ETV Bharat / entertainment

ಗಣಪತಿಗೆ ಆರತಿ ಬೆಳಗಿದ ಬಾಲಿವುಡ್ ನಟ ಸಲ್ಮಾನ್​ ಖಾನ್ - Bollywood Ganeshotsava

ಸೂಪರ್​ ಸ್ಟಾರ್ ಸಲ್ಮಾನ್ ಖಾನ್ ಸಹೋದರಿ ಅರ್ಪಿತಾ ಮನೆಯಲ್ಲಿ ಗಣೇಶ ಹಬ್ಬ ಆಚರಿಸಿದ್ದಾರೆ.

Salman Khan performs Ganesha aarti at sister Arpitas home
ಗಣಪನಿಗೆ ಆರತಿ ಬೆಳಗಿದ ಸಲ್ಮಾನ್​ ಖಾನ್
author img

By

Published : Sep 1, 2022, 10:02 AM IST

ದೇಶಾದ್ಯಂತ ಗಣೇಶ ಚತುರ್ಥಿ ಅದ್ಧೂರಿಯಾಗಿ ಆಚರಣೆಯಾಗಿದೆ. ಕೋವಿಡ್​ ಹಿನ್ನೆಲೆಯಲ್ಲಿ ಕಳೆದೆರಡು ವರ್ಷಗಳಿಂದ ಕಳೆಗುಂದಿದ್ದ ವಿಘ್ನ ವಿನಾಯಕನ ಉತ್ಸವ ಈ ಬಾರಿ ಕಳೆಗಟ್ಟಿದೆ. ಬಾಲಿವುಡ್​ ಸೆಲೆಬ್ರಿಟಿಗಳು ಕೂಡ ವಿಜೃಂಭಣೆಯಿಂದ ಹಬ್ಬಾಚರಿಸಿದ್ದಾರೆ.

ನಿನ್ನೆ ಸಂಜೆ ದಬಾಂಗ್ ಸ್ಟಾರ್ ಸಲ್ಮಾನ್ ಖಾನ್ ಅವರು ಮುಂಬೈನಲ್ಲಿ ಸಹೋದರಿ ಅರ್ಪಿತಾ ಮನೆಗೆ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಅವರು ಆಯುಷ್ ಶರ್ಮಾ ಮತ್ತು ರಿತೇಶ್ ದೇಶಮುಖ್ ಜೊತೆ ಸೇರಿ ಗಜಮುಖನಿಗೆ ಆರತಿ ಬೆಳಗಿ ನಮಸ್ಕರಿಸಿದರು. ಸಲ್ಲು ತಮ್ಮ ಇನ್​ಸ್ಟಾಗ್ರಾಮ್​ನಲ್ಲಿ ವಿಡಿಯೋ ಹಂಚಿಕೊಂಡು, "ಗಣಪತಿ ಬಪ್ಪಾ ಮೋರೆಯಾ" ಬರೆದಿದ್ದಾರೆ. ಬಿಳಿ ಶರ್ಟ್ ಮತ್ತು ನೀಲಿ ಬಣ್ಣದ ಡೆನಿಮ್‌ನಲ್ಲಿ ಸಲ್ಮಾನ್​ ಕಾಣಿಸಿಕೊಂಡಿದ್ದರು.

ಇದನ್ನೂ ಓದಿ: Ganesh Chaturthi 2022: ಸಿನಿಮಾ ನಟರ ಗೆಟಪ್​​​ನಲ್ಲಿ ಮಾರುಕಟ್ಟೆಗೆ ಲಗ್ಗೆ ಇಟ್ಟ ಗಣೇಶ ಮೂರ್ತಿಗಳು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.