ETV Bharat / entertainment

Haniska Motwani: ಮಹಿಳಾ ಪ್ರಧಾನ ಸಿನಿಮಾದಲ್ಲಿ ನಟಿ ಹನ್ಸಿಕಾ ಮೊಟ್ವಾನಿ - ದೊಡ್ಡ ದೊಡ್ಡ ಸ್ಟಾರ್​ ನಟರು

ಮದುವೆ ಬಳಿಕ ನಟಿ ಹನ್ಸಿಕಾ ತಮ್ಮ 51ನೇ ಚಿತ್ರಕ್ಕೆ ಸಹಿ ಹಾಕಿದ್ದಾರೆ. ಈ ಚಿತ್ರ ಮಹಿಳಾ ಕೇಂದ್ರಿತ ಚಿತ್ರ ಎಂಬುದು ಮತ್ತೊಂದು ವಿಶೇಷ.

Actress Haniska Motwani playing in female lead cinema Man

author img

By

Published : Jun 14, 2023, 11:19 AM IST

ಚೆನ್ನೈ: ಒಟಿಟಿ ಫ್ಲಾಟ್​ಫಾರ್ಮ್​​ಗಳು ಹೆಚ್ಚಾದ ಬಳಿಕ ವೆಬ್​ ಸಿರೀಸ್​ ಪ್ರೇಕ್ಷಕರನ್ನು ಆಕರ್ಷಿಸುತ್ತಿದೆ. ಇದೇ ಕಾರಣದಿಂದ ದೊಡ್ಡ ದೊಡ್ಡ ಸ್ಟಾರ್​ ನಟರು ಇದೀಗ ವೆಬ್​ ಸಿರೀಸ್​ನಲ್ಲಿ ಕೆಲಸ ಮಾಡಲು ಆರಂಭಿಸಿದ್ದಾರೆ. ಇದೀಗ ಈ ಸಾಲಿಗೆ ಬಾಲ ನಟಿಯಾಗಿ ಸಿನಿಮಾ ಪ್ರವೇಶ ಮಾಡಿ, ಹಿರೋಯಿನ್​ ಆಗಿ ಮಿಂಚಿದ ನಟಿ ಕೂಡ ಸೇರಲು ಸಿದ್ದರಾಗಿದ್ದಾರೆ. ಅವರೇ ನಟಿ ಹನ್ಸಿಕಾ ಮೊಟ್ವಾನಿ.

ಇತ್ತೀಚೆಗಷ್ಟೇ ವಿವಾಹ ಬಂಧನಕ್ಕೆ ಒಳಗಾದ ನಟಿ ಹನ್ಸಿಕಾ ಮತ್ತೊಂದು ಹೊಸ ಚಿತ್ರಕ್ಕೆ ಸಹಿ ಹಾಕಿದ್ದಾರೆ. ಇದರ ಬೆನ್ನಲ್ಲೇ ದಕ್ಷಿಣ ಭಾರತದ ಸಿನಿಮಾಗಳಲ್ಲಿ ಈಗಾಗಲೇ ಹಲವು ಹಿಟ್​ ನೀಡಿದ ಈ ಚೆಲುವೆ ವೆಬ್​ ಸಿರೀಸ್​ನಲ್ಲಿ ನಟಿಸಲು ಸಿದ್ದರಾಗಿದ್ದಾರೆ. ಸದ್ಯ ಅವರು 'ಮ್ಯಾನ್'​​ ಚಿತ್ರದಲ್ಲಿ ಅವರು ನಟಿಸುತ್ತಿದ್ದಾರೆ. ಇದು ಮಹಿಳಾ ಪ್ರಧಾನ ಸಿನಿಮಾವಾಗಿದ್ದರೂ, ಚಿತ್ರದ ಹೆಸರು 'ಮ್ಯಾನ್'​ ಎನ್ನುವುದು ವಿಪರ್ಯಾಸವಾಗಿದೆ. ಇದರ ಬೆನ್ನಲ್ಲೆ ಅವರು 'ಎಂವೈ3' ಎಂಬ ವೆಬ್​ ಸಿರೀಸ್​ನಲ್ಲಿ ಕೂಡ ಅವರು ಕಾಣಿಸಿಕೊಳ್ಳಲಿದ್ದಾರೆ. ಇದು ರೋಮ್ಯಾಂಟಿಕ್​ ಕಾಮಿಡಿ ಕಥೆಯನ್ನು ಹೊಂದಿದ್ದು, ಕೊರಿಯನ್​ ಡ್ರಾಮಾ 'ಐ ಅಮ್​ ನಾಟ್​ ಎ ರೊಬೋಟ್'​​ ಕಥೆಯನ್ನು ಇದು ಹೇಳುತ್ತದೆ.

ಇತ್ತೀಚಿಗೆ ತಮ್ಮ ಸಿನಿ ಉದ್ಯಮದಲ್ಲಿನ ತಮ್ಮ ಅನುಭವದ ಕುರಿತು ಮಾತನಾಡಿರುವ ನಟಿ ಹನ್ಸಿಕಾ, ಎರಡು ದಶಕಗಳ ಕಾಲ ಉತ್ತಮವಾದ ಉದ್ಯಮದಲ್ಲಿ ನಾನು ಕೆಲಸ ಮಾಡುತ್ತಿದ್ದೇನೆ. ನನ್ನ ವೃತ್ತಿ ಜೀವನದಲ್ಲಿ ಏರು ಪೇರುಗಳನ್ನ ಕಂಡಿದ್ದೇನೆ. ಆದರೆ, ಈ ಪಯಣ ಮಾತ್ರ ಅದ್ಬುತ. ಇದು ನನಗೆ ಸಾಕಷ್ಟು ಸಹನೆಯನ್ನು ಕಲಿಸಿಕೊಟ್ಟಿತು. ಜೊತೆಗೆ ಸದಾ ಹೇಗೆ ಮುನ್ನಡೆಯ ಬೇಕು. ಹೇಗೆ ಕಷ್ಟ ಪಟ್ಟು ಕೆಲಸ ಮಾಡಬೇಕು ಎಂದು ಕಲಿಸಿತು. ಇಲ್ಲಿ ಕಲಿತ ಪಾಠಗಳನ್ನು ನಾನು ಬೇರೆ ಕಡೆಯಲ್ಲಿ ಕಲಿಯಲು ಸಾಧ್ಯವಾಗುವುದಿಲ್ಲ ಎಂದರು.

ಇನ್ನು ತಮ್ಮ ಮುಂದಿನ ಚಿತ್ರ ಮ್ಯಾನ್​ ಕುರಿತು ಮಾತನಾಡಿದ ಅವರು, ಇದನ್ನು ಈಗೊರ್​​ ನಿರ್ದೇಶನ ಮಾಡುತ್ತಿದ್ದರೆ. ಮಹಿಳಾ ಪ್ರಧಾನ ಕಥೆಯಾಗಿರುವುದರಿಂದ ಚಿತ್ರದಲ್ಲಿನ ಜವಾಬ್ದಾರಿ ಹೆಚ್ಚಿತು ಎಂದಿದ್ದಾರೆ. ನಾನು ಮಹಿಳಾ ಪ್ರಧಾನ ಸಿನಿಮಾ ಮಾಡುವಾಗ, ಹೆಚ್ಚು ಕೇಂದ್ರೀಕೃತ ಪಾತ್ರವನ್ನು ಹೊಂದಿರುತ್ತೇನೆ. ಇದರಿಂದ ಖುಷಿಯಾಗಿದ್ದೇನೆ. ಇದೇ ವೇಳೆ ಜವಾಬ್ದಾರಿ ಕೂಡ ಹಿಂದಿಗಿಂತಲೂ ಹೆಚ್ಚಿರುತ್ತದೆ. ಇಂತಹ ಸವಾಲುಗಳನ್ನು ನಿರ್ವಹಿಸಲು ನಾನು ಕೂಡ ಸಿದ್ದಳಾಗಿರುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಇನ್ನು ಮ್ಯಾನ್​​ ಚಿತ್ರದ ಫಸ್ಟ್​ ಲುಕ್​ ಕೂಡ ಬಿಡುಗಡೆಯಾಗಿದ್ದು, ಚಿತ್ರದ ಪೋಸ್ಟರ್​ ನೋಡಿದಾಗ ಇದು ಆ್ಯಕ್ಷ್ಯನ್​ ಥ್ರಿಲ್ಲರ್​​ ಎಂಬುದು ತಿಳಿದು ಬರುತ್ತಿದೆ. ಇನ್ನು ಈ ಚಿತ್ರದ ಪೋಸ್ಟರ್​ ಅನ್ನು ನಟಿ ಕೂಡ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಬೇಟೆಯಾಡಬೇಕು ಅಥವಾ ಬೇಟೆಯಾಗಬೇಕು. ಸತ್ಯಕ್ಕೆ ಒಂದು ಹೆಜ್ಜೆ ಹತ್ತಿರವಾದರೆ, ಅಪಾಯವೂ ಹತ್ತಿರ ಎಂದು ಕ್ಯಾಪ್ಷನ್​ ಬರೆದಿದ್ದಾರೆ. ಇನ್ನು ಈ ಚಿತ್ರ ಹನ್ಸಿಕಾ ಅಭಿನಯದ 51ನೇ ಚಿತ್ರವಾಗಿದೆ.

ಇದನ್ನೂ ಓದಿ: ಶಾರುಖ್ ಮನ್ನತ್​ ಬಂಗಲೆಯೆದುರು ನಿಂತ Swiggy ಡೆಲಿವರಿ ಏಜೆಂಟ್ಸ್‌, ಯಾಕೆ ಗೊತ್ತಾ?

ETV Bharat Logo

Copyright © 2025 Ushodaya Enterprises Pvt. Ltd., All Rights Reserved.