ETV Bharat / entertainment

ದೀಪ್​ವೀರ್ ದಾಂಪತ್ಯದಲ್ಲಿ ಬಿರುಕು ವದಂತಿ.. ಮೌನ ಮುರಿದ ನಟ ರಣ್​ವೀರ್​ ಸಿಂಗ್ - ranveer deepika divorce news

'ನಾನು ಮತ್ತು ದೀಪಿಕಾ ಪಡುಕೋಣೆ 2012ರಲ್ಲಿ ಡೇಟಿಂಗ್​ ಮಾಡಲು ಆರಂಭಿಸಿದೆವು. 2022ಕ್ಕೆ 10 ವರ್ಷ ಆಯ್ತು, ಎಲ್ಲವೂ ಸರಿ ಇದೆ, ಆ ದೇವರಿಗೆ ಧನ್ಯವಾದ' ಎಂದು ನಟ ರಣ್​ವೀರ್​ ಸಿಂಗ್ ಹೇಳುವ ಮೂಲಕ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ.

actor ranveer singh speaks on actress deepika padukone
ದೀಪ್​ವೀರ್ ದಾಂಪತ್ಯದಲ್ಲಿ ಬಿರುಕು
author img

By

Published : Sep 29, 2022, 1:38 PM IST

Updated : Sep 29, 2022, 3:24 PM IST

ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಮತ್ತು ನಟ ರಣ್​ವೀರ್​ ಸಿಂಗ್​ ಅವರ ದಾಂಪತ್ಯ ಜೀವನದಲ್ಲಿ ಬಿರುಕು ಮೂಡಿದೆಯೆನ್ನುವ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡಿ ಅಭಿಮಾನಿಗಳ ಚಿಂತೆಗೆ ಕಾರಣವಾಗಿತ್ತು. ಆದರೀಗ ಈ ಬಗ್ಗೆ ಸ್ವತಃ ನಟ ರಣ್​ವೀರ್​ ಸಿಂಗ್ ಮೌನ ಮುರಿದಿದ್ದು, ಅಭಿಮಾನಿಗಳು ನಿರಾಳರಾಗಿದ್ದಾರೆ.

ದೀಪಿಕಾ ಮತ್ತು ರಣವೀರ್​​ ನಡುವೆ ಎಲ್ಲವೂ ಸರಿ ಇಲ್ಲ ಎಂದು ಉಮೈರ್​ ಸಂಧು ಟ್ವೀಟ್ ಮಾಡಿದ್ದರು. ಇದನ್ನು ನೋಡಿ ಅಭಿಮಾನಿಗಳಿಗೆ ಶಾಕ್​ ಆಗಿತ್ತು.

ಅಂದಹಾಗೆ, ಇವರು ವಿದೇಶಿ ಸೆನ್ಸಾರ್​ ಮಂಡಳಿಯ ಸದಸ್ಯ. ಭಾರತದ ಸಿನಿಮಾಗಳನ್ನು ಅವರು ವಿಮರ್ಶೆ ಮಾಡುತ್ತಾರೆ. ಆ ಮೂಲಕ ಅವರು ಸೋಶಿಯಲ್​ ಮೀಡಿಯಾದಲ್ಲಿ ಫೇಮಸ್​. ಅವರ ಖಾತೆಯನ್ನು ಬಹಳಷ್ಟು ಸಿನಿಪ್ರಿಯರು ಫಾಲೋ ಮಾಡುತ್ತಾರೆ. ಈಗ ಏಕಾಏಕಿ ದೀಪಿಕಾ ಪಡುಕೋಣೆ ಮತ್ತು ರಣವೀರ್​ ಸಿಂಗ್​ ಸಂಸಾರದ ಬಿರುಕಿನ ಬಗ್ಗೆ ಉಮೈರ್ ಸಂಧು ಟ್ವೀಟ್​ ಮಾಡಿರುವುದು ಫ್ಯಾನ್ಸ್​ ಆತಂಕಕ್ಕೆ ಕಾರಣ ಆಗಿತ್ತು.

ಆದರೆ ಇತ್ತೀಚೆಗೆ ನಡೆದ ಕಾರ್ಯಕ್ರಮವೊಂದರಲ್ಲಿ ಈ ಕುರಿತು ರಣವೀರ್ ಸಿಂಗ್​ ಅವರಿಗೆ ನೇರವಾಗಿ ಪ್ರಶ್ನೆ ಮಾಡಲಾಗಿದೆ. ಅದಕ್ಕೆ ಪ್ರತಿಕ್ರಿಯಿಸಿದ ಅವರು, 'ನಾನು ಮತ್ತು ದೀಪಿಕಾ ಪಡುಕೋಣೆ 2012ರಲ್ಲಿ ಡೇಟಿಂಗ್​ ಮಾಡಲು ಆರಂಭಿಸಿದೆವು. 2022ಕ್ಕೆ 10 ವರ್ಷ ಆಯ್ತು, ಎಲ್ಲವೂ ಸರಿ ಇದೆ, ಆ ದೇವರಿಗೆ ಧನ್ಯವಾದ' ಎಂದು ಹೇಳುವ ಮೂಲಕ ತಾವಿಬ್ಬರೂ ಇನ್ನೂ ಅನ್ಯೋನ್ಯವಾಗಿಯೇ ಇದ್ದೇವೆ ಎಂದು ಹೇಳಿದ್ದಾರೆ. ಇದನ್ನು ಕೇಳಿದ ಅಭಿಮಾನಿಗಳಿಗೆ ಸಮಾಧಾನ ಆಗಿದೆ.

actor ranveer singh speaks on actress deepika padukone
ದೀಪ್​ವೀರ್ ಜೋಡಿ

ಇದನ್ನೂ ಓದಿ: ಹುಟ್ಟುಹಬ್ಬದ ಸಂಭ್ರಮದಲ್ಲಿ ಬಹುಭಾಷಾ ನಟಿ ಖುಷ್ಬೂ.. ಸುಂದರ ಚೆಲುವೆಗೆ ಶುಭಾಶಯಗಳ ಮಹಾಪೂರ

ಇನ್ನು, ಈ ವರ್ಷ ರಣವೀರ್​ ಸಿಂಗ್​ ಅವರಿಗೆ ಫಿಲ್ಮ್​ಫೇರ್​ ಪ್ರಶಸ್ತಿ ದಕ್ಕಿದೆ. ಅದನ್ನು ಸ್ವೀಕರಿಸುವಾಗ ವೇದಿಕೆ ಮೇಲೆ ದೀಪಿಕಾರನ್ನೂ ಕರೆದರು. 'ನನ್ನ ಯಶಸ್ಸಿನ ಗುಟ್ಟು ನನ್ನ ಪತ್ನಿ ದೀಪಿಕಾ ಪಡುಕೋಣೆ' ಎಂದು ರಣವೀರ್​ ಹೇಳಿದ್ದ ವಿಡಿಯೋ ತುಣುಕು ವೈರಲ್​ ಆಗಿತ್ತು. ಇದಲ್ಲದೇ ಬಹುತೇಕ ವೇದಿಕೆಗಳಲ್ಲಿ ರಣ್​ವೀರ್​ ಅವರು ದೀಪಿಕಾ ಮೇಲಿನ ಪ್ರೀತಿ ವ್ಯಕ್ತಪಡಿಸಿದ್ದಾರೆ.

Last Updated : Sep 29, 2022, 3:24 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.