚೇರ್ನಲ್ಲಿ ಕಾಣಿಸಿಕೊಂಡ ಲೆಜೆಂಡರಿ ಬಾಕ್ಸರ್ ಮೈಕ್ ಟೈಸನ್: ಅಭಿಮಾನಿಗಳಲ್ಲಿ ಆತಂಕ