ಇತ್ತೀಚಿನ ದಿನಗಳಲ್ಲಿ ಜಿಮ್‌ನಲ್ಲಿ ವರ್ಕ್ಔಟ್ ಮಾಡುತ್ತಿರುವಾಗ ಕುಸಿದು ಬಿದ್ದು ಸಾವನಪ್ಪುತ್ತಿರುವವರ ಸಂಖ್ಯೆ ಹೆಚ್ಚುತ್ತಿದೆ. ಸಿನಿಮಾ ರಂಗದಲ್ಲೂ ಕೆಲ ನಟರು ಜಿಮ್‌ನಲ್ಲಿ ಬಿದ್ದು ಸಾವನ್ನಪ್ಪಿದ್ದಾರೆ. ಇದೀಗ ಹಿಂದಿ ಕಿರುತೆರೆ ನಟ ಸಿದ್ಧಾಂತ್ ವೀರ್ ಸೂರ್ಯವಂಶಿ ಜಿಮ್‌ನಲ್ಲಿ ವ್ಯಾಯಾಮ ಮಾಡುತ್ತಿದ್ದ ವೇಳೆ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ.

46ನೇ ವಯಸ್ಸಿನ ನಟ ನಿಧನರಾಗಿರುವ ಕುರಿತು ಕಿರುತೆರೆ ನಟ ಮತ್ತು ನಿರೂಪಕ ಜಯ್ ಭಾನುಶಾಲಿ ಖಚಿತಪಡಿಸಿದ್ದಾರೆ. ಜಯ್ ಭಾನುಶಾಲಿ ಇನ್ಸ್ಟಾಗ್ರಾಮ್ನಲ್ಲಿ ನಟ ಸಿದ್ದಾಂತ್ ವೀರ್ ಸೂರ್ಯವಂಶಿ ಅವರ ಫೋಟೋವನ್ನು ಪೋಸ್ಟ್ ಮಾಡಿ "ಬಹಳ ಬೇಗ ಹೋದಿರಿ" ಎಂದು ಬರೆದಿದ್ದಾರೆ. ಜಿಮ್‌ನಲ್ಲಿ ಕುಸಿದು ಬಿದ್ದ ನಂತರ ಸಿದ್ದಾಂತ್ ಸಾವನ್ನಪ್ಪಿದ್ದಾರೆ ಎಂದು ಅವರು ಖಚಿತಪಡಿಸಿದ್ದಾರೆ.
ಇದನ್ನೂ ಓದಿ: ಸಲ್ಮಾನ್ ಖಾನ್ ಮದುವೆ ಮಾಡಿಸಲಿರುವ ನಿರ್ದೇಶಕ ಸೂರಜ್ ಬರ್ಜತ್ಯ
ಮಾಡೆಲಿಂಗ್‌ನಲ್ಲಿ ಗುರುತಿಸಿಕೊಂಡಿದ್ದ ಸಿದ್ಧಾಂತ್ ಕುಸುಮ್ ಮೂಲಕ ಕಿರುತೆರೆಗೆ ಪ್ರವೇಶ ಮಾಡಿದರು. ಅವರು ಕೊನೆಯದಾಗಿ ಪೊಲೀಸ್ ಆಧಾರಿತ ಕಂಟ್ರೋಲ್ ರೂಂ ಎನ್ನುವ ಟಿವಿ ಕಾರ್ಯಕ್ರಮದಲ್ಲಿ ಡಿಸಿಪಿ ಶಂತನು ವ್ಯಾಸ್ ಪಾತ್ರದಲ್ಲಿ ಕಾಣಿಸಿಕೊಂಡರು. ಕಸೌತಿ ಝಿಂದಗಿ ಕೇ, ಕೃಷ್ಣ ಅರ್ಜುನ್, ಕ್ಯಾ ದಿಲ್ ಮೇ ಹೈ, ಝಿದ್ಧಿ ದಿಲ್, ಕ್ಯೂ ರಿಶ್ತೋ ಮೆ ಕಟ್ಟಿ ಬಟ್ಟಿ ಸೇರಿದಂತೆ ಮುಂತಾದ ಟಿವಿ ಶೋಗಳಲ್ಲಿ ಅವರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡರು.