ಸೂಪರ್‌ಸ್ಟಾರ್ ರಣ್ವೀರ್ ಸಿಂಗ್ ಅವರ ಅದ್ಭುತವಾದ ಕೆಲಸಕ್ಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗೌರವ ಸಲ್ಲಿಸಲಾಗುತ್ತಿದೆ. ವಿಶೇಷ ಗೌರವವನ್ನು ಸ್ವೀಕರಿಸಲು ಪ್ರತಿಷ್ಠಿತ ಮರ್ಕೆಚ್ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ತೆರಳಿದ್ದಾರೆ.
ಫಿಲ್ಮ್ ಫೆಸ್ಟ್‌ನಲ್ಲಿ ಅವರಿಗೆ ವಿಶೇಷ ಗೌರವ ಎಟೊಯಿಲ್ ಡಿ'ಓರ್ ಪ್ರಶಸ್ತಿಯನ್ನು ( Etoile d'Or award) ಪ್ರದಾನ ಮಾಡಲಾಗುತ್ತದೆ. ಈ ಗೌರವಕ್ಕೆ ಭಾಗಿಯಾದವರ ಪೈಕಿ, ರಣ್ವೀರ್ ಸಿಂಗ್ ಅತ್ಯಂತ ಕಿರಿಯ ನಟರಲ್ಲಿ ಒಬ್ಬರಾಗಿದ್ದಾರೆ. ಈ ಉತ್ಸವದಲ್ಲಿ ರಣವೀರ್ ಅವರ ಸೂಪರ್ಹಿಟ್ ಸಿನಿಮಾಗಳಾದ ಬಾಜಿರಾವ್ ಮಸ್ತಾನಿ, ಗಲ್ಲಿ ಬಾಯ್ ಮತ್ತು ಪದ್ಮಾವತ್ ಅನ್ನು ಪ್ರದರ್ಶಿಸಲಾಗುತ್ತದೆ.
ಈ ಪ್ರದರ್ಶನಗಳಲ್ಲಿ ಪಾವೊಲೊ ಸೊರೆಂಟಿನೊ, ಜೇಮ್ಸ್ ಗ್ರೇ, ಮರಿಯನ್ ಕೊಟಿಲಾರ್ಡ್, ಸುಝೇನ್ ಬಿಯರ್, ಆಸ್ಕರ್ ಐಸಾಕ್, ವನೆಸ್ಸಾ ಕಿರ್ಬಿ, ಡಯೇನ್ ಕ್ರುಗರ್, ಜಸ್ಟಿನ್ ಕುರ್ಜೆಲ್, ಎಸ್ಸಿ ಡೇವಿಸ್, ನಡಿನ್ ಲಬಾಕಿ, ಲಾ-ಲಾ ಮರಕ್ಚಿ, ತಹರ್ ರಹೀಮ್ ಸೇರಿ ಮೊದಲಾದ ವಿಶ್ವ ಸಿನಿಮಾ ಐಕಾನ್‌ಗಳು ಭಾಗವಹಿಸಲಿದ್ದಾರೆ. ಇದು 19ನೇ ಆವೃತ್ತಿಯ ಮರ್ಕೆಚ್ ಇಂಟರ್ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ ಆಗಿದ್ದು, ರಣ್ವೀರ್ಗೆ ಎಟೊಯಿಲ್ ಡಿ'ಒರ್ ಪ್ರಶಸ್ತಿ ನೀಡಲಾಗುವುದು.
ಇದನ್ನೂ ಓದಿ: ''I said Yes''.. ಮಲೈಕಾ-ಅರ್ಜುನ್ ಮದುವೆ.. ಅಭಿಮಾನಿಗಳ ಚರ್ಚೆ ಜೋರು
ಈ ಹಿಂದೆ ಅಮಿತಾಭ್ ಬಚ್ಚನ್, ಶಾರುಖ್ ಖಾನ್ ಮತ್ತು ಅಮೀರ್ ಖಾನ್ ಸೇರಿ ಕೆಲವರು ಈ ಪ್ರಶಸ್ತಿ ಪಡೆದಿದ್ದಾರೆ. ನಾಳೆ ಇಂದ ಪ್ರಶಸ್ತಿ ಸಮಾರಂಭ ಸಲುವಾಗಿ ರಣ್ವೀರ್ ನವೆಂಬರ್ 13 ರವರೆಗೆ ಮೊರೊಕನ್ ನಗರದಲ್ಲಿರಲಿದ್ದಾರೆ.