ETV Bharat / entertainment

'ಬಘೀರ' ಸಿನಿಮಾ ಶೂಟಿಂಗ್ ವೇಳೆ ಶ್ರೀಮುರಳಿ ಕಾಲಿಗೆ ಗಾಯ, ಶೀಘ್ರದಲ್ಲೇ ಸರ್ಜರಿ - ಬಘೀರ ಚಿತ್ರದ ಶೂಟಿಂಗ್ ವೇಳೆ ಅವಘಡ

ಬಘೀರ ಸಿನಿಮಾ ಶೂಟಿಂಗ್ ವೇಳೆ ನಟ ಶ್ರೀಮುರಳಿ ಕಾಲಿಗೆ ಪೆಟ್ಟಾಗಿದ್ದು, ಶೀಘ್ರದಲ್ಲಿ ಸರ್ಜರಿ ನಡೆಯಲಿದೆ ಎಂದು ವೈದ್ಯರು ಹೇಳಿದ್ದಾರೆ.

Actor Sri Murali injured  Sri Murali injured in Bhageera movie Shooting  Bhageera movie release date  Bhageera movie songs  Bhageera movie trailer  ಬಘೀರ ಸಿನಿಮಾ ಶೂಟಿಂಗ್  ಬಘೀರ ಸಿನಿಮಾ ಶೂಟಿಂಗ್ ವೇಳೆ ಶ್ರೀಮುರಳಿ ಕಾಲಿಗೆ ಪೆಟ್ಟು  ರೋರಿಂಗ್ ಸ್ಟಾರ್ ಶ್ರೀಮುರಳಿ ಅಭಿನಯದ ಬಹು ನಿರೀಕ್ಷಿತ ಬಘೀರ  ಬಘೀರ ಚಿತ್ರದ ಶೂಟಿಂಗ್ ವೇಳೆ ಅವಘಡ  ಶೂಟಿಂಗ್ ಮಾಡುವ ವೇಳೆ ಶ್ರೀಮುರಳಿ ಮೊಣಕಾಲಿಗೆ ಪೆಟ್ಟು
ಬಘೀರ ಸಿನಿಮಾ ಶೂಟಿಂಗ್ ವೇಳೆ ಶ್ರೀಮುರಳಿ ಕಾಲಿಗೆ ಪೆಟ್ಟು
author img

By

Published : Jan 13, 2023, 2:26 PM IST

Updated : Jan 13, 2023, 2:33 PM IST

ರೋರಿಂಗ್ ಸ್ಟಾರ್ ಶ್ರೀಮುರಳಿ ಅಭಿನಯದ ಬಹುನಿರೀಕ್ಷಿತ ಬಘೀರ ಚಿತ್ರದ ಶೂಟಿಂಗ್‌ನಲ್ಲಿ ಅವಘಡವೊಂದು ಸಂಭವಿಸಿದೆ. ಚಿತ್ರದ ಕ್ಲೈಮಾಕ್ಸ್ ಶೂಟಿಂಗ್ ಮಾಡುವಾಗ ಶ್ರೀಮುರಳಿ ಮೊಣಕಾಲಿಗೆ ಪೆಟ್ಟು ಮಾಡಿಕೊಂಡಿದ್ದಾರೆ. ನಿನ್ನೆ ಸಂಜೆ ರಾಕ್‌ಲೈನ್ ಸ್ಟುಡಿಯೋದಲ್ಲಿ ಬಘೀರ ಚಿತ್ರದ ಸಾಹಸ ದೃಶ್ಯಗಳ ಚಿತ್ರೀಕರಣ ನಡೆಯುತ್ತಿತ್ತು. ಈ ವೇಳೆ ನಟನ ಕಾಲಿಗೆ ಪೆಟ್ಟಾಗಿದೆ. ಕೂಡಲೇ ಶ್ರೀಮುರಳಿ ಅವರನ್ನು ಸ್ಥಳೀಯ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.

ಶ್ರೀಮುರಳಿ ಮೊಣಕಾಲಿಗೆ ಏಟು ಬಿದ್ದಿರುವ ಕಾರಣ ಶೀಘ್ರದಲ್ಲೇ ಸರ್ಜರಿ ಮಾಡಿಸಿಕೊಳ್ಳುವಂತೆ ವೈದ್ಯರು ಸಲಹೆ ನೀಡಿದ್ದಾರೆ‌. ಈ ಹಿನ್ನೆಲೆಯಲ್ಲಿ ಶೂಟಿಂಗ್ ನಿಲ್ಲಿಸಲಾಗಿದೆ. ಶ್ರೀಮುರಳಿ ಆರೋಗ್ಯದ ಕುರಿತು ಅವರ ತಂದೆ ‌ಚಿನ್ನೇಗೌಡ ಅವರನ್ನು ಫೋನ್ ಮೂಲಕ ಸಂಪರ್ಕಿಸಿದ್ದು, ಹೌದು, ಸಾಹಸ ದೃಶ್ಯಗಳ ಸನ್ನಿವೇಶ ಚಿತ್ರೀಕರಣ ಸಂದರ್ಭ ಮುರಳಿ‌‌ ಮೊಣಕಾಲಿಗೆ ಬಲವಾದ ಪೆಟ್ಟಾಗಿದೆ. ಕೂಡಲೇ ಸರ್ಜರಿ ಮಾಡಿಸಬೇಕೆಂದು ವೈದರು ಸೂಚಿಸಿದ್ದಾರೆ ಎಂದರು.

Actor Sri Murali injured  Sri Murali injured in Bhageera movie Shooting  Bhageera movie release date  Bhageera movie songs  Bhageera movie trailer  ಬಘೀರ ಸಿನಿಮಾ ಶೂಟಿಂಗ್  ಬಘೀರ ಸಿನಿಮಾ ಶೂಟಿಂಗ್ ವೇಳೆ ಶ್ರೀಮುರಳಿ ಕಾಲಿಗೆ ಪೆಟ್ಟು  ರೋರಿಂಗ್ ಸ್ಟಾರ್ ಶ್ರೀಮುರಳಿ ಅಭಿನಯದ ಬಹು ನಿರೀಕ್ಷಿತ ಬಘೀರ  ಬಘೀರ ಚಿತ್ರದ ಶೂಟಿಂಗ್ ವೇಳೆ ಅವಘಡ  ಶೂಟಿಂಗ್ ಮಾಡುವ ವೇಳೆ ಶ್ರೀಮುರಳಿ ಮೊಣಕಾಲಿಗೆ ಪೆಟ್ಟು
ಬಘೀರ ಸಿನಿಮಾ ಶೂಟಿಂಗ್ ವೇಳೆ ಶ್ರೀಮುರಳಿ ಕಾಲಿಗೆ ಪೆಟ್ಟು

ಕೆಜಿಎಫ್ ಚಾಪ್ಟರ್ 2 ಮತ್ತು ಕಾಂತಾರ ಸಿನಿಮಾಗಳ ಮೆಗಾ ಯಶಸ್ಸಿನ ನಂತರ ಹೊಂಬಾಳೆ ಫಿಲ್ಮ್ಸ್ ಇದೀಗ ಬಘೀರ ಚಿತ್ರ ನಿರ್ಮಿಸುತ್ತಿದೆ. ಖ್ಯಾತ ನಿರ್ದೇಶಕ ಪ್ರಶಾಂತ್ ನೀಲ್ ಕಥೆ ಬರೆದಿದ್ದು, ಲಕ್ಕಿ ಸಿನಿಮಾ ಖ್ಯಾತಿಯ ಡಾ. ಸೂರಿ ನಿರ್ದೇಶನ ಮಾಡುತ್ತಿದ್ದಾರೆ. ಪೋಸ್ಟರ್​ನಿಂದಲೇ ಕುತೂಹಲ ಹುಟ್ಟಿಸಿರುವ ಬಘೀರ ಕೂಡ ಶ್ರೀಮುರಳಿಗೆ ದೊಡ್ಡ ಮಟ್ಟದ ಯಶಸ್ಸು ತಂದು‌‌ ಕೊಡುತ್ತೆ ಎಂಬ ನಂಬಿಕೆ ಇದೆ. ಇದರ ಜೊತೆಗೆ ಮದಗಜ ಸಿನಿಮಾ ನಂತರ ಶ್ರೀಮುರಳಿ ಅಭಿನಯಿಸುತ್ತಿರುವ ಬಹುನಿರೀಕ್ಷಿತ ಚಿತ್ರವಿದು. ಹೀಗಾಗಿ ಶ್ರೀಮುರಳಿ ಅಭಿಮಾನಿಗಳಲ್ಲದೇ ಸ್ಯಾಂಡಲ್​ವುಡ್​ನಲ್ಲಿ ನಿರೀಕ್ಷೆ ಹುಟ್ಟಿಸಿದೆ.

ಮದಗಜ ಸಿನಿಮಾ ಬಳಿಕ ರೋರಿಂಗ್ ಸ್ಟಾರ್ ಶ್ರೀಮುರಳಿ ಮುಂದಿನ‌ ಸಿನಿಮಾ ಯಾವುದು? ಯಾವ ನಿರ್ದೇಶಕನ ಜೊತೆ ಚಿತ್ರ ಮಾಡ್ತಾರೆ ಎಂಬೆಲ್ಲಾ ಪ್ರಶ್ನೆಗಳು ಅಭಿಮಾನಿಗಳಲ್ಲಿ ಮೂಡಿತ್ತು. ಆಗ ಶ್ರೀಮುರಳಿಯ 40ನೇ ವರ್ಷದ ಹುಟ್ಟುಹಬ್ಬಕ್ಕೆ 'ಬಘೀರ' ಸಿನಿಮಾ ಸೆಟ್ಟೇರಿತ್ತು. ಮಹಾಲಕ್ಷ್ಮಿ ಲೇಔಟ್​ನ ವಜ್ರಗಿರಿ ಗಣಪತಿ ದೇವಸ್ಥಾನದಲ್ಲಿ ನಿರ್ಮಾಪಕ ವಿಜಯ್ ಕಿರಗಂದೂರು, ನಿರ್ದೇಶಕ ಡಾ. ಸೂರಿ ಕುಟುಂಬ ಹಾಗೂ ಸ್ನೇಹಿತರ ಸಮ್ಮುಖದಲ್ಲಿ ಚಿತ್ರ ಸೆಟ್ಟೇರಿತ್ತು.

ಹೊಂಬಾಳೆ ಫಿಲಂಸ್​​ನಡಿ ಬಘೀರ ಚಿತ್ರ ಅನೌನ್ಸ್ ಆದಾಗಿನಿಂದ ಸಾಕಷ್ಟು ನಿರೀಕ್ಷೆ ಮೂಡಿಸಿದೆ. ಚಿತ್ರದಲ್ಲಿ ರೋರಿಂಗ್ ಸ್ಟಾರ್ ಪೊಲೀಸ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಪಾತ್ರಕ್ಕಾಗಿ ಶ್ರೀಮುರಳಿ ಮತ್ತೆ ದೇಹ ದಂಡಿಸಿದ್ದಾರೆ. ಇದು ಹೊಂಬಾಳೆ ಫಿಲಂಸ್​​ನ 8ನೇ ಚಿತ್ರವಾಗಿದೆ. ಪಕ್ಕಾ ಮಾಸ್​ ಅನ್ನೋದು ಈಗಾಗಲೇ ಟೈಟಲ್ ಹಾಗೂ ಪೋಸ್ಟರ್​ನಿಂದಲೇ ಗೊತ್ತಾಗುತ್ತಿದೆ. ಸದ್ಯ ಸಿನಿಮಾಕ್ಕೆ ಚಾಲನೆ ಸಿಕ್ಕಿದ್ದು, ಶ್ರೀಮುರಳಿ ಜೋಡಿ ಯಾರಾಗ್ತಾರೆ, ತಾರಾಗಣ ಹೇಗಿರಲಿದೆ ಅನ್ನೋದು ಮುಂದೆ ಗೊತ್ತಾಗಲಿದೆ.

ಇದನ್ನೂ ಓದಿ: ಇತರ ಧರ್ಮಗಳಂತೆ ಇಸ್ಲಾಂ ವಿಕಸನಗೊಳ್ಳಬೇಕಿದೆ: ತಸ್ಲೀಮಾ ನಸ್ರೀನ್

Last Updated : Jan 13, 2023, 2:33 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.