ETV Bharat / entertainment

ಆಸ್ಪತ್ರೆಯಿಂದ ಆಲಿಯಾ ಡಿಸ್ಚಾರ್ಜ್​​.. ಮಗುವನ್ನು ಸ್ವಾಗತಿಸಲು ಮನೆಯಲ್ಲಿ ಭರ್ಜರಿ ತಯಾರಿ - Aliya ranbir baby

ಹೆಚ್​ ಎನ್​ ರಿಲಯನ್ಸ್​​​​​​ ಆಸ್ಪತ್ರೆಯಿಂದ ನಟಿ ಆಲಿಯಾ ಭಟ್ ಡಿಸ್ಚಾರ್ಜ್ ಆಗಿದ್ದಾರೆ.

Actress Aliya Bhatt discharge from hospital
ಆಸ್ಪತ್ರೆಯಿಂದ ಆಲಿಯಾ ಡಿಸ್ಚಾರ್ಜ್
author img

By

Published : Nov 10, 2022, 12:24 PM IST

Updated : Nov 10, 2022, 4:38 PM IST

ಬಾಲಿವುಡ್ ಪವರ್​ಫುಲ್​ ಕಪಲ್​ ರಣ್​ಬೀರ್​ ಕಪೂರ್​ ಮತ್ತು ಆಲಿಯಾ ಭಟ್ ನವೆಂಬರ್​​ 6ರಂದು ಪೋಷಕರಾಗಿ ಭಡ್ತಿ ಪಡೆದಿರುವುದು ಎಲ್ಲರಿಗೂ ತಿಳಿದಿರುವ ವಿಚಾರ.​ ಇಂದು ಮುಂಬೈನ ಹೆಚ್​ಎನ್​ ರಿಲಯನ್ಸ್​​​​​​ ಆಸ್ಪತ್ರೆಯಿಂದ ಆಲಿಯಾ ಡಿಸ್ಚಾರ್ಜ್​ ಆಗಿ ಬಾಂದ್ರಾ ನಿವಾಸ ತಲುಪಿದ್ದು, ಕುಟುಂಬಸ್ಥರಲ್ಲಿ ಸಂತಸ ದುಪ್ಪಟ್ಟಾಗಿದೆ.

Actress Aliya Bhatt discharge from hospital
ಆಸ್ಪತ್ರೆಯಿಂದ ಆಲಿಯಾ ಡಿಸ್ಚಾರ್ಜ್

ಕಳೆದ ಏಪ್ರಿಲ್​​ 14ರಂದು ಬಾಂದ್ರಾ ನಿವಾಸದಲ್ಲಿ ನಟ ರಣ್​ಬೀರ್​ ಕಪೂರ್​ ಅವರೊಂದಿಗೆ ವೈವಾಹಿಕ ಜೀವನ ಆರಂಭಿಸಿದ ನಟಿ ಆಲಿಯಾ ಭಟ್ ನವೆಂಬರ್​ 6ರಂದು ಬೆಳಗ್ಗೆ 7:30ಕ್ಕೆ ಮುಂಬೈನ ಹೆಚ್​ಎನ್​ ರಿಲಯನ್ಸ್​​​​​​ ಆಸ್ಪತ್ರೆಗೆ ತಲುಪಿ, ಮಧ್ಯಾಹ್ನ 12 ಗಂಟೆ ಹೊತ್ತಿಗೆ ಪುತ್ರಿಗೆ ಜನ್ಮ ನೀಡಿದರು. ನಾಲ್ಕು ದಿನಗಳ ಬಳಿಕ ಇಂದು ಆಸ್ಪತ್ರೆಯಿಂದ ಮನೆಗೆ ತಲುಪಿದ್ದು, ಪಾಪರಾಜಿಗಳ ಕಣ್ಣಿಗೆ ಬಿದ್ದಿದ್ದಾರೆ. ಆಲಿಯಾ ಅವರ ಮುಖದಲ್ಲಿ ತಾಯಿಯಾಗಿರುವ ಹೊಳಪು ಗೋಚರಿಸಿದೆ. ಆಲಿಯಾ ಮೊದಲ ಬಾರಿಗೆ ಮೇಕಪ್ ಇಲ್ಲದ ಲುಕ್​ನಲ್ಲಿ ಕಾಣಿಸಿಕೊಂಡಿದ್ದಾರೆ.

ಪೋಷಕರಾದ ಖುಷಿಯಲ್ಲಿ ಬಾಲಿವುಡ್​ ಜೋಡಿ

ಇದನ್ನೂ ಓದಿ: ಹೆಣ್ಣು ಮಗುವಿಗೆ ಜನ್ಮ ನೀಡಿದ ಆಲಿಯಾ ಭಟ್: ರಾಲಿಯಾ ಕುಟುಂಬದಲ್ಲಿ ಸಂತಸ

ಮನೆಯಲ್ಲಿ ರಾಲಿಯಾ ದಂಪತಿ ಜೊತೆ ಮಗುವನ್ನು ಸ್ವಾಗತಿಸಲು ಭರ್ಜರಿ ತಯಾರಿ ನಡೆದಿತ್ತು ಎಂದು ಮೂಲಗಳು ಹೇಳಿವೆ. ದಂಪತಿ ಇನ್ನೂ ತಮ್ಮ ಮಗಳನ್ನು ಅಭಿಮಾನಿಗಳಿಗೆ ತೋರಿಸಿಲ್ಲ. ಈ ಜೋಡಿ ಯಾವಾಗ ತಮ್ಮ ಪುತ್ರಿಯ ಫೋಟೋ ಹಂಚಿಕೊಳ್ಳುತ್ತಾರೆಂದು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.

ಇದನ್ನೂ ಓದಿ: ಏಳು ಸಮುದ್ರಗಳ ದಾಟಿ ಬೆಳಗುತ್ತಿರುವ ಆಲಿಯಾ ಭಟ್​ ಲುಕ್: ಆದರೆ ಇವರು ಅವರಲ್ಲ!

Last Updated : Nov 10, 2022, 4:38 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.