ಟಾಲಿವುಡ್ ಚಿತ್ರರಂಗದ ನ್ಯಾಚುರಲ್ ಸ್ಟಾರ್ ನಾನಿ ಅಭಿನಯದ ಮೆಗಾ ಪ್ರಾಜೆಕ್ಟ್ ‘ದಸರಾ’ ಸಿನಿಮಾ ಈಗಾಗಲೇ ಸಿನಿ ಪ್ರಿಯರಲ್ಲಿ ನಿರೀಕ್ಷೆ ಮೂಡಿಸಿದೆ. ಈ ಚಿತ್ರದ ಮೂಲಕ ನಾನಿ ಪ್ಯಾನ್ ಇಂಡಿಯಾ ಪ್ರೇಕ್ಷಕರನ್ನು ತಲುಪಲಿದ್ದು, ಮಾಸ್ ಅವತಾರದಲ್ಲಿ ರಂಜಿಸಲಿದ್ದಾರೆ. ಖಡಕ್ ಫಸ್ಟ್ ಲುಕ್ ಮೂಲಕ ಗಮನ ಸೆಳೆದಿರುವ ನಾನಿಗೆ ರಾಷ್ಟ್ರ ಪ್ರಶಸ್ತಿ ವಿಜೇತೆ ಕೀರ್ತಿ ಸುರೇಶ್ ಸಹ ನಟಿಯಾಗಿ ಅಭಿನಯಿಸುತ್ತಿದ್ದಾರೆ.

ಮಾಸ್ ಸಿನಿಮಾ ದಸರಾದಲ್ಲಿ ಕೀರ್ತಿ ಸುರೇಶ್ ಯಾವ ರೀತಿ ಕಾಣಸಿಗುತ್ತಾರೆ ಎಂಬ ಕುತೂಹಲ ಅವರ ಅಭಿಮಾನಿ ಬಳಗದಲ್ಲಿತ್ತು. ಆ ಕುತೂಹಲವನ್ನು ಹಾಗೆಯೇ ಕಾಪಾಡಿಕೊಂಡು ಬಂದಿದ್ದ ಚಿತ್ರತಂಡ ಕೀರ್ತಿ ಸುರೇಶ್ ಜನ್ಮದಿನದ ಪ್ರಯುಕ್ತ ಫಸ್ಟ್ ಲುಕ್ ರಿವೀಲ್ ಮಾಡಿದೆ. ನಾನಿ ಹೊಸ ಅವತಾರ ಖಡಕ್ ಲುಕ್ ಕಂಡು ಫಿದಾ ಆಗಿದ್ದ ಸಿನಿರಸಿಕರಿಗೆ, ಕೀರ್ತಿ ಸುರೇಶ್ ಲುಕ್ ಕೂಡ ಅಷ್ಟೇ ಮನಸೆಳೆದಿದೆ. ಚಿತ್ರದಲ್ಲಿ ವೆನ್ನಲ ಪಾತ್ರವನ್ನು ನಿಭಾಯಿಸುತ್ತಿದ್ದು ಹಳ್ಳಿ ಹುಡುಗಿಯಾಗಿ ಹಳದಿ ಸೀರೆಯಲ್ಲಿ ಮಿಂಚುತ್ತಿರುವ ಕೀರ್ತಿ ಅವತಾರಕ್ಕೆ ಎಲ್ಲರೂ ಕ್ಲೀನ್ ಬೋಲ್ಡ್ ಆಗಿದ್ದಾರೆ.
ಈಗಾಗಲೇ ಬಿಡುಗಡೆಯಾಗಿರುವ ನಾನಿ ಫಸ್ಟ್ ಲುಕ್, ಧೂಮ್ ದಾಮ್ ದೊಸ್ತಾನ ಹಾಡು ಸಿನಿ ಪ್ರಿಯರಿಂದ ಅದ್ಭುತ ರೆಸ್ಪಾನ್ ಪಡೆದುಕೊಂಡಿದೆ. ಇದೀಗ ಕೀರ್ತಿ ಸುರೇಶ್ ಲುಕ್ ಕೂಡ ಎಲ್ಲರ ಗಮನ ಸೆಳೆದಿದೆ. ಇವೆಲ್ಲವೂ ಸಿನಿಮಾ ಮೇಲಿನ ನಿರೀಕ್ಷೆಯನ್ನು ದುಪ್ಪಟ್ಟು ಮಾಡಿದೆ. ಶ್ರೀಕಾಂತ್ ಒಡೆಲಾ ನಿರ್ದೇಶಿಸುತ್ತಿರುವ ಈ ಚಿತ್ರ ಮಾಸ್ ಅಂಡ್ ಆಕ್ಷನ್ ಕಥಾಹಂದರ ಒಳಗೊಂಡಿದೆ. ಪ್ಯಾನ್ ಇಂಡಿಯಾ ಸಿನಿಮಾವಾಗಿದ್ದು, ಸಮುದ್ರಕನಿ, ಸಾಯಿಕುಮಾರ್, ಜರೀನಾ ವಹಾಬ್ ಸೇರಿದಂತೆ ದೊಡ್ಡ ತಾರಾಬಳಗ ಸಿನಿಮಾದಲ್ಲಿದೆ.
ಶ್ರೀಲಕ್ಷ್ಮೀ ವೆಂಕಟೇಶ್ವರ ಸಿನಿಮಾಸ್ ಬ್ಯಾನರ್ ನಡಿ ಸುಧಾಕರ್ ಚೆರುಕುರಿ ಚಿತ್ರವನ್ನು ಅದ್ದೂರಿಯಾಗಿ ನಿರ್ಮಾಣ ಮಾಡುತ್ತಿದ್ದಾರೆ. ಸಂತೋಷ್ ನಾರಾಯಣನ್ ಮ್ಯೂಸಿಕ್, ಸತ್ಯನ್ ಸೂರ್ಯನ್ ಕ್ಯಾಮೆರಾ ವರ್ಕ್, ನವೀನ್ ನೂಲಿ ಸಂಕಲನ, ಅನ್ಬರಿವ್ ಸಾಹಸ ನಿರ್ದೇಶನ, ವಿಜಯ್ ಚಗಂಟಿ ಕಾರ್ಯಕಾರಿ ನಿರ್ಮಾಣ ಚಿತ್ರಕ್ಕಿದೆ. 2023 ಮಾರ್ಚ್ 30ರಂದು ಸಿನಿಮಾ ಬಿಡುಗಡೆಯಾಗಲಿದೆ.
ಇದನ್ನೂ ಓದಿ: ನಾನಿ ಕನ್ನಡ ಚಿತ್ರರಂಗದ ಮತ್ತು ಕಾಂತಾರ ಬಗ್ಗೆ ಏನು ಹೇಳಿದ್ದಾರೆ ನೋಡಿ...!