ETV Bharat / entertainment

ವಂಚಕ ಸುಕೇಶನನ್ನು ಮದುವೆಯಾಗಲು ಮುಂದಾಗಿದ್ರಾ ನಟಿ ಜಾಕ್ವೆಲಿನ್​​ ಫರ್ನಾಂಡಿಸ್‌? - Jacqueline sukesh love story

ನಟಿ ಜಾಕ್ವೆಲಿನ್​​ ಫರ್ನಾಂಡಿಸ್‌ ಅವರು ಸುಕೇಶ್​ನನ್ನು ಮದುವೆಯಾಗಲು ಮುಂದಾಗಿದ್ದು, 'ಅವನು ತನ್ನ ಕನಸಿನ ಮನುಷ್ಯ' ಎಂದು ಭಾವಿಸಿದ್ದರು ಎಂದು ವರದಿಗಳು ತಿಳಿಸಿವೆ.

actress Jacqueline Fernandez was wanted to marry conman sukesh chandrashekar
ವಂಚಕ ಸುಕೇಶ್​ನನ್ನು ಮದುವೆಯಾಗಲು ಯೋಜಿದ್ದರೇ ನಟಿ ಜಾಕ್ವೆಲಿನ್​​ ಫರ್ನಾಂಡಿಸ್‌
author img

By

Published : Sep 17, 2022, 12:39 PM IST

Updated : Sep 17, 2022, 12:50 PM IST

ವಂಚಕ ಸುಕೇಶ್ ಚಂದ್ರಶೇಖರ್​​ಗೆ ಸಂಬಂಧಿಸಿದ 200 ಕೋಟಿ ರೂಪಾಯಿ ಅಕ್ರಮ ಹಣ ವರ್ಗಾವಣೆ ಪ್ರಕರಣದ ಆರೋಪಿಯಾಗಿರುವ ಬಾಲಿವುಡ್​ ನಟಿ ಜಾಕ್ವೆಲಿನ್​​ ಫರ್ನಾಂಡಿಸ್‌ ಈಗಾಗಲೇ ವಿಚಾರಣೆ ಎದುರಿಸಿ ದೇಶಾದ್ಯಂತ ಸುದ್ದಿಯಾಗಿದ್ದಾರೆ. ಸಿನಿಮಾಗಳ ಸಕ್ಸಸ್ ಜೊತೆಗೆ ವಿವಾದಗಳ ವಿಚಾರವಾಗಿಯೂ ಪ್ರತಿದಿನ ಹೊಸ ಹೊಸ ಸುದ್ದಿ ಮೂಲಕ ಸದ್ದು ಮಾಡುತ್ತಿದ್ದಾರೆ. ಇದೀಗ ವಂಚಕ ಸುಕೇಶ್ ಚಂದ್ರಶೇಖರ್​ನೊಂದಿಗೆ ಹೊಂದಿದ್ದ ಸಂಬಂಧದ ಬಗ್ಗೆ ಸುದ್ದಿಯಾಗಿದ್ದಾರೆ.

ಮೂಲಗಳ ಪ್ರಕಾರ, ನಟಿ ಜಾಕ್ವೆಲಿನ್ ಮತ್ತು ಡ್ಯಾನ್ಸರ್​ ನೋರಾ ಫತೇಹಿ ವಿಚಾರಣೆ ನಡೆದಿದ್ದು, ಇಬ್ಬರೂ ಪ್ರಕರಣದಲ್ಲಿ ನೇರವಾಗಿ ಭಾಗಿಯಾಗಿಲ್ಲ ಎಂಬುದು ಬಹಿರಂಗವಾಗಿದೆ. ಆದರೆ ಸುಕೇಶ್-ಜಾಕ್ವೆಲಿನ್ ಅವರ ವೈಯಕ್ತಿಕ ವಿಷಯಗಳು ಬಹಿರಂಗವಾಗಿವೆ. ಜಾಕ್ವೆಲಿನ್ ಅವರು ಸುಕೇಶ್​ನನ್ನು ಮದುವೆಯಾಗಲು ಮುಂದಾಗಿದ್ದರು. 'ಅವನು ತನ್ನ ಕನಸಿನ ಮನುಷ್ಯ' ಎಂದು ಭಾವಿಸಿದ್ದರು ಎಂದು ಮೂಲಗಳು ತಿಳಿಸಿವೆ.

ಸುಕೇಶ್ ಜಾಕ್ವೆಲಿನ್‌ಗೆ ಕೋಟ್ಯಂತರ ರೂಪಾಯಿ ಬೆಲೆಬಾಳುವ ಉಡುಗೊರೆಗಳು ಮತ್ತು ಅನೇಕ ದುಬಾರಿ ಆಭರಣ ಉಡುಗೊರೆಗಳನ್ನು ನೀಡಿದ್ದಾನೆ ಎಂದು ಇಡಿ ಆರೋಪಪಟ್ಟಿ ಬಹಿರಂಗಪಡಿಸಿದೆ. ಸುಕೇಶ್​ನ ಕ್ರಿಮಿನಲ್​ ಹಿನ್ನೆಲೆ ತಿಳಿದ ಬಳಿಕ ಜಾಕ್ವೆಲಿನ್​ ಸುಕೇಶ್​ನೊಂದಿಗಿದ್ದ ಸ್ನೇಹವನ್ನು ಮುಂದುವರಿಸಿದ್ದರು. ಆದರೆ ​ನೋರಾ ಫತೇಹಿ ಸಂಬಂಧವನ್ನು ಕಡಿತಗೊಳಿಸಿದ್ದರು ಎನ್ನಲಾಗ್ತಿದೆ.

ಇದನ್ನೂ ಓದಿ: ಸುಕೇಶ್‌ ಬಹುಕೋಟಿ ವಂಚನೆ ಕೇಸ್: ಜಾಕ್ವೆಲಿನ್, ನೋರಾ​ ಬಳಿಕ ನಿಕ್ಕಿ ತಂಬೋಲಿ ಹೆಸರು!

Last Updated : Sep 17, 2022, 12:50 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.