ಒಂದು ದಶಕ ಕಾಲ ವಿಭಿನ್ನ ಸಿನಿಮಾಗಳ ನಾಯಕಿ ಸ್ಥಾನ ವಹಿಸಿ ಬೆಳ್ಳಿತೆರೆ ಮೇಲೆ ಮಿಂಚಿದ ನಟಿ ರಮ್ಯಾ ಇತ್ತೀಚೆಗೆ ನಿರ್ಮಾಪಕಿಯಾಗಿ ಸೆಕೆಂಡ್ ಇನ್ನಿಂಗ್ಸ್ ಶುರು ಮಾಡುವುದಾಗಿ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ್ದರು. ಕೆಲ ವರ್ಷಗಳಿಂದ ಸಿನಿಮಾದಲ್ಲಿ ಅಭಿನಯಿಸದಿದ್ದರೂ ಕನ್ನಡ ಚಿತ್ರರಂಗಕ್ಕೆ ಸಪೋರ್ಟ್ ಮಾಡುತ್ತಾ ಬಂದಿರುವ ರಮ್ಯಾ ಈಗ ಮಾನ್ಸೂನ್ ರಾಗ ಸಿನಿಮಾಗೆ ಸಾಥ್ ಕೊಟ್ಟಿದ್ದಾರೆ. ಸೆಪ್ಟೆಂಬರ್ 16ಕ್ಕೆ ಚಿತ್ರಮಂದಿರಗಳಲ್ಲಿ ಅದ್ಧೂರಿ ಪ್ರದರ್ಶನ ಕಾಣಲು ಸಜ್ಜಾಗಿರುವ ಮಾನ್ಸೂನ್ ರಾಗ ಸಿನಿಮಾ ತಂಡಕ್ಕೆ ಆಲ್ ದಿ ಬೆಸ್ಟ್ ಹೇಳಿದ್ದಾರೆ.
-
Wishing the amazing duo @RachitaRamDQ & @Dhananjayaka the very best for #MonsoonRaaga releasing this friday @vikhyathforever #Sravindranath pic.twitter.com/gWJjZ1c29M
— Divya Spandana/Ramya (@divyaspandana) September 13, 2022 " class="align-text-top noRightClick twitterSection" data="
">Wishing the amazing duo @RachitaRamDQ & @Dhananjayaka the very best for #MonsoonRaaga releasing this friday @vikhyathforever #Sravindranath pic.twitter.com/gWJjZ1c29M
— Divya Spandana/Ramya (@divyaspandana) September 13, 2022Wishing the amazing duo @RachitaRamDQ & @Dhananjayaka the very best for #MonsoonRaaga releasing this friday @vikhyathforever #Sravindranath pic.twitter.com/gWJjZ1c29M
— Divya Spandana/Ramya (@divyaspandana) September 13, 2022
ಸದ್ಯ ಟೈಟಲ್, ಟ್ರೈಲರ್, ಹಾಡು ಜೊತೆಗೆ ಹಲವು ವಿಶೇಷತೆಗಳಿಂದ ಸಖತ್ ಟಾಕ್ ಆಗುತ್ತಿರುವ ಚಿತ್ರ ಎಂದರೆ ಅದು ಮಾನ್ಸೂನ್ ರಾಗ. ಡಾಲಿ ಧನಂಜಯ್ ಹಾಗೂ ಡಿಂಪಲ್ ಕ್ವೀನ್ ರಚಿತಾ ರಾಮ್ ಮೊದಲ ಬಾರಿಗೆ ಒಟ್ಟಾಗಿ ಸ್ಕ್ರೀನ್ ಹಂಚಿಕೊಂಡಿರುವ ಬಹು ನಿರೀಕ್ಷೆಯ ಸಿನಿಮಾ. ಟ್ರೈಲರ್, ಹಾಡುಗಳಿಂದಲೇ ಸಿನಿ ಪ್ರಿಯರ ಮೆಚ್ಚುಗೆಗೆ ಪಾತ್ರವಾಗಿರೋ ಮಾನ್ಸೂನ್ ರಾಗ ಸಿನಿಮಾ ಬಿಡುಗಡೆಗೆ ಸಜ್ಜಾಗಿದ್ದು, ಮೋಹಕ ತಾರೆ ರಮ್ಯಾ ಶುಭ ಹಾರೈಯಿಸಿದ್ದಾರೆ.
![Monsoon Raaga movie](https://etvbharatimages.akamaized.net/etvbharat/prod-images/16358133_thumbna.jpg)
ಇನ್ನೂ ಮೈಸೂರಿನಲ್ಲಿ ಧನಂಜಯ್ ಅಭಿನಯದ ಹೊಯ್ಸಳ ಸಿನಿಮಾ ಶೂಟಿಂಗ್ ಸ್ಪಾಟ್ಗೆ ರಮ್ಯಾ ಭೇಟಿ ನೀಡಿ ಅಚ್ಚರಿ ಮೂಡಿಸಿದ್ದರು. ಈಗ ಹಲವು ವಿಶೇಷತೆಗಳಿಗೆ ಸದ್ದು ಮಾಡುತ್ತಿರುವ ಮಾನ್ಸೂನ್ ರಾಗ ಚಿತ್ರಕ್ಕೆ ಬೆಂಬಲ ಕೊಡುತ್ತಿದ್ದಾರೆ.
ಇದನ್ನೂ ಓದಿ: ಕಮಲ್ ಹಾಸನ್ ನನ್ನನ್ನು 'ಕನ್ನ' ಎಂದು ಗುರುತಿಸಿದಾಗ ತುಂಬಾ ವಿಶೇಷ ಎನಿಸಿತು: ನಟಿ ಮಾಲಾಶ್ರೀ ಟ್ವೀಟ್
ಈಗಾಗಲೇ ಬಿಡುಗಡೆ ಆಗಿರುವ ಮಾನ್ಸೂನ್ ರಾಗ ಚಿತ್ರದ ಟ್ರೈಲರ್ನಲ್ಲಿ ಡಾಲಿ ಧನಂಜಯ್ ಪ್ರೇಮಿಯಾಗಿ ಕಾಣಿಸಿಕೊಂಡಿದ್ದಾರೆ. ರಚಿತಾ ರಾಮ್ ಲೈಂಗಿಕ ಕಾರ್ಯಕರ್ತೆ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಕೆಲವೊ ದೃಶ್ಯದಲ್ಲಿ ಧನಂಜಯ್, ರಚಿತಾ ರಾಮ್ ಬಹಳ ಚಾಲೆಂಜಿಂಗ್ ಆಗಿ ನಟಿಸಿದ್ದಾರೆ. ಅಚ್ಯುತ್ ಕುಮಾರ್ ಅವರು ಸೀರಿಯಸ್ ಆಗಿದ್ದೂ ನಗಿಸುತ್ತಾರೆ.
ಸುಹಾಸಿನಿ, ಅಚ್ಯುತ್ ಕುಮಾರ್ ಅವರ ಕಾಂಬಿನೇಶನ್ ಅದ್ಭುತವಾಗಿ ಮೂಡಿ ಬಂದಿದೆಯಂತೆ. ಯಶಾ ಶಿವಕುಮಾರ್ ರಾಗ ಸುಧಾ ಹಾಡಿನಲ್ಲಿ ಮಿಂಚಿದ್ದಾರೆ. ಈ ಚಿತ್ರಕ್ಕೆ ಅನೂಪ್ ಸೀಳಿನ್ ಸಂಗೀತ, ಕ್ಯಾಮರಾ ಮ್ಯಾನ್ ಎಸ್ ಕೆ ರಾವ್ ಛಾಯಾಗ್ರಹಣವಿದೆ. ಗುರು ಕಶ್ಯಪ್ ಈ ಚಿತ್ರದ ಸಂಭಾಷಣೆ ಬರೆದಿದ್ದು, ನಿರ್ಮಾಪಕ ವಿಖ್ಯಾತ್ ಅದ್ಧೂರಿ ವೆಚ್ಚದಲ್ಲಿ ಸಿನಿಮಾ ನಿರ್ಮಾಣ ಮಾಡಿದ್ದಾರೆ.