ಬಾಲಿವುಡ್ ತಾರಾ ದಂಪತಿ ರಣ್ಬೀರ್ ಕಪೂರ್ ಮತ್ತು ಆಲಿಯಾ ಭಟ್ ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಹೆರಿಗೆ ದಿನಾಂಕ ಹತ್ತಿರ ಬಂದಿದ್ದು, ಆಲಿಯಾ ಭಟ್ ಅವರನ್ನು ಮುಂಬೈನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಸೂಪರ್ ಹಿಟ್ 'ಬ್ರಹ್ಮಾಸ್ತ್ರ' ಕಪಲ್ 'ರಾಲಿಯಾ' ಮುಂಬೈನ ಹೆಚ್.ಎನ್ ರಿಲಯನ್ಸ್ ಆಸ್ಪತ್ರೆಗೆ ಮುಂಜಾನೆ ತಲುಪಿದ್ದಾರೆ. ಆಲಿಯಾ ಇಂದೇ ಮಗುವಿಗೆ ಜನ್ಮ ನೀಡುವ ನಿರೀಕ್ಷೆಯಿದೆ. ಇಬ್ಬರ ಕುಟುಂಬಸ್ಥರು ಕೂಡ ಆಸ್ಪತ್ರೆಗೆ ಆಗಮಿಸಿದ್ದಾರೆ.
ಬಹು ದಿನಗಳ ಕಾಲ ಡೇಟಿಂಗ್ ನಡೆಸಿ ಬಾಲಿವುಡ್ನ ಪ್ರಣಯ ಪಕ್ಷಿಗಳಾಗಿ ಗುರುತಿಸಿಕೊಂಡ ಈ ಜೋಡಿ ಏಪ್ರಿಲ್ 14ರಂದು ಮುಂಬೈನ ಬಾಂದ್ರಾದ ಮನೆಯಲ್ಲಿಯೇ ಸ್ನೇಹಿತರು, ಕುಟುಂಬ ಸದಸ್ಯರ ಸಮ್ಮುಖದಲ್ಲಿ ಸರಳವಾಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಇದಾದ ಬಳಿಕ, ಜೂನ್ 27ರಂದು ತಾವು ಪೋಷಕರಾಗಲಿದ್ದೇವೆ ಎಂಬ ಶುಭ ಸುದ್ದಿ ಹಂಚಿಕೊಂಡಿದ್ದರು. ಇತ್ತೀಚೆಗೆ ಮನೆಯಲ್ಲಿಯೇ ಸರಳವಾಗಿ ಆಲಿಯಾ ಅವರ ಸೀಮಂತ ಶಾಸ್ತ್ರವೂ ನಡೆದಿತ್ತು.
ಇದನ್ನೂ ಓದಿ: 'ವೆಸ್ಟಿಬುಲರ್ ಹೈಪೋಫಂಕ್ಷನ್' ಸಮಸ್ಯೆಯಿಂದ ಬಳಲುತ್ತಿರುವ ನಟ ವರುಣ್ ಧವನ್