ETV Bharat / entertainment

ಕಿಚ್ಚ-ಕುಮಾರ್​ ಕೇಸ್​: ರವಿಚಂದ್ರನ್ ಜೊತೆ ಶಿವಣ್ಣ ಚರ್ಚೆ.. ಅಪ್ಪಾಜಿ ಮಾತು ನೆನಪಿಸಿದ ಹ್ಯಾಟ್ರಿಕ್​ ಹೀರೋ - actor sudeep

ನಟ ಸುದೀಪ್ ಹಾಗೂ ನಿರ್ಮಾಪಕ ಕುಮಾರ್ ನಡುವಿನ ಮನಸ್ತಾಪ ವಿಚಾರವಾಗಿ ನಟ ಶಿವರಾಜ್​ಕುಮಾರ್​ ಪ್ರತಿಕ್ರಿಯೆ ನೀಡಿದ್ದಾರೆ.

Actor shiva rajkumar
ನಟ ಶಿವ ರಾಜ್​ಕುಮಾರ್​
author img

By

Published : Jul 19, 2023, 8:01 PM IST

Updated : Jul 19, 2023, 11:10 PM IST

ನಟ ಶಿವ ರಾಜ್​ಕುಮಾರ್​

ಕನ್ನಡ ಚಿತ್ರರಂಗದಲ್ಲಿ ಕಳೆದ ಕೆಲ ದಿನಗಳಿಂದ ನಟ ಸುದೀಪ್ ಹಾಗೂ ನಿರ್ಮಾಪಕ ಕುಮಾರ್ ನಡುವಿನ ಮನಸ್ತಾಪ ದೊಡ್ಡ ಮಟ್ಟದಲ್ಲಿ ಚರ್ಚೆಯಾಗುತ್ತಿದೆ. ಸುದೀಪ್ ನನ್ನ ಬಳಿ ಹಣ ಪಡೆದು, ಸಿನಿಮಾ ಮಾಡಲು ಕಾಲ್‌ಶೀಟ್ ನೀಡುತ್ತಿಲ್ಲ ಎಂದು ನಿರ್ಮಾಪಕ ಕುಮಾರ್ ಅವರು ಆರೋಪ ಮಾಡಿದ್ದರು. ಇದು ಕಿಚ್ಚ ಸುದೀಪ್ ಇಮೇಜ್​ಗೆ ಡ್ಯಾಮೇಜ್ ಆದ ಹಿನ್ನೆಲೆಯಲ್ಲಿ ಸುದೀಪ್ ಕಾನೂನು ಮೂಲಕ ನಾನು ಉತ್ತರ ಕೊಡುತ್ತೇನೆ ಎಂದು ನ್ಯಾಯಾಲಯದ ಮೆಟ್ಟಿಲೇರಿದ್ದಾರೆ. ಈ ಎಲ್ಲಾ ಬೆಳವಣಿಗೆ ಬಳಿಕ ನಿನ್ನೆ ಕೆಲ ನಿರ್ಮಾಪಕರು ಹಿರಿಯ ನಟ ರವಿಚಂದ್ರನ್ ಅವರನ್ನು ಭೇಟಿ ಮಾಡಿ ಈ ವಿವಾದದ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದರು. ರವಿಚಂದ್ರನ್ ಅವರು ಈ‌ ಸಮಸ್ಯೆ ಬಗ್ಗೆ ತಿಳಿದುಕೊಂಡು ಶಿವರಾಜ್​ಕುಮಾರ್ ಜೊತೆ ಮಾತನಾಡಿ ಸಮಸ್ಯೆ ಬಗೆಹರಿಸುವ ಪ್ರಯತ್ನ ಮಾಡೋಣ ಎಂದು ತಿಳಿಸಿದರು‌.

ಇಂದು ಕೆಲ ನಿರ್ಮಾಪಕರು ನಟ ಶಿವರಾಜ್​ಕುಮಾರ್ ಅವರನ್ನು ಭೇಟಿ ಮಾಡಿ ಈ ವಿವಾದದ ಬಗ್ಗೆ ಮಾಹಿತಿ ನೀಡಿದ್ದಾರೆ‌. ಈ ಸಮಯದಲ್ಲಿ ನಿರ್ಮಾಪಕ ಕುಮಾರ್ ಅವರು ಶಿವಣ್ಣನ ಬಳಿ ಸಂಧಾನದ ಮೂಲಕ ಸಮಸ್ಯೆ ಬಗೆಹರಿಸಿಕೊಡಿ ಅಂತಾ ಮನವಿ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಕುಮಾರ್ ಮನವಿಗೆ ಶಿವರಾಜ್​ಕುಮಾರ್ ಸ್ಪಂದಿಸಿದ್ದಾರೆ ಎನ್ನುವ ಮಾಹಿತಿ ಇದೆ.

ಈ ವಿವಾದದ ಕುರಿತು ನಟ ಶಿವರಾಜ್​ಕುಮಾರ್ ಮಾತನಾಡಿದ್ದು, ಚಿತ್ರರಂಗ ಒಂದು ಫ್ಯಾಮಿಲಿ ಇದ್ದಂತೆ. ಕುಮಾರ್ ಹಾಗೂ ಸುದೀಪ್ ನಡುವೆ ನಡೆದಿರೋ ಘಟನೆ ಬಗ್ಗೆ ಅವರಿಗೇನೆ ಗೊತ್ತು. ಚಿತ್ರರಂಗದಲ್ಲಿ ನಿರ್ಮಾಪಕರು ಹಾಗೂ ನಟರು ಎರಡು ಪಿಲ್ಲರ್ ಇದ್ದಂತೆ. ‌ಅಪ್ಪಾಜಿ ಸಾಹುಕಾರ ಅಂತಾ ರವಿಚಂದ್ರನ್ ಸರ್ ಅವರನ್ನು ಕರೆಯುತ್ತಿದ್ದರು‌. ಅವರು ಸಿನಿಮಾ ಇಂಡಸ್ಟ್ರಿಗೆ ಬಂದು 40 ವರ್ಷ ಆಯ್ತು. ಈ ಪ್ರಕರಣ, ರವಿಚಂದ್ರ ಸರ್ ಏನ್ ಹೇಳ್ತಾರೆ ಅದರ ಮೇಲೆ ನಿಲ್ಲುತ್ತೆ ಎಂದರು.

ಇದನ್ನೂ ಓದಿ: ಕಿಚ್ಚ- ಕುಮಾರ್​ ವಾರ್​: ಕೊನೆಗೂ ಮೌನ ಮುರಿದ ನಟ ರವಿಚಂದ್ರನ್​ ಹೇಳಿದ್ದಿಷ್ಟು..​!

ಲೆಕ್ಕಾಚಾರದ ಬಗ್ಗೆ ನನ್ನ ಜೊತೆ ಮಾತನಾಡೋದು ತಪ್ಪಾಗುತ್ತದೆ. ನಟನಿಗೆ ಗೌರವ ನೀಡಬೇಕು. ಲೆಕ್ಕಾಚಾರ ಬಿಟ್ಟು ಬೇರೆ ವಿಷಯವನ್ನು ರವಿ ಸರ್ ಜೊತೆ ಮಾತನಾಡಿ ಬಗೆಹರಿಸುವ ಪ್ರಯತ್ನ ಮಾಡುತ್ತೇವೆ. ನಾನು ರವಿ ಸರ್ ಜೊತೆ ಲೆಕ್ಕಾಚಾರದ ಬಗ್ಗೆ ಮಾತನಾಡಿಲ್ಲ. ಅಪ್ಪಾಜಿ ಯಾವಾಗಲು ಹೇಳುತ್ತಿದ್ದರು, ಸಿನಿಮಾರಂಗ ಒಂದು ಕುಟುಂಬ ಇದ್ದಂತೆ. ಅದರಂತೆ ನಾವು ನಡೆದುಕೊಂಡು ಹೋಗಬೇಕು. ಚಿಕ್ಕ ಸಮಸ್ಯೆಯನ್ನು ದೊಡ್ಡದು ಮಾಡಿಕೊಳ್ಳಬಾರದೆಂದು ಶಿವರಾಜ್​ಕುಮಾರ್ ಸಲಹೆ ನೀಡಿದ್ದಾರೆ.

ಇದನ್ನೂ ಓದಿ: ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಭಾರತೀಯ ಸಿನಿಮಾ; ಇತಿಹಾಸ ಸೃಷ್ಟಿಗೆ ಸಜ್ಜಾದ 'ಪ್ರಾಜೆಕ್ಟ್ ಕೆ'

Last Updated : Jul 19, 2023, 11:10 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.