ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಶುಕ್ರವಾರ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಟ್ರೆಂಡಿಂಗ್ನಲ್ಲಿದ್ರು. ಕರುನಾಡ ಚಕ್ರವರ್ತಿ ಶಿವಣ್ಣನ ಬಗ್ಗೆ ಸಿನಿಪ್ರಿಯರಿಂದ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. ಇದಕ್ಕೆ ಕಾರಣ ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ಮಾಸ್ ಅಂಡ್ ಫ್ಯಾಮಿಲಿ ಸೆಂಟಿಮೆಂಟ್ ಹೊಂದಿರುವ 'ಜೈಲರ್' ಚಿತ್ರ.
-
ನಿಮ್ಮೆಲ್ಲರ ಪ್ರೀತಿಗೆ ಧನ್ಯವಾದಗಳು. Thank you for the love on #Jailer & Narasimha. In Cinemas near you@rajinikanth @Nelsondilpkumar @anirudhofficial @Mohanlal @sunpictures @tamannaahspeaks @meramyakrishnan @suneeltollywood @iYogiBabu @iamvasanthravi pic.twitter.com/SJ1zxgRlJq
— DrShivaRajkumar (@NimmaShivanna) August 11, 2023 " class="align-text-top noRightClick twitterSection" data="
">ನಿಮ್ಮೆಲ್ಲರ ಪ್ರೀತಿಗೆ ಧನ್ಯವಾದಗಳು. Thank you for the love on #Jailer & Narasimha. In Cinemas near you@rajinikanth @Nelsondilpkumar @anirudhofficial @Mohanlal @sunpictures @tamannaahspeaks @meramyakrishnan @suneeltollywood @iYogiBabu @iamvasanthravi pic.twitter.com/SJ1zxgRlJq
— DrShivaRajkumar (@NimmaShivanna) August 11, 2023ನಿಮ್ಮೆಲ್ಲರ ಪ್ರೀತಿಗೆ ಧನ್ಯವಾದಗಳು. Thank you for the love on #Jailer & Narasimha. In Cinemas near you@rajinikanth @Nelsondilpkumar @anirudhofficial @Mohanlal @sunpictures @tamannaahspeaks @meramyakrishnan @suneeltollywood @iYogiBabu @iamvasanthravi pic.twitter.com/SJ1zxgRlJq
— DrShivaRajkumar (@NimmaShivanna) August 11, 2023
ಹೌದು, ಈ ಸಿನಿಮಾದಲ್ಲಿ ಶಿವರಾಜ್ ಕುಮಾರ್ ಅವರು ವಿಶೇಷ ಪಾತ್ರವೊಂದರಲ್ಲಿ ಅಭಿನಯಿಸಿದ್ದಾರೆ. ಈ ಪಾತ್ರಕ್ಕೆ ಈಗ ಭಾಷೆಯನ್ನು ಮೀರಿ ಕನ್ನಡದ ಜೊತೆಗೆ ತಮಿಳು, ತೆಲುಗು ಹಾಗೂ ಮಲೆಯಾಳಂ ಪ್ರೇಕ್ಷಕರೂ ಕೂಡ ಹ್ಯಾಟ್ರಿಕ್ ಹೀರೋ ಎಂಟ್ರಿ ಹಾಗೂ ಕ್ಲೈಮಾಕ್ಸ್ನಲ್ಲಿನ ಶಿವಣ್ಣನ ಖದರ್ಗೆ ಫಿದಾ ಆಗಿದ್ದಾರೆ. ಈ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣ ಟ್ವಿಟರ್ನಲ್ಲಿಯೂ ಕೂಡ ಶಿವರಾಜ್ ಕುಮಾರ್ ಟ್ರೆಂಡಿಂಗ್ನಲ್ಲಿದ್ದರು. ತಮಿಳು ಭಾಷಾ ಅಭಿಮಾನಿಗಳು ಶಿವರಾಜ್ ಕುಮಾರ್ ಎಂಟ್ರಿ ಹಾಗೂ ಲುಕ್ ಬಗ್ಗೆ ಮನದುಂಬಿ ಕೊಂಡಾಡುತ್ತಿದ್ದಾರೆ.
ಅಭಿಮಾನಿಗಳ ಪ್ರೀತಿಗೆ ಮನಸೋತ ನಟ ಶಿವರಾಜ್ ಕುಮಾರ್ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಮೂಲಕ ಕೃತಜ್ಞತೆ ತಿಳಿಸಿದ್ದಾರೆ. ನಾನು ರಜನಿಕಾಂತ್ ಅವರ ಜೊತೆ ಸ್ಕ್ರೀನ್ ಹಂಚಿಕೊಂಡಿರುವುದು ಒಂದು ಹೆಮ್ಮೆಯ ವಿಚಾರ. ಇದೆಕ್ಕೆಲ್ಲ ಕಾರಣರಾದ ನಿರ್ದೇಶಕ ನೆಲ್ಸನ್ ಅವರಿಗೆ ಧನ್ಯವಾದ ಎಂದು ಶಿವಣ್ಣ ಹೇಳಿದ್ದಾರೆ.
''ಜೈಲರ್ ಸಿನಿಮಾದಲ್ಲಿ ರಜನಿ ಸರ್ ಜೊತೆ ನಾನು, ಜಾಕಿ ಶ್ರಾಫ್ ಹಾಗೂ ಮೋಹನ್ ಲಾಲ್ ಸರ್ ಅವರೂ ಕೂಡ ವಿಶೇಷ ಪಾತ್ರದಲ್ಲಿ ಅಭಿನಯಿಸಿದ್ದೇವೆ. ರಜನಿ ಸರ್ ಹಾಗೂ ನಿರ್ದೇಶಕ ನೆಲ್ಸನ್ ಅವರಿಗೆ ವಿಶೇಷವಾಗಿ ಧನ್ಯವಾದ ಸಲ್ಲಿಸಲು ಬಯಸುತ್ತೇನೆ. ರಜನಿ ಸರ್ ಜೊತೆ ಅಭಿನಯಿಸಿ, ಅವರೊಂದಿಗೆ ಕಾಲ ಕಳೆಯುವುದೇ ತುಂಬಾ ಖುಷಿ. ಈ ಅನುಭವ ತುಂಬಾ ಚೆನ್ನಾಗಿತ್ತು. ಹಾಗೆಯೇ ನಿಮಗೆಲ್ಲರಿಗೂ ತುಂಬಾ ಧನ್ಯವಾದಗಳು. ತಾವೆಲ್ಲರೂ ಚಿತ್ರವನ್ನು ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದೀರಿ, ನನ್ನ ಪಾತ್ರಕ್ಕೂ ಗೌರವ ತೋರಿಸಿದ್ದಕ್ಕೆ ನಾನು ನಿಮಗೆ ಚಿರ ಋಣಿ. ಕನ್ನಡದಲ್ಲೂ ನೀವು ನೋಡಬಹುದು, ತುಂಬಾ ಎಂಜಾಯ್ ಮಾಡಲಿದ್ದೀರಿ, ಜೈ ಹಿಂದ್ ಜೈ ಕರ್ನಾಟಕ'' ಎಂದು ಶಿವಣ್ಣ ವಿಡಿಯೋ ಮೂಲಕ ಧನ್ಯವಾದ ತಿಳಿಸಿದ್ದಾರೆ.
ಸೂಪರ್ ಸ್ಟಾರ್ ರಜನಿಕಾಂತ್ ಅವರು ಜೈಲರ್ ಸಿನಿಮಾ ಮೂಲಕ ಭರ್ಜರಿ ಕಮ್‌ಬ್ಯಾಕ್ ಮಾಡಿದ್ದು, ಮೊದಲ ದಿನವೇ ಬಾಕ್ಸ್ ಆಫೀಸ್ನಲ್ಲಿ 50 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿತ್ತು. ಎರಡನೇ ದಿನದಾಂತ್ಯಕ್ಕೆ ಕಲೆಕ್ಷನ್ 100 ಕೋಟಿ ರೂ. ಸಮೀಪ ತಲುಪಿದೆ ಎಂದು ವರದಿಯಾಗಿದೆ. ಈ ಚಿತ್ರವನ್ನು ಸನ್ ಪಿಕ್ಚರ್ಸ್‌ನ ಕಲಾನಿಧಿ ಮಾರನ್ ಅವರು ನಿರ್ಮಿಸಿದ್ದಾರೆ.
ಇದನ್ನೂ ಓದಿ: ಬಾಕ್ಸ್ ಆಫೀಸ್ನಲ್ಲಿ ಧೂಳೆಬ್ಬಿಸಿದ 'ಜೈಲರ್': ಮೊದಲ ದಿನವೇ 50 ಕೋಟಿ ರೂ. ಬಾಚಿದ ರಜಿನಿ ಸಿನಿಮಾ