ನಟ ಸತೀಶ್ ನೀನಾಸಂ ಸ್ವಿಗ್ಗಿ ಬಾಯ್ಸ್ ಜೊತೆ ಊಟ ಮಾಡಿದ್ದಾರೆ. ಇದಕ್ಕೆ ಕಾರಣ ಪೆಟ್ರೋಮ್ಯಾಕ್ಸ್ ಸಿನಿಮಾ. ಸತೀಶ್ ನೀನಾಸಂ ಅಭಿನಯದ ಬಹು ನಿರೀಕ್ಷಿತ ಚಿತ್ರ ಪೆಟ್ರೋಮ್ಯಾಕ್ಸ್ನಲ್ಲಿ, ಸತೀಶ್ ನೀನಾಸಂ ಸ್ವಿಗ್ಗಿ ಡೆಲೆವರಿ ಬಾಯ್ ಪಾತ್ರ ಮಾಡಿದ್ದಾರೆ. ಈ ಕಾರಣಕ್ಕೆ ಸ್ವಿಗ್ಗಿಯಲ್ಲಿ ಕೆಲಸ ಮಾಡುವ ಹತ್ತಾರು ಹುಡುಗರನ್ನ ಕರೆಯಿಸಿ ಅವ್ರ, ಕಷ್ಟ ಸುಖಗಳನ್ನ ವಿಚಾರಿಸಿದ್ದಾರೆ.
ಅದರಲ್ಲಿ ಸ್ವಿಗ್ಗಿ ಕೆಲಸ ಮಾಡುವ ಹುಡುಗರು, ತಾವು ಊಟ ಕೊಡೋದಿಕ್ಕೆ ಹೋದಾಗ ಜನರು ಹೇಗೆ ವರ್ತಿಸುತ್ತಾರೆ. ಊಟ ಪಡೆದು ಹಣ ಕೊಡದ ಜನರು, ಗಾಂಜಾ ನಶೆಯಲ್ಲಿ ಹುಡುಗರು ಊಟ ಆರ್ಡರ್ ಮಾಡಿ, ಊಟ ಕೊಡೋದಿಕ್ಕೆ ಹೋದಾಗ ಅವರ ಮೇಲೆ ಜಗಳ ಮಾಡುವ ಘಟನೆಗಳನ್ನ ವಿವರಿಸುತ್ತಾರೆ. ಈ ಸ್ವಿಗ್ಗಿ ಹುಡುಗರ ಕಷ್ಟಗಳನ್ನ ಕೇಳಿದ ಸತೀಶ್ ನೀನಾಸಂ ಅವ್ರಿಗೆ ಧೈರ್ಯ ಮಾತುಗಳನ್ನ ಹೇಳಿದ್ದಾರೆ.
ಬಳಿಕ ಆ ಡೆಲೆವರಿ ಬಾಯ್ಸ್ ಜೊತೆ ಸಂತೋಷದಿಂದ ಊಟ ಮಾಡಿ, ಅವರ ಜೊತೆ ಫೋಟೋ ತೆಗಿಸಿಕೊಂಡಿದ್ದಾರೆ. ಸದ್ಯ ಇದು ಸತೀಶ್ ನೀನಾಸಂ ತಮ್ಮ ಪೆಟ್ರೋಮ್ಯಾಕ್ಸ್ ಚಿತ್ರಕ್ಕಾಗಿ ಮಾಡಿದ ಪ್ರಚಾರ ಅಂತಾ ಅನಿಸಿದರು. ಆ ಊಟ ಕೊಡುವ ಡೆಲಿವರಿ ಬಾಯ್ಸ್ಗಳಿಗೆ ಹೊಟ್ಟೆ ತುಂಬಾ ಬಿರಿಯಾನಿ ಊಟ ಉಣಬಡಿಸಿರೋದು ಮೆಚ್ಚುವಂತಹದ್ದು.
'ಪೆಟ್ರೋಮ್ಯಾಕ್ಸ್' ಹೆಸರಿನಿಂದಲೇ ವಿಭಿನ್ನತೆಯನ್ನು ಕಾಯ್ದುಕೊಂಡು ಬಂದಿದೆ. ಈ ಚಿತ್ರದಲ್ಲಿ ಸತೀಶ್ ನೀನಾಸಂ ಜೊತೆ ಬ್ಯೂಟಿ ಕ್ವೀನ್ ಹರಿಪ್ರಿಯಾ ಮೊದಲ ಬಾರಿಗೆ ಸ್ಕ್ರೀನ್ ಹಂಚಿಕೊಂಡಿದ್ದಾರೆ. ಸಿದ್ಲಿಂಗು, ನೀರ್ ದೋಸೆ ಚಿತ್ರಗಳ ಮಾಡಿ ಭರವಸೆ ನಿರ್ದೇಶಕ ಅಂತಾ ಕರೆಯಿಸಿಕೊಂಡಿರುವ ವಿಜಯ್ ಪ್ರಸಾದ್ ನಿರ್ದೇಶನ ಮಾಡಿದ್ದಾರೆ.
ಇದನ್ನೂ ಓದಿ:ಸ್ಯಾಂಡಲ್ವುಡ್ನ ಮೇಕಪ್ ಮ್ಯಾನ್ ಈಗ ತಾಜ್ಮಹಲ್ 2 ಸಿನಿಮಾದ ನಾಯಕ ನಟ!
ಇನ್ನು ಸತೀಶ್ ನೀನಾಸಂ ಹಾಗೂ ಹರಿಪ್ರಿಯಾ ಜೊತೆಗೆ ಗೊಂಬೆಗಳ ಲವ್ ಖ್ಯಾತಿಯ ಅರುಣ್, ನಾಗಭೂಷಣ್, ಕಾರುಣ್ಯಾ ರಾಮ್ ಕಾಣಿಸಿಕೊಳ್ಳಲಿದ್ದಾರೆ. ಪೆಟ್ರೋಮ್ಯಾಕ್ಸ್ಗೆ ನಿರಂಜನ್ ಬಾಬು ಅವರ ಛಾಯಾಗ್ರಹಣವಿದ್ದು, ಸುರೇಶ್ ಅರಸ್ ಸಂಕಲನ ಮತ್ತು ಹೊಸ್ಮನೆ ಮೂರ್ತಿ ಕಲಾ ನಿರ್ದೇಶನವಿದೆ. ಸತೀಶ್ ಪಿಕ್ಚರ್ ಹೌಸ್ನಲ್ಲಿ ಪೆಟ್ರೋಮ್ಯಾಕ್ಸ್ ಚಿತ್ರವನ್ನು ನಿರ್ಮಾಣ ಮಾಡಲಾಗಿದೆ. ಈ ತಿಂಗಳ 15ಕ್ಕೆ ಸಿನಿಮಾ ರಾಜ್ಯಾದ್ಯಂತ ತೆರೆಗೆ ಬರಲಿದೆ.