ETV Bharat / entertainment

'ನಿಮ್ಮೊಂದಿಗೆ ಬೆರೆಯಲು ನನಗೂ ಆಸೆ, ಆದ್ರೆ ಕಾರ್ಯಕ್ರಮಕ್ಕೆ ಆಹ್ವಾನವಿರಲಿಲ್ಲ': ಸುದೀಪ್​

ವಾಲ್ಮೀಕಿ ಮಠದ ಆವರಣದಲ್ಲಿ ಗುರುವಾರ ನಡೆದ ಘಟನೆ ಬಗ್ಗೆ ನಟ ಸುದೀಪ್ ಟ್ವೀಟ್ ಮೂಲಕ ಪ್ರತಿಕ್ರಿಯೆ ನೀಡಿದ್ದಾರೆ.

actor sudeep
ನಟ ಸುದೀಪ್
author img

By

Published : Feb 10, 2023, 1:30 PM IST

Updated : Feb 10, 2023, 1:48 PM IST

ದಾವಣಗೆರೆ: ಜಿಲ್ಲೆಯ ಹರಿಹರ ತಾಲೂಕಿನ ರಾಜನಹಳ್ಳಿ ವಾಲ್ಮೀಕಿ ಮಠದ ಆವರಣದಲ್ಲಿ ಗುರುವಾರ (ಫೆಬ್ರವರಿ 10, 2023) ನಡೆದ ವಾಲ್ಮೀಕಿ ಜಾತ್ರೆಗೆ ನಟ ಕಿಚ್ಚ ಸುದೀಪ್ ಬಾರದ ಹಿನ್ನೆಲೆಯಲ್ಲಿ ಅವರ ಅಭಿಮಾನಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಸ್ವತಃ ಅಭಿನಯ ಚಕ್ರವರ್ತಿ ಪ್ರತಿಕ್ರಿಯೆ ನೀಡಿದ್ದಾರೆ.

ನಟ ಸುದೀಪ್​ ಟ್ವೀಟ್: ದಾವಣಗೆರೆ ಘಟನೆ ಬಗ್ಗೆ ಟ್ವೀಟ್​ ಮಾಡಿರುವ ನಟ ಸುದೀಪ್, 'ಸ್ನೇಹಿತರಿಗೆ ನಲ್ಮೆಯ ನಮಸ್ಕಾರ - ದಾವಣಗೆರೆಯ ಜಿಲ್ಲೆಯ ರಾಜನಹಳ್ಳಿಯ ಘಟನೆ ತಿಳಿದು ಬೇಸರವಾಯಿತು. ನನಗೆ ಕಾರ್ಯಕ್ರಮದ ಆಯೋಜಕರಿಂದ ಆಹ್ವಾನವಿರಲಿಲ್ಲ. ಕಾರ್ಯಕ್ರಮದ ಕುರಿತು ಮಾಹಿತಿಯೂ ಇರಲಿಲ್ಲ. ನಾನು ಒಪ್ಪಿಕೊಂಡ ಕಾರ್ಯಕ್ರಮಗಳನ್ನು ತಪ್ಪಿಸಿದವನಲ್ಲ. ಆದರೂ ನಡೆದ ಘಟನೆಯ ಬಗ್ಗೆ ತೀವ್ರ ವಿಷಾದವಿದೆ. ನಿಮ್ಮ ಜೊತೆ ಬೆರೆಯಲು ನನಗೂ ಸದಾ ಆತೀವ ಆಸೆ. ಮುಂದೆ ಖಂಡಿತ ಬರುವೆ. ಪ್ರೀತಿ ಇರಲಿ. ಶಾಂತ ರೀತಿಯಿಂದ ವರ್ತಿಸಿ. ಪ್ರೀತಿಯೊಂದಿಗೆ ನಿಮ್ಮ ಕಿಚ್ಚ' ಎಂದು ನಟ ಸುದೀಪ್​ ಟ್ವೀಟ್​ ಮಾಡಿದ್ದಾರೆ.

  • Contd...
    ಆದರೂ ಇಂದು ನಡೆದ ಘಟನೆಯ ಬಗ್ಗೆ ತೀವ್ರ ವಿಷಾದವಿದೆ.ನಿಮ್ಮ ಜೊತೆ ಬೆರೆಯಲು ನನಗೂ ಸದಾ ಆತೀವ ಆಸೆ ..ಮುಂದೆ ಖಂಡಿತ ಬರುವೆ.ಪ್ರೀತಿ ಇರಲಿ.ಶಾಂತರೀತಿಯಿಂದ ವರ್ತಿಸಿ ...
    ಪ್ರೀತಿಯೊಂದಿಗೆ ನಿಮ್ಮ
    ಕಿಚ್ಚ....

    — Kichcha Sudeepa (@KicchaSudeep) February 9, 2023 " class="align-text-top noRightClick twitterSection" data=" ">

ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ರಾಜನಹಳ್ಳಿ ವಾಲ್ಮೀಕಿ ಮಠದ ಆವರಣದಲ್ಲಿ ಎರಡು ದಿನಗಳ ವಾಲ್ಮೀಕಿ ಜಾತ್ರೆ ಆಯೋಜನೆ ಆಗಿತ್ತು. ಎರಡು ದಿನಗಳ ಕಾಲ ಜರುಗಿದ ವಾಲ್ಮೀಕಿ ಜಾತ್ರೆಯಲ್ಲಿ ರಾಜ್ಯದ ಮಠದ ಭಕ್ತರು ಆಗಮಿಸಿದ್ದರು. ಎರಡನೇ ದಿನದ (ನಿನ್ನೆ, ಗುರುವಾರ) ಜಾತ್ರೆಯ ಕಾರ್ಯಕ್ರಮದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ, ಸಿಎಂ ಬಸವರಾಜ ಬೊಮ್ಮಾಯಿ ಸೇರಿ ಸಾಕಷ್ಟು ಸಚಿವರು ಭಾಗಿಯಾಗಿದ್ದರ. ರಾಜಕೀಯ ನಾಯಕರ ದಂಡು ಮಠಕ್ಕೆ ಬಂದು ಹೋಗುತ್ತಿದ್ದಂತೆ ನಟ ಕಿಚ್ಚ ಸುದೀಪ್ ಸಂಜೆ 4 ಗಂಟೆಗೆ ಕಾರ್ಯಕ್ರಮಕ್ಕೆ ಆಗಮಿಸುತ್ತಾರೆಂದು ಅಭಿಮಾನಿಗಳು ಕಾದು ಕುಳಿತಿದ್ದರು. ಆದ್ರೆ ಸುದೀಪ್ ಬಾರದ ಬೆನ್ನಲ್ಲೇ ಅಲ್ಲಿದ್ದವರು ತಮ್ಮ ಅಸಮಾಧಾನ ಹೊರ ಹಾಕಿದ್ದಾರೆ.

ಪ್ರಸನ್ನಾನಂದಪುರಿ ಶ್ರೀಗಳ ಮನವಿ: ಅಭಿಮಾನಿಗಳು ಹಾಗೂ ಭಕ್ತರ ಗಲಾಟೆ ವಿಚಾರ ಕೇಳಿ ವೇದಿಕೆಗೆ ಆಗಮಿಸಿದ ವಾಲ್ಮೀಕಿ ಮಠದ ಪ್ರಸನ್ನಾನಂದಪುರಿ ಶ್ರೀಗಳು, ನಟ ಸುದೀಪ್ ಅವರು ಬರುವುದಿಲ್ಲ ಎಂದು ಮೈಕ್​ನಲ್ಲಿ ಘೋಷಣೆ ಮಾಡಿದರು. ಬಳಿಕ ಗಲಾಟೆ ಮಾಡದಂತೆ ಭಕ್ತರಲ್ಲಿ ಮನವಿ ಮಾಡಿಕೊಂಡರು.

ಪೊಲೀಸ್ ಎಚ್ಚರಿಕೆ: ಸುದೀಪ್​ ಅವರು ಬರುವುದಿಲ್ಲ ಎಂಬ ವಿಚಾರ ಕೇಳಿದ ಅಭಿಮಾನಿಗಳು ತಮ್ಮ ಅಸಮಾಧಾನವನ್ನು ತೀವ್ರಗೊಳಿಸಿದರು. ಬಳಿಕ ಎಸ್ಪಿ ಸಿ.ಬಿ ರಿಷ್ಯಂತ್ ಅವರು ವೇದಿಕೆಗೆ ಆಗಮಿಸಿ, ಈವರೆಗೆ ಇಡೀ ಕಾರ್ಯಕ್ರಮ ನೋಡಿದ್ದೀರಿ. ಕೊನೆಗೆ ಹೀಗೆ ಗಲಾಟೆ ಮಾಡಿದ್ರೆ ನಾವು ಕೇಳುವುದಿಲ್ಲ, ಯಾರು ಗಲಾಟೆ ಮಾಡಿದ್ದೀರೋ ಅಂತಹವರ ವಿಡಿಯೋ ಚಿತ್ರೀಕರಿಸಲಾಗಿದೆ ಎಂದು ಎಚ್ಚರಿಕೆ ಕೊಟ್ಟರು.

ಇದನ್ನೂ ಓದಿ: ಶಾರುಖ್​ ಅಭಿಮಾನಿಗಳಿಗೆ ಪ್ರೇಮಿಗಳ ದಿನಕ್ಕೆ ಭರ್ಜರಿ ಗಿಫ್ಟ್​​; ಮರು ಬಿಡುಗಡೆಗೆ ಸಜ್ಜಾಗಿದೆ ಡಿಡಿಎಲ್​ಜೆ

ಇನ್ನು ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ವಾಲ್ಮೀಕಿ ಮಠದಿಂದ ಸನ್ಮಾನ ಮಾಡಿ ಬೆಳ್ಳಿ ಗದೆಯನ್ನು ನೀಡಲಾಗಿತ್ತು. ಸಿಎಂ ಅವರು ಅದನ್ನು ತಮ್ಮೊಂದಿಗೆ ತೆಗೆದುಕೊಂಡು ಹೋಗದೇ ಗದೆಯನ್ನು ವಾಲ್ಮೀಕಿ ಮಠಕ್ಕೆ ನೀಡಿ ಮತ್ತೆ ಸರಳತೆ ಮೆರೆದರು. ಸಾಕಷ್ಟು ಜನರ ಮುಂದೆ ಬೆಳ್ಳಿ ಗದೆಯನ್ನು ಮಠಕ್ಕೆ ಹಸ್ತಾಂತರಿಸಿದ ಹಿನ್ನೆಲೆ ಸಿಎಂ ಬಸವರಾಜ ಬೊಮ್ಮಾಯಿ ಅವರು ಸರಳ ಸಿಎಂ ಎಂಬ ಪ್ರಶಂಸೆಗೆ ಪಾತ್ರರಾದರು.

ಇದನ್ನೂ ಓದಿ: 'ಪಠಾಣ್'​ ಆ್ಯಕ್ಷನ್ ಸೀಕ್ವೆನ್ಸ್‌ ಶೂಟಿಂಗ್‌ ಹೇಗಿತ್ತು?: ಶಾರುಖ್‌ ಖಾನ್, ನಿರ್ದೇಶಕರ ಅನುಭವ ಕೇಳಿ..

Last Updated : Feb 10, 2023, 1:48 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.