ETV Bharat / entertainment

'ಅಮ್ಮ ಮಗಳು ಸೇಮ್​ ಟು ಸೇಮ್​'; ಕ್ಯಾಮರಾಗೆ ಪೋಸ್​ ಕೊಡೋದ್ರಲ್ಲಿ ರಾಧಿಕಾ ಪಂಡಿತ್​ ಮೀರಿಸಿದ ಐರಾ - ಈಟಿವಿ ಭಾರತ ಕನ್ನಡ

Radhika Pandit: ನಟಿ ರಾಧಿಕಾ ಪಂಡಿತ್ ಮಗಳು ಐರಾ ಜೊತೆಗಿನ ಫೋಟೋವನ್ನು ಹಂಚಿಕೊಂಡಿದ್ದಾರೆ.

Radhika pandit shares cute pic
ರಾಧಿಕಾ ಪಂಡಿತ್
author img

By

Published : Aug 3, 2023, 4:35 PM IST

ಚಂದನವನದ ಎವರ್​ಗ್ರೀನ್​ ಬ್ಯೂಟಿಫುಲ್​ ನಟಿ ರಾಧಿಕಾ ಪಂಡಿತ್​. ಇವರು ಕೆಲವು ವರ್ಷಗಳಿಂದ ಸಿನಿ ರಂಗದಿಂದ ದೂರವೇ ಉಳಿದಿದ್ದಾರೆ. ಹಾಗಂತ ಅಭಿಮಾನಿಗಳಿಗೆ ರಾಧಿಕಾ ಮೇಲಿನ ಕ್ರೇಜ್​ ಕಮ್ಮಿಯಾಗಿಲ್ಲ. ಸ್ಯಾಂಡಲ್​ವುಡ್​ ರಾಕಿಂಗ್​ ಸ್ಟಾರ್​ ಯಶ್​ ಅವರನ್ನು ಮದುವೆಯಾದಾಗಿನಿಂದ ಸಂಸಾರ, ಮಕ್ಕಳು ಅಂತ ಫುಲ್​ ಬ್ಯುಸಿಯಾಗಿದ್ದಾರೆ. ಆದರೆ ತಮ್ಮ ಫ್ಯಾನ್ಸ್​ ಜೊತೆ ಸದಾ ಸಾಮಾಜಿಕ ಜಾಲತಾಣಗಳಲ್ಲಿ ಸಂಪರ್ಕದಲ್ಲಿದ್ದಾರೆ. ಹೊಸ ಫೋಟೋಗಳನ್ನು ಹಂಚಿಕೊಳ್ಳುತ್ತಾ ಅಭಿಮಾನಿಗಳಿಗೆ ಟ್ರೀಟ್​ ನೀಡುತ್ತಿರುತ್ತಾರೆ.

ಇದೀಗ ಮಗಳು ಐರಾ ಜೊತೆಗಿನ ಫೋಟೋವನ್ನು ಹಂಚಿಕೊಂಡಿದ್ದಾರೆ. ಸ್ಟಾರ್​ ಕಿಡ್ಸ್​ ಅಂದ್ರೆ ಹಾಗೆನೇ.. ಯಶ್​ ಮಗಳಿಗೂ ಈಗಾಗಲೇ ದೊಡ್ಡ ಅಭಿಮಾನಿ ಬಳಗ ಇದೆ. ಸಣ್ಣ ವಯಸ್ಸಾದರೂ, ದೊಡ್ಡ ಮಟ್ಟದಲ್ಲಿ ಜನಪ್ರಿಯತೆ ಪಡೆದುಕೊಂಡಿದ್ದಾರೆ. ರಾಧಿಕಾ ಮತ್ತು ಯಶ್​ ಮಕ್ಕಳ ಜೊತೆಗಿನ ಫೋಟೋ ಮತ್ತು ವಿಡಿಯೋ ಹಂಚಿಕೊಳ್ಳುತ್ತಲೇ ಇರುತ್ತಾರೆ. ಸದ್ಯ ರಾಧಿಕಾ ಹಂಚಿಕೊಂಡಿರುವ ಫೋಟೋ ಗಮನ ಸೆಳೆದಿದೆ.

ರಾಧಿಕಾ ಪಂಡಿತ್​ ಗಲ್ಲದ ಮೇಲೆ ಕೈ ಇಟ್ಟು ಪೋಸ್​ ಕೊಟ್ಟಿದ್ದಾರೆ. ಅದೇ ಮಾದರಿಯಲ್ಲಿ ಅಮ್ಮನನ್ನು ಅನುಕರಿಸುವಂತೆ ಐರಾ ಕೂಡ ಪೋಸ್​ ನೀಡಿದ್ದಾರೆ. ಕ್ಯಾಮರಾಗೆ ಪೋಸ್ ಕೊಡೋದ್ರಲ್ಲಿ ರಾಧಿಕಾ ಪಂಡಿತ್​ ಅವರನ್ನು ಮೀರಿಸಿದ್ದಾರೆ ಐರಾ. ಪುಟಾಣಿ ಚೆಲುವೆಯ ಕ್ಯೂಟ್​ನೆಸ್​ ನೋಡುಗರನ್ನು ಆಕರ್ಷಿಸಿದೆ. ಇಬ್ಬರು ಸಿಂಪಲ್​ ಆಗಿ ಕಾಣುತ್ತಿದ್ದು, ಮನೆಯಲ್ಲೇ ಫೋಟೋ ತೆಗೆದುಕೊಂಡಿದ್ದಾರೆ.

ಇದನ್ನೂ ಓದಿ: ಮಗನೊಂದಿಗೆ ಆಟ, ಮಗಳಿಗೆ ಮೇಕ​ಪ್​​: ಫ್ಯಾಮಿಲಿ ಮ್ಯಾನ್​ ರಾಕಿಂಗ್​ ಸ್ಟಾರ್ ಯಶ್​​: Photos

ರಾಧಿಕಾ ಮತ್ತು ಐರಾ ಫೋಟೋಗಳು 5 ಗಂಟೆಯಲ್ಲಿ 2 ಲಕ್ಷಕ್ಕೂ ಅಧಿಕ ಲೈಕ್ಸ್​ ಪಡೆದುಕೊಂಡಿದೆ. ಬಗೆ ಬಗೆಯ ಕಮೆಂಟ್​ಗಳು ಬಂದಿವೆ. 'ಇಬ್ಬರು ತುಂಬಾ ಕ್ಯೂಟ್​' ಎಂದು ಕೆಲವರು ಪ್ರತಿಕ್ರಿಯಿಸಿದ್ದಾರೆ. ಇನ್ನು ಕೆಲವರು 'ಅಮ್ಮ ಮಗಳು ಸೇಮ್​ ಟು ಸೇಮ್​' ಎಂದಿದ್ದಾರೆ. ಸ್ಯಾಂಡಲ್​ವುಡ್​ ನಟಿಯರಾದ ಮಾನ್ವಿತಾ ಕಾಮತ್​ ಮತ್ತು ಶಾನ್ವಿ ಶ್ರೀವಾತ್ಸವ್​, 'ಸೋ ಕ್ಯೂಟ್' ಎಂದು ಕಮೆಂಟ್​ ಮಾಡಿದ್ದಾರೆ. ಇನ್ನು ಕೆಲವರು 'ತಾಯಿಗೆ ತಕ್ಕ ಮಗಳು' ಎಂದಿದ್ದಾರೆ.​

ಚಂದನವನದ ಮಾದರಿ ದಂಪತಿ: ಯಶ್​ ಮತ್ತು ರಾಧಿಕಾ 'ಮೊಗ್ಗಿನ ಮನಸು' ಸಿನಿಮಾ ಮೂಲಕ ಜೊತೆಯಾಗಿ ಬೆಳ್ಳಿತೆರೆಗೆ ಎಂಟ್ರಿ ಕೊಟ್ಟರು. ಆ ಬಳಿಕ ಈ ಜೋಡಿ ಅಭಿನಯಿಸಿದ ಎಲ್ಲಾ ಸಿನಿಮಾಗಳು ಸೂಪರ್​ ಹಿಟ್​ ಆಗಿದ್ದವು. ಅದಾಗಲೇ ಇವರಿಬ್ಬರು ಜಸ್ಟ್​ ಪ್ರೆಂಡ್ಸ್​ ಅಲ್ಲ ಎಂಬುದು ಕನ್ನಡ ಪ್ರೇಕ್ಷಕರಿಗೆ ಅರಿವಾಗಿತ್ತು. 'ಮಿಸ್ಟರ್​ ಅಂಡ್​ ಮಿಸಸ್​ ರಾಮಾಚಾರಿ' ಚಿತ್ರ ಈ ಎಲ್ಲಾ ಗಾಸಿಪ್​ಗಳಿಗೆ ವಿದಾಯ ಹೇಳಿ ಕನ್ನಡಕ್ಕೆ ಹೊಸ ತಾರಾ ಜೋಡಿಯನ್ನು ನೀಡುವ ಭರವಸೆ ಕೊಟ್ಟಿತು.

ಇದಾಗಿ ಕೆಲವೇ ದಿನಗಳಲ್ಲಿ ಗೋವಾದಲ್ಲಿ ವಿಜೃಂಭಣೆಯಿಂದ ನಿಶ್ಚಿತಾರ್ಥ ಮಾಡಿಕೊಂಡರು. ಡಿಸೆಂಬರ್​ 9, 2016ರಂದು ಸಪ್ತಪದಿ ತುಳಿದು ವೈವಾಹಿಕ ಜೀವನಕ್ಕೆ ಮುನ್ನುಡಿ ಬರೆದರು. ತಾರಾ ದಂಪತಿಗೆ ಐರಾ ಮತ್ತು ಯಥರ್ವ ಎಂಬ ಇಬ್ಬರು ಮುದ್ದು ಮಕ್ಕಳಿದ್ದು, ಸುಖ ಸಂಸಾರ ನಡೆಸುತ್ತಿದ್ದಾರೆ.

ಇದನ್ನೂ ಓದಿ: 'ಜನ ದುಡ್ಡು ಕೊಟ್ಟು ಸಿನಿಮಾ ನೋಡ್ತಾರೆ, ಅದ್ಭುತ ಚಿತ್ರ ನೀಡುವ ಜವಾಬ್ದಾರಿ ನನ್ನ ಮೇಲಿದೆ': ಯಶ್​​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.