ETV Bharat / entertainment

ಟಾಲಿವುಡ್ ಕ್ವೀನ್ ಸಮಂತಾ ಅಭಿನಯದ 'ಶಾಕುಂತಲಂ' ನ.4ಕ್ಕೆ ರಿಲೀಸ್ - Samantha tweet

ದೇವ್‌ ಮೋಹನ್‌ ಮತ್ತು ಸಮಂತಾ ರುತ್‌ ಪ್ರಭು ಅಭಿನಯದ ಪೌರಾಣಿಕ ಕಥಾಹಂದರವುಳ್ಳ ಸಿನಿಮಾ 'ಶಾಕುಂತಲಂ' ನವೆಂಬರ್‌ 4ಕ್ಕೆ ತೆರೆ ಕಾಣಲಿದೆ.

Shaakuntalam release date announced
ಶಾಕುಂತಲಂ ಬಿಡುಗಡೆ ದಿನಾಂಕ ಅನೌನ್ಸ್​​
author img

By

Published : Sep 23, 2022, 3:02 PM IST

ಟಾಲಿವುಡ್ ಕ್ವೀನ್ ಸಮಂತಾ ರುತ್‌ ಪ್ರಭು ಅಭಿನಯದ ಪೌರಾಣಿಕ ಕಥಾಹಂದರವುಳ್ಳ ಸಿನಿಮಾ 'ಶಾಕುಂತಲಂ' ನವೆಂಬರ್‌ 4ಕ್ಕೆ ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಾಣಲಿದೆ.

ಶಾಕುಂತಲಂ ಸಿನಿಮಾ ಬಿಡುಗಡೆ ದಿನಾಂಕವನ್ನು ಸ್ವತಃ ಸಮಂತಾ ಅವರೇ ಟ್ವೀಟ್ ಮೂಲಕ ಹಂಚಿಕೊಂಡಿದ್ದಾರೆ. ಪ್ರೇಮ ಮಹಾಕಾವ್ಯ ಶಾಕುಂತಲಂ 2022ರ ನವೆಂಬರ್‌ 4ರಂದು ಜಗತ್ತಿನಾದ್ಯಂತ ತೆರೆಗೆ ಬರಲಿದೆ ಎಂದು ನಟಿ ಸಮಂತಾ ಟ್ವೀಟ್ ಮಾಡಿದ್ದಾರೆ. 'ನಿಮ್ಮ ಪ್ರೀತಿಗೆ ಧನ್ಯವಾದಗಳು. ನೀವೇ ನನ್ನ ಶಕ್ತಿ' ಎಂದು ಅಭಿಮಾನಿಗಳನ್ನು ಉದ್ದೇಶಿಸಿ ಇನ್ನೊಂದು ಟ್ವೀಟ್‌ ಮಾಡಿದ್ದಾರೆ.

ಇದನ್ನೂ ಓದಿ: 'ಬ್ರಹ್ಮಾಸ್ತ್ರ ಚಿತ್ರಕ್ಕಾಗಿ ಯಾವುದೇ ಸಂಭಾವನೆ ಪಡೆದಿಲ್ಲ': ಸ್ಪಷ್ಟನೆ ನೀಡಿದ ರಣಬೀರ್​ ಕಪೂರ್​

ಈ ಸಿನಿಮಾವನ್ನು ಗುಣಶೇಖರ್‌ ನಿರ್ದೇಶಿಸಿದ್ದಾರೆ. ಅವರೂ ಸಹ ಚಿತ್ರ ನವೆಂಬರ್‌ ನಾಲ್ಕರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ ಎಂದು ಖಚಿತಪಡಿಸಿದ್ದಾರೆ. ಮಹಾಕವಿ ಕಾಳಿದಾಸರ ಜನಪ್ರಿಯ 'ಶಾಕುಂತಲ' ನಾಟಕವನ್ನು ಆಧರಿಸಿದ ಸಿನಿಮಾ ಇದಾಗಿದ್ದು, ಸಮಂತಾ ಮುಖ್ಯ ಪಾತ್ರದಲ್ಲಿ ಅಭಿನಯಿಸಿದ್ದಾರೆ. ದುಷ್ಯಂತ ಪಾತ್ರದಲ್ಲಿ ದೇವ್‌ ಮೋಹನ್‌ ಕಾಣಿಸಿಕೊಂಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.