ETV Bharat / entertainment

'ಅಪ್ಪಾ, ನಿನಗಿಂತ ನಾನೇ ಸ್ಟ್ರಾಂಗ್​'... ಯಶ್​​ ಪುತ್ರನ ಕ್ಯೂಟ್ ವಿಡಿಯೋ ವೈರಲ್ - yash son yatharv

ರಾಕಿಂಗ್​ ಸ್ಟಾರ್​ ಯಶ್​​ ಮತ್ತು ಪುತ್ರ ಯಥರ್ವ್ ಕ್ಯೂಟ್​ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ.

actor yash son cute video
ಯಶ್​​ ಪುತ್ರನ ಕ್ಯೂಟ್ ವಿಡಿಯೋ
author img

By

Published : Feb 5, 2023, 5:44 PM IST

ಕನ್ನಡ ಚಿತ್ರರಂಗದ ರಾಕಿಂಗ್​ ಸ್ಟಾರ್​ ಯಶ್​​ ಕೆಜಿಎಫ್​ ಸರಣಿ ಚಿತ್ರಗಳ ಮೂಲಕ ಪ್ಯಾನ್​ ಇಂಡಿಯಾ ಸ್ಟಾರ್​ ಆಗಿ ಹೊರಹೊಮ್ಮಿದ್ದಾರೆ. ಪ್ರಶಾಂತ್​ ನೀಲ್ ನಿರ್ದೇಶನದಲ್ಲಿ ಮೂಡಿ ಬಂದ ಕೆಜಿಎಫ್ 2 ಗಲ್ಲಾಪೆಟ್ಟಿಗೆಯಲ್ಲಿನ ದಾಖಲೆಗಳನ್ನು ಬ್ರೇಕ್​ ಮಾಡಿ 2022ರ ಸೂಪರ್​ ಹಿಟ್​ ಚಿತ್ರವಾಗಿ ಹೊರಹೊಮ್ಮಿತು. ಕೆಜಿಎಫ್​ ಚಿತ್ರದ ಮೂಲಕ ಕರ್ನಾಟಕಕ್ಕೆ ಸೀಮಿತವಾಗಿದ್ದ ಯಶ್​ ಅಭಿಮಾನಿ ಬಳಗ ಇಡೀ ಭಾರತದೆಲ್ಲೆಡೆ ವಿಸ್ತರಿಸಿತು. ವಿದೇಶಗಳ್ಲೂ ನಟ ಯಶ್​ ಅವರಿಗೆ ಸಿಕ್ಕಾಪಟ್ಟೆ ಫ್ಯಾನ್ಸ್​ ಇದ್ದಾರೆ.

ಮುದ್ದು ಮಕ್ಕಳೊಂದಿಗೆ ನಟ ಯಶ್: ಕಳೆದ ಏಪ್ರಿಲ್​ನಲ್ಲಿ ತೆರೆಕಂಡ ಕೆಜಿಎಫ್​ 2 ಬಳಿಕ ರಾಕಿಂಗ್​ ಸ್ಟಾರ್ ಯಶ್ ಈವರೆಗೆ ಯಾವುದೇ ಸಿನಿಮಾ ಘೋಷಣೆ ಮಾಡಿಲ್ಲ.​ ​ನಟ ಯಶ್ ಮುಂದಿನ ಸಿನಿಮಾ ಯಾವುದು? ಕೆಜಿಎಫ್​ 3 ಬರಲಿದೆಯಾ? ಯಾವ ನಿರ್ದೇಶಕ, ನಿರ್ಮಾಪಕರ ಜೊತೆ ಸಿನಿಮಾ ಮಾಡಲಿದ್ದಾರೆ? ಸೈಲೆಂಟ್​​ ಆಗಿ ಅದ್ಯಾವ ಚಿತ್ರಕ್ಕೆ ಸಿದ್ಧತೆ ನಡೆಸುತ್ತಿದ್ದಾರೆ? ಹೀಗೆ ಹತ್ತು ಹಲವು ಪ್ರಶ್ನೆಗಳು ಅಭಿಮಾನಿಗಳಲ್ಲಿದ್ದು ಯಾವುದಕ್ಕೂ ಸ್ಪಷ್ಟ ಮಾಹಿತಿ ಸಿಕ್ಕಿಲ್ಲ. ಆದರೆ ಕುಟುಂಬಸ್ಥರೊಂದಿಗೆ ಹೆಚ್ಚಿನ ಸಮಯ ಕಳೆಯುತ್ತಿದ್ದಾರೆ. ತಮ್ಮ ಮುದ್ದು ಮಕ್ಕಳೊಂದಿಗೆ ಕಳೆದ ಉತ್ತಮ ಕ್ಷಣಗಳನ್ನು ನಟ ಯಶ್​ ಸೋಶಿಯಲ್​ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿರುತ್ತಾರೆ.

ಯಥರ್ವ್ ಜೊತೆಗಿನ ವಿಡಿಯೋ: ಇದೀಗ ತಮ್ಮ ಮುದ್ದು ಮಗ ಯಥರ್ವ್ ಜೊತೆಗಿನ ವಿಡಿಯೋವೊಂದನ್ನು ಶೇರ್​ ಮಾಡಿದ್ದಾರೆ. ತಮ್ಮಿಬ್ಬರಲ್ಲಿ ಯಾರು ಸ್ಟ್ರಾಂಗ್​​ ಎಂಬುದರ ಕುರಿತು ಅಪ್ಪ ಮಗ ಚರ್ಚೆ ಮಾಡಿದ್ದಾರೆ. ನಾನೇ ಗಟ್ಟಿ ಎಂದು ತಂದೆ ಯಶ್​ ಎದುರು ಪುತ್ರ ಯಥರ್ವ್ ಹೇಳಿಕೊಂಡಿದ್ದಾನೆ. ಅಪ್ಪ ಮಗನ ಮುದ್ದಾದ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದ್ದು ಅಭಿಮಾನಿಗಳು ಭಾರೀ ಮೆಚ್ಚುಗೆ ಸೂಚಿಸುತ್ತಿದ್ದಾರೆ.

ಸಿದ್ಧಾರ್ಥ್ - ಕಿಯಾರಾ ಮದುವೆ: ನಟಿಯ ಬ್ರೈಡಲ್​ ಫೋಟೋ ವೈರಲ್​..

ಐರಾ ಮತ್ತು ಯಥರ್ವ್: ಕನ್ನಡ ಚಿತ್ರರಂಗದ ತಾರಾ ದಂಪತಿ ರಾಕಿಂಗ್​ ಸ್ಟಾರ್​ ಯಶ್​ ಮತ್ತು ರಾಧಿಕಾ ಪಂಡಿತ್ ಪ್ರೀತಿಸಿ ವಿವಾಹವಾಗಿ 6 ವರ್ಷಗಳಾಗಿವೆ. ಕಳೆದ ಡಿಸೆಂಬರ್​ನಲ್ಲಿ 6ನೇ​ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡಿದ್ದಾರೆ. ಸ್ಯಾಂಡಲ್​ವುಡ್​ನ ಕ್ಯೂಟ್ ಕಪಲ್​ಗೆ ಐರಾ ಮತ್ತು ಯಥರ್ವ್ ಎನ್ನುವ ಇಬ್ಬರು ಮಕ್ಕಳಿದ್ದಾರೆ. ಅಪ್ಪ ಅಮ್ಮನಂತೆ ಈ ಮಕ್ಕಳಿಗೂ ದೊಡ್ಡ ಸಂಖ್ಯೆಯ ಅಭಿಮಾನಿ ಬಳಗವಿದೆ. ಈ ಮಕ್ಕಳ ವಿಡಿಯೋ ಆಗಾಗ ಸೋಶಿಯಲ್​ ಮೀಡಿಯಾದಲ್ಲಿ ಸದ್ದು ಮಾಡೋದುಂಟು. ಸದ್ಯ ಯಶ್​ ಹಂಚಿಕೊಂಡಿರುವ ವಿಡಿಯೋ ಕೂಡ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದ್ದು, ಸೋಶಿಯಲ್​ ಮೀಡಿಯಾದಲ್ಲಿ ಸಖತ್​ ವೈರಲ್​ ಆಗಿದೆ.

ಪೆಪ್ಸಿ ಜಾಹೀರಾತಿಗೆ ರಾಕಿಂಗ್​​ ಸ್ಟಾರ್ ಯಶ್ ಪಡೆದ ಸಂಭಾವನೆ ಎಷ್ಟು ಗೊತ್ತಾ?

ಯಶ್​ ಮುಂದಿನ ಸಿನಿಮಾ: ಇನ್ನು, ಯಶ್​ ಮುಂದಿನ ಸಿನಿಮಾ ವಿಚಾರ ಗಮನಿಸೋದಾದರೆ, ಕೆಲ ದಿನಗಳ ಹಿಂದೆ ನಟ ಯಶ್​ ಹಾಲಿವುಡ್​ ಸ್ಟಾರ್‌ ಸ್ಟಂಟ್ ಮಾಸ್ಟರ್ ಜೆಜೆ ಪೇರಿ ಅವರೊಂದಿಗೆ ಕಾಣಿಸಿಕೊಂಡಿದ್ದರು. ಬಳಿಕ ಅಂದರೆ ಇತ್ತೀಚೆಗೆ ಯಶ್​ ಥಾಯ್ಲೆಂಡ್​​ಗೆ ಭೇಟಿ ಕೊಟ್ಟಿದ್ದು, ಅವರು ಪ್ಯಾನ್​ ವರ್ಲ್ಡ್​ ಸಿನಿಮಾ ಮಾಡುತ್ತಾರೆ ಎನ್ನುವುದಕ್ಕೆ ಮತ್ತಷ್ಟು ಇಂಬು ನೀಡಿತ್ತು. ಕೆಜಿಎಫ್​ 2 ತೆರೆ ಕಂಡು 9 ತಿಂಗಳಾದರೂ ತಮ್ಮ ಹೊಸ ಚಿತ್ರದ ಬಗ್ಗೆ ಯಶ್​ ಯಾವುದೇ ಗುಟ್ಟು ಬಿಟ್ಟುಕೊಟ್ಟಿಲ್ಲ. ಹೀಗಾಗಿ ಅವರ ನಡೆ ಮೇಲೆ ಇಡೀ ಭಾರತೀಯ ಚಿತ್ರರಂಗ ಒಂದು ಕಣ್ಣಿಟ್ಟಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.