ETV Bharat / entertainment

Keerthy Suresh: 'ಭೋಲಾ ಶಂಕರ್' ಸಿನಿಮಾ ಬಗ್ಗೆ ಮನಬಿಚ್ಚಿ ಮಾತನಾಡಿದ ನಟಿ ಕೀರ್ತಿ ಸುರೇಶ್​

Keerthy Suresh: 'ಭೋಲಾ ಶಂಕರ್​' ಸಿನಿಮಾದ ಕುರಿತು ಹಾಗೂ ಚಿರು ಜೊತೆ ತೆರೆ ಹಂಚಿಕೊಂಡ ಅನುಭವದ ಕುರಿತು ನಟಿ ಕೀರ್ತಿ ಸುರೇಶ್​ ಮಾತನಾಡಿದ್ದಾರೆ.

bhola shankar
ಭೋಲಾ ಶಂಕರ್​
author img

By

Published : Aug 6, 2023, 5:41 PM IST

ಸೌತ್​ ಸ್ಟಾರ್​ ನಟಿ ಕೀರ್ತಿ ಸುರೇಶ್​ ಅವರಿಗೆ '2023' ಲಕ್ಕಿ ಇಯರ್​ ಎಂದೇ ಹೇಳಬಹುದು. ಏಕೆಂದರೆ ಈ ವರ್ಷ ಇವರು ನಟಿಸಿದ ಎರಡೂ ಚಿತ್ರಗಳು ಗಲ್ಲಾಪೆಟ್ಟಿಗೆಯಲ್ಲಿ ಧೂಳೆಬ್ಬಿಸಿವೆ. ಮಾರ್ಚ್​ನಲ್ಲಿ ಬಿಡುಗಡೆಯಾದ 'ದಸರಾ' ಮತ್ತು ಜುಲೈನಲ್ಲಿ ತೆರೆ ಕಂಡ 'ನಾಯಕುಡು' ಸೂಪರ್​ ಹಿಟ್​ ಸಾಲಿಗೆ ಸೇರಿಕೊಂಡಿದೆ. ಇದೇ ಯಶಸ್ಸಿನಲ್ಲಿ ಮುನ್ನಡೆಯಲು ಟಾಲಿವುಡ್​ ಬ್ಯೂಟಿ ಸಿದ್ಧರಾಗಿದ್ದಾರೆ. ಇನ್ನೇನು ಕೆಲವೇ ದಿನಗಳಲ್ಲಿ ಮೆಗಾಸ್ಟಾರ್​ ಚಿರಂಜೀವಿ ತಂಗಿಯಾಗಿ ಪ್ರೇಕ್ಷಕರ ಮುಂದೆ ಬರಲಿದ್ದಾರೆ.

'ಭೋಲಾ ಶಂಕರ್' ಇದೊಂದು ಫ್ಯಾಮಿಲಿ ಎಂಟರ್​ಟೈನ್​ಮೆಂಟ್​ ಸಿನಿಮಾವಾಗಿದ್ದು, ಮೆಹರ್ ರಮೇಶ್ ಆ್ಯಕ್ಷನ್​ ಕಟ್ ಹೇಳಿದ್ದಾರೆ. ಚಿರುಗೆ ನಾಯಕಿಯಾಗಿ ಬಹುಭಾಷಾ ನಟಿ ತಮನ್ನಾ ಭಾಟಿಯಾ ನಟಿಸಿದ್ದಾರೆ. ಆಕ್ಷನ್​ ಥ್ರಿಲ್ಲರ್​ ಆಗಿ ತಯಾರಾಗುತ್ತಿರುವ ಚಿತ್ರ ಆಗಸ್ಟ್​ 11ರಂದು ತೆರೆಗೆ ಅಪ್ಪಳಿಸಲಿದೆ. ಶನಿವಾರ ಮಾಧ್ಯಮದೊಂದಿಗೆ ಮಾತನಾಡಿದ ನಟಿ,​ 'ಭೋಲಾ ಶಂಕರ್​' ಸಿನಿಮಾದ ಕುರಿತು ಹಾಗೂ ಚಿರು ಜೊತೆ ತೆರೆ ಹಂಚಿಕೊಂಡ ಅನುಭವದ ಕುರಿತು ಮಾತನಾಡಿದ್ದಾರೆ.

ಕೀರ್ತಿ ಸುರೇಶ್ ಮಾತು..: "ಸೂಪರ್​ಸ್ಟಾರ್​ ರಜನಿಕಾಂತ್​ ಜೊತೆ 'ಅಣ್ಣತ್ತೆ' (Annaatthe) ಸಿನಿಮಾ ಮಾಡುತ್ತಿದ್ದ ಸಮಯದಲ್ಲೇ 'ಭೋಲಾ ಶಂಕರ್'​ ಸಿನಿಮಾದಲ್ಲಿ ಕೆಲಸ ಮಾಡುವ ಅವಕಾಶ ಸಿಕ್ಕಿತು. ಚಿರಂಜೀವಿ ತಂಗಿಯಾಗಿ ನಟಿಸಲು ಹೇಳಿದಾಗ ತುಂಬಾ ಖುಷಿಯಾಯಿತು. ಆದರೆ ಅವರ ಜೊತೆ ಡ್ಯಾನ್ಸ್​ ಮಾಡುವ ಅವಕಾಶ ಸಿಗುತ್ತೋ, ಇಲ್ಲವೋ ಎಂಬ ಭಯ ನನ್ನಲ್ಲಿತ್ತು. ಆದರೆ ಅದೃಷ್ಟವಶಾತ್​ ನಾನು ಅವರ ಜೊತೆ ಎರಡು ಹಾಡುಗಳಿಗೆ ಕುಣಿದಿದ್ದೇನೆ. 'ಭೋಲಾ ಶಂಕರ್'​ ಅಣ್ಣ ತಂಗಿ ಬಾಂಧವ್ಯದ ಕಥೆ. ಆಕ್ಷನ್​, ಕಾಮಿಡಿ ಹೀಗೆ ಸಾಕಷ್ಟು ಕಮರ್ಷಿಯಲ್​ ಅಂಶಗಳಿವೆ. ಇದಲ್ಲದೇ ಹಲವು ತಾರೆಯರು ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ತಮನ್ನಾ ಮತ್ತು ಚಿರು ನಡುವಿನ ದೃಶ್ಯಗಳು ತುಂಬಾ ಮನರಂಜನೆ ನೀಡುವಂತಿದೆ. ಪ್ರೇಕ್ಷಕರನ್ನು ನಗಿಸಲಿದೆ" ಎಂದು ಹೇಳಿದರು.

"ನಾನು ಚಿರಂಜೀವಿ ಅವರ ಸಹೋದರಿಯಾಗಿ ನಟಿಸಿದ್ದೇನೆ. ಆದರೆ ನಾನು ಅವರನ್ನು ಸೆಟ್​ನಲ್ಲಿ ಚಿರು ಅವರೇ ಎಂದು ಕರೆಯುತ್ತಿದ್ದೆ. ಅಣ್ಣ ಅಂತ ಕರೆದರೆ ಅವರು ನನಗೆ ತಮಾಷೆಯಾಗಿ ಹೊಡೆಯುತ್ತಿದ್ದರು. ಪುನ್ನಮಿನಾಗು ಸಿನಿಮಾದಲ್ಲಿ ನನ್ನ ತಾಯಿ ಚಿರು ಸರ್​ ಜೊತೆ ನಟಿಸಿದ್ದರು. ಆಗ ನನಗೆ 16 ವರ್ಷ. ಆ ಸಮಯದಲ್ಲಿ ಚಿರು ಅವರು ನನ್ನನ್ನು ಚಿಕ್ಕ ಮಗುವಿನಂತೆ ನೋಡಿಕೊಳ್ಳುತ್ತಿದ್ದರು. ಅವರು ನನಗೆ ಬಹಳಷ್ಟು ತಾಳ್ಮೆಯನ್ನು ಕಲಿಸಿದ್ದಾರೆ. ಒಂದು ದಿನ ಅಮ್ಮ ಹೇಳಿದ ಈ ಎಲ್ಲಾ ವಿಷಯಗಳನ್ನು ಚಿರಂಜೀವಿ ಅವರಿಗೆ ಹೇಳಿದ್ದೆ. ಅವರು ತುಂಬಾ ಸಂತೋಷಪಟ್ಟರು. ಬಳಿಕ ನಿನ್ನ ತಾಯಿ ತುಂಬಾ ಮುಗ್ಧೆ, ನೀನು ಬಾರಿ ತುಂಟಿ ಎಂದು ಹೇಳಿದ್ದರು. ಚಿತ್ರದ ಶೂಟಿಂಗ್​ ವೇಳೆ ನನಗೆ ಅವರ ಮನೆಯಿಂದಲೇ ಊಟ ತರುತ್ತಿದ್ದರು. ಅದು ನನಗೆ ತುಂಬಾ ಇಷ್ಟ" ಎಂದು ಮನಬಿಚ್ಚಿ ಮಾತನಾಡಿದರು.

"ನನಗೆ ತುಂಬಾ ಜನ ಸ್ನೇಹಿತರಿದ್ದಾರೆ. ನನ್ನ ಬೆಳವಣಿಗೆಯಲ್ಲಿ ಅವರ ಪ್ರೋತ್ಸಾಹ ಮತ್ತು ಬೆಂಬಲ ಇದೆ. ಸಮಯ ಸಿಕ್ಕಾಗಲೆಲ್ಲಾ ಅವರೊಂದಿಗೆ ಸಮಯ ಕಳೆಯಲು ಇಷ್ಟಪಡುತ್ತೇನೆ. ನನ್ನ ಸಹೋದರನಂತೆ ನನಗೆ ಅನೇಕ ಸ್ನೇಹಿತರಿದ್ದಾರೆ. ಭೋಲಾ ಶಂಕರ್​ ಸಿನಿಮಾ ಚಿರಂಜೀವಿ ಜೊತೆಗೆ ಉತ್ತಮ ಸ್ನೇಹವನ್ನು ಸೃಷ್ಟಿಸಿತು. ಅವರು ನನ್ನ ತಾಯಿಗೆ ಉತ್ತಮ ಸ್ನೇಹಿತರು. ಈಗ ನನಗೂ ಅವರು ಫ್ರೆಂಡ್​. ಫ್ರೆಂಡ್​ಶಿಪ್​ ಡೇ ಅಂದ್ರೆ ವಿಶೇಷ ಆಚರಣೆ ಅಂತ ಗೊತ್ತಿಲ್ಲ. ಏಕೆಂದರೆ ನಾವೂ ವರ್ಷಪೂರ್ತಿ ಇದನ್ನು ಆಚರಿಸುತ್ತೇವೆ. ಹಾಗಾಗಿ ನನಗೆ ಪ್ರತಿದಿನ ಸ್ನೇಹಿತರ ದಿನ" ಎಂದು ನುಡಿದರು.

ಇದನ್ನೂ ಓದಿ: Bhola Shankar Trailer: ಮೆಗಾಸ್ಟಾರ್ ಚಿರಂಜೀವಿ ಅಭಿನಯದ 'ಭೋಲಾ ಶಂಕರ್' ಟ್ರೇಲರ್​ ರಿಲೀಸ್​​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.