ETV Bharat / entertainment

ತಾಯಿಯಾಗಿ ಮಗಳೊಂದಿಗೆ, ಮಗಳಾಗಿ ತಂದೆಯೊಂದಿಗೆ ದೇಸಿ ಗರ್ಲ್ ಫೋಟೋ - ಮಾಲ್ತಿ ಮೇರಿ ಚೋಪ್ರಾ ಜೋನಾಸ್

ವಿಶ್ವ ಪುತ್ರಿಯರ ದಿನದ ನಿಮಿತ್ತ ಮಗಳು ಮಾಲ್ತಿ ಮತ್ತು ತಂದೆ ಅಶೋಕ್ ಚೋಪ್ರಾ ಅವರೊಂದಿಗಿನ ಚಿತ್ರಗಳನ್ನು ದೇಸಿ ಗರ್ಲ್ ಪ್ರಿಯಾಂಕಾ ಚೋಪ್ರಾ ಒಂದು ದಿನ ತಡವಾಗಿ(ಸೋಮವಾರ) ಶೇರ್ ಮಾಡಿದ್ದಾರೆ.

actress Priyanka Chopra photo with father and Daughter Malti Marie Chopra Jonas
ದೇಸಿ ಗರ್ಲ್ ಪ್ರಿಯಾಂಕಾ ಚೋಪ್ರಾ
author img

By

Published : Sep 27, 2022, 6:48 PM IST

Updated : Sep 27, 2022, 7:05 PM IST

ಬಾಲಿವುಡ್‌ನ ದೇಸಿ ಗರ್ಲ್ ಪ್ರಿಯಾಂಕಾ ಚೋಪ್ರಾ ಸಾಮಾಜಿಕ ಜಾಲತಾಣದಲ್ಲಿ ಸದಾ ಸಕ್ರಿಯರಾಗಿರುವ ತಾರೆ. ಇತ್ತೀಚಿನ ದಿನಗಳಲ್ಲಿ ಆಗಾಗ್ಗೆ ತಮ್ಮ ಮಗಳು ಮಾಲ್ತಿ ಮೇರಿ ಚೋಪ್ರಾ ಜೋನಾಸ್​ ರೊಂದಿಗೆ ಕಳೆದ ಕ್ಷಣಗಳ ಚಿತ್ರಗಳನ್ನು ಹಂಚಿಕೊಳ್ಳುತ್ತಲೇ ಇರುತ್ತಾರೆ. ಆದರೂ ಪ್ರಿಯಾಂಕಾ ಇನ್ನೂ ಮಗಳ ಮುಖವನ್ನು ಅಭಿಮಾನಿಗಳಿಗೆ ಸಂಪೂರ್ಣವಾಗಿ ತೋರಿಸಿಲ್ಲ.

actress Priyanka Chopra photo with father and Daughter Malti Marie Chopra Jonas
ಮುದ್ದು ಮಗಳೊಂದಿಗೆ ದೇಸಿ ಗರ್ಲ್ ಪ್ರಿಯಾಂಕಾ ಚೋಪ್ರಾ

ಇದೀಗ ವಿಶ್ವ ಪುತ್ರಿಯರ ದಿನದ (ಭಾನುವಾರ) ಅಂಗವಾಗಿ ಮಗಳು ಮಾಲ್ತಿ ಮತ್ತು ತಂದೆ ಅಶೋಕ್ ಚೋಪ್ರಾ ಅವರೊಂದಿಗಿನ ಚಿತ್ರಗಳನ್ನು ಒಂದು ದಿನ ತಡವಾಗಿ (ಸೋಮವಾರ) ಶೇರ್ ಮಾಡಿದ್ದಾರೆ.

ತಂದೆಯೊಂದಿಗೆ ದೇಸಿ ಗರ್ಲ್ ಪ್ರಿಯಾಂಕಾ ಚೋಪ್ರಾ

2013ರಲ್ಲಿ ಪ್ರಿಯಾಂಕಾ ತನ್ನ ತಂದೆ ಅಶೋಕ್ ಚೋಪ್ರಾ ಅವರನ್ನು ಕಳೆದುಕೊಂಡಿದ್ದರು. ಅವರ ಸಾವಿನ ನಂತರ ಪ್ರಿಯಾಂಕಾ ಆಗಾಗ್ಗೆ ತನ್ನ ತಂದೆಯೊಂದಿಗೆ ಕಳೆದ ನೆನಪುಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಪ್ರಿಯಾಂಕಾ ಚೋಪ್ರಾ ಅವರಿಗೆ ಈ ವರ್ಷದ ಡಾಟರ್ಸ್ ಡೇ ವಿಶೇಷ. ಏಕೆಂದರೆ ಅವರೀಗ ಒಬ್ಬ ತಾಯಿ. ಈ ಕ್ಷಣದಲ್ಲಿ ತಾಯಿಯಾಗಿ ಮಗಳೊಂದಿಗಿನ ಫೋಟೋ, ಓರ್ವ ಮಗಳಾಗಿ ತಂದೆಯೊಂದಿಗಿನ ಫೋಟೋ ಶೇರ್ ಮಾಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಭಾರೀ ಮೆಚ್ಚುಗೆ ಗಳಿಸಿದೆ.

ಮಾಲ್ತಿ ಮೇರಿಯೊಂದಿಗೆ ಸ್ಟಾರ್ ದಂಪತಿ

ನಟಿ ಪ್ರಿಯಾಂಕಾ ಚೋಪ್ರಾ ಇನ್​ಸ್ಟಾ ಸ್ಟೋರಿಯಲ್ಲಿ ಮಗಳು ಮಾಲ್ತಿಯನ್ನು ಮುದ್ದು ಮಾಡುತ್ತಿರುವಂತೆ ಒಂದು ಫೋಟೋ, ತಂದೆಯೊಂದಿಗೆ ಡ್ಯಾನ್ಸ್​ ಮಾಡುತ್ತಿರುವ ಮತ್ತೊಂದು ಚಿತ್ರ ಶೇರ್ ಮಾಡಿದ್ದು, ಕಾಮೆಂಟ್​ ವಿಭಾಗ ತುಂಬಿ ತುಳುಕುತ್ತಿದೆ. ಒಂದು ದಿನ ತಡವಾಗಿದೆ, ಆದರೆ ನನಗೆ ಪ್ರತಿ ದಿನ ಮಗಳ ದಿನ ಎಂದು ಪ್ರಿಯಾಂಕಾ ಬರೆದಿದ್ದಾರೆ.

ಇದನ್ನೂ ಓದಿ: ಮುದ್ದಾದ ಮಗಳೊಂದಿಗೆ ವೀಕೆಂಡ್ ಎಂಜಾಯ್​ ಮಾಡಿದ ದೇಸಿ ಗರ್ಲ್ ಪ್ರಿಯಾಂಕಾ ಚೋಪ್ರಾ

ಅಮೆರಿಕನ್ ಪಾಪ್​ ಗಾಯಕ ನಿಕ್ ಜೋನಾಸ್ ಅವರನ್ನು ಮದುವೆಯಾದ ನಾಲ್ಕು ವರ್ಷಗಳ ನಂತರ ಪ್ರಿಯಾಂಕಾ ಚೋಪ್ರಾ ಬಾಡಿಗೆ ತಾಯ್ತನದ ಮೂಲಕ ಮಗಳು ಮಾಲ್ತಿಯನ್ನು ಸ್ವಾಗತಿಸಿದರು. ಆದರೆ, ಈವರೆಗೆ ಮಗುವಿನ ಸಂಪೂರ್ಣ ಮುಖವನ್ನು ತೋರಿಸಿಲ್ಲ.

Last Updated : Sep 27, 2022, 7:05 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.