ETV Bharat / entertainment

ವೈಎಸ್‌ಆರ್‌ಸಿಪಿ ನಾಯಕರು ರಜನಿಕಾಂತ್​ ಬಳಿ ಕ್ಷಮೆಯಾಚಿಸಬೇಕು: ಅಭಿಮಾನಿಗಳ ಡಿಮ್ಯಾಂಡ್​

ಎನ್‌ಟಿಆರ್ 100ನೇ ಜನ್ಮ ವಾರ್ಷಿಕೋತ್ಸವದ ಸಂಭ್ರಮಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ನಟ ರಜನಿಕಾಂತ್​ ವಿರುದ್ಧ ವೈಎಸ್‌ಆರ್‌ಸಿಪಿ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದರು. ಇದನ್ನು ಖಂಡಿಸಿದ ರಜನಿಕಾಂತ್​ ಅಭಿಮಾನಿಗಳು ವೈಎಸ್‌ಆರ್‌ಸಿಪಿ ನಾಯಕರ ಕ್ಷಮೆ ಕೇಳಬೇಕೆಂದು ಪಟ್ಟು ಹಿಡಿದಿದ್ದಾರೆ.

Actor rajinikanth fans demand  Actor rajinikanth fans demand to ysrcp leaders  fans demand to ysrcp leaders apologize him  Actor rajinikanth news  ವೈಎಸ್‌ಆರ್‌ಸಿಪಿ ನಾಯಕರು ರಜನಿಕಾಂತ್​ ಬಳಿ ಕ್ಷಮೆ  ಅಭಿಮಾನಿಗಳು ಡಿಮ್ಯಾಂಡ್​ ಎನ್‌ಟಿಆರ್ 100ನೇ ಜನ್ಮ ವಾರ್ಷಿಕೋತ್ಸವದ ಸಂಭ್ರಮಾಚರಣೆ  ನಟ ರಜನಿಕಾಂತ್​ ವಿರುದ್ಧ ವೈಎಸ್‌ಆರ್‌ಸಿಪಿ ನಾಯಕರ ಆಕ್ರೋಶ  ಜನಪ್ರಿಯ ನಾಯಕ ರಜನಿಕಾಂತ್  ರಜನಿಕಾಂತ್ ಅಭಿಮಾನಿಗಳು ವೈಎಸ್‌ಆರ್‌ಸಿಪಿ ನಾಯಕರ ಕ್ಷಮೆ  ಟೀಕಿಸಿದವರ ಮೇಲೆ ಅಭಿಮಾನಿಗಳು ಆಕ್ರೋಶ  YSRCPApologizeRajini
ವೈಎಸ್‌ಆರ್‌ಸಿಪಿ ನಾಯಕರು ರಜನಿಕಾಂತ್​ ಬಳಿ ಕ್ಷಮೆಯಾಚಿಸಬೇಕು
author img

By

Published : May 1, 2023, 8:02 AM IST

ವಿಜಯವಾಡ, ಆಂಧ್ರಪ್ರದೇಶ: ಜನಪ್ರಿಯ ನಾಯಕ ರಜನಿಕಾಂತ್ ಅಭಿಮಾನಿಗಳು ವೈಎಸ್‌ಆರ್‌ಸಿಪಿ ನಾಯಕರ ಕ್ಷಮೆಯಾಚಿಸಬೇಕೆಂದು ಟ್ವಿಟರ್‌ನಲ್ಲಿ ಒತ್ತಾಯಿಸುತ್ತಿದ್ದಾರೆ. ರಜನಿಕಾಂತ್ ಅವರನ್ನು ಟೀಕಿಸಿದವರ ಮೇಲೆ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದು, ಸಾಮಾಜಿಕ ಜಾಲತಾಣದಲ್ಲಿ #YSRCPApologizeRajini ಹ್ಯಾಶ್‌ಟ್ಯಾಗ್‌ನೊಂದಿಗೆ ಕಾಮೆಂಟ್‌ಗಳ ಜೊತೆಗೆ ಮೀಮ್‌ಗಳನ್ನು ಪೋಸ್ಟ್ ಮಾಡುತ್ತಿದ್ದಾರೆ. ಈ ಹ್ಯಾಶ್‌ಟ್ಯಾಗ್ ಕೆಲವೇ ಕ್ಷಣಗಳಲ್ಲಿ ಟ್ರೆಂಡಿಂಗ್ ಆಗಿತ್ತು.

ಶುಕ್ರವಾರ ವಿಜಯವಾಡದ ವೇದಿಕೆಯಲ್ಲಿ ಎನ್‌ಟಿಆರ್ 100ನೇ ಜನ್ಮ ವಾರ್ಷಿಕೋತ್ಸವದ ಸಂಭ್ರಮಾಚರಣೆ ನಡೆದಿದ್ದು ಗೊತ್ತೇ ಇದೆ. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಬಂದಿದ್ದ ನಟ ರಜನಿಕಾಂತ್ ಅವರನ್ನು ನಂದಮೂರಿ ತಾರಕ ರಾಮರಾವ್ ಅವರ ಪುತ್ರ ಹಾಗೂ ಟಾಲಿವುಡ್ ಖ್ಯಾತ ನಟ ಎನ್. ಬಾಲಕೃಷ್ಣ ಅವರು ಇಲ್ಲಿನ ಗನ್ನವರಂ ವಿಮಾನ ನಿಲ್ದಾಣದಲ್ಲಿ ಬರಮಾಡಿಕೊಂಡಿದ್ದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ರಜನಿಕಾಂತ್ ಅವರು ಎನ್‌ಟಿಆರ್, ಆಂಧ್ರದ ಮಾಜಿ ಮುಖ್ಯಮಂತ್ರಿ ಹಾಗೂ ಟಿಡಿಪಿ ನಾಯಕ ಚಂದ್ರಬಾಬು ನಾಯ್ಡು ಅವರೊಂದಿಗಿನ ಒಡನಾಟವನ್ನು ಸ್ಮರಿಸಿಕೊಂಡರು.

ಚಂದ್ರಬಾಬು ಅವರನ್ನು 30 ವರ್ಷಗಳಿಂದ ಬಲ್ಲ ರಜನಿಕಾಂತ್ ಅವರು ಸುದೀರ್ಘ ಭಾಷಣ ಮಾಡಿದರು. ಆ ರೀತಿ ಮಾತನಾಡಿದ್ದಕ್ಕೆ ಎಪಿ ಸಚಿವರಾದ ರೋಜಾ, ಅಂಬಟಿ ರಾಂಬಾಬು, ಗುಡಿವಾಡ ಶಾಸಕ ಕೊಡಲಿ ನಾನಿ ಮುಂತಾದವರು ತೀವ್ರವಾಗಿ ಟೀಕಿಸಿದರು. ರಜನಿ ಅವರಿಗೆ ರಾಜಕೀಯದ ಬಗ್ಗೆ ಮಾತನಾಡುವ ಹಕ್ಕಿಲ್ಲ, ಅವರು ತಮಿಳುನಾಡಿನಲ್ಲಿ ಹೀರೋ ಆಗಿರಬಹುದು, ಆದರೆ ಇಲ್ಲಿ ಅಲ್ಲ, ಪಕ್ಕದ ರಾಜ್ಯದಿಂದ ಬಂದು ನೈತಿಕತೆಯ ಬಗ್ಗೆ ಮಾತನಾಡಿದರೆ ಅವರ ಮಾತು ಕೇಳುವ ಸ್ಥಿತಿಯಲ್ಲಿ ಅವರಿಲ್ಲ ಎಂದು ಕಮೆಂಟ್ ಮಾಡಿದ್ದರು.

"ದೀರ್ಘಕಾಲದ ಗೆಳೆಯನ ಬಗ್ಗೆ ಮಾತನಾಡುವುದರಲ್ಲಿ ತಪ್ಪೇನು?" ರಜನಿಕಾಂತ್ ಅವರು ಯಾರನ್ನೂ ಅವಮಾನಿಸಿಲ್ಲ ಎಂದು ಅನೇಕ ನೆಟ್ಟಿಗರು ರಜನಿಕಾಂತ್ ಅಭಿಮಾನಿಗಳನ್ನು ಬೆಂಬಲಿಸುತ್ತಿದ್ದಾರೆ. ಅಷ್ಟೇ ಅಲ್ಲ ತಮ್ಮ ಗೆಳೆತನದ ಹಳೆಯ ಫೋಟೋಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಒಂದು ಕಡೆ ರಜನೀಕಾಂತ್ ಫೋಟೋ, ಇನ್ನೊಂದು ಕಡೆ ವೈಕಾಪಾ ನಾಯಕರ ಫೋಟೋಗಳು ಹಾಕಿ, 'ಶಿವಾಜಿ' ಚಿತ್ರದ 'ನನ್ನ ಪಾಂಡುಲೆ' ಗುಂಪು ಗುಂಪಾಗಿ ಬರುತ್ತಾವೆ. ‘ಸಿಂಹಂ ಬರೀ ಸಿಂಗಲ್’ ಎಂಬ ಡೈಲಾಗ್‌ನೊಂದಿಗೆ ಮೀಮ್‌ಗಳು ಸೃಷ್ಟಿಯಾಗಿದ್ದವು. ಈ ಮೀಮ್‌ಗಳು ನೆಟ್‌ನಲ್ಲಿ ಭಾರೀ ವೈರಲ್ ಆಗಿವೆ.

ತೆಲುಗು ರಾಜ್ಯಗಳ ಜನ ಮನದಲ್ಲಿ ನಂದಮೂರಿ ತಾರಕ ರಾಮರಾವ್ ಅವರು ದೇವಮಾನವರಾಗಿ ಅಚ್ಚಳಿಯದೇ ಉಳಿದಿದ್ದಾರೆ. ತೆಲುಗು ಚಿತ್ರರಂಗದ ಪ್ರಸಿದ್ಧ ನಟ. 300ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ನಟಿಸಿರುವ ಇವರು ಪೌರಾಣಿಕ ಪಾತ್ರಗಳನ್ನು ಮಾಡಲು ಹೆಸರುವಾಸಿಯಾಗಿದ್ದರು. ಕೃಷ್ಣಾರ್ಜುನ ಯುದ್ಧಂ (1962) ಮತ್ತು ದಾನ ವೀರ ಶೂರ ಕರ್ಣ ಸೇರಿದಂತೆ 17ಕ್ಕೂ ಹೆಚ್ಚು ಚಿತ್ರಗಳಲ್ಲಿ ಎನ್​​​ಆರ್ ಶ್ರೀಕೃಷ್ಣನ ಪಾತ್ರವನ್ನು ನಿರ್ವಹಿಸಿದ್ದಾರೆ. ಅಮೋಘ ಅಭಿನಯದ ಮೂಲಕ ಕೋಟ್ಯಂತರ ಅಭಿಮಾನಿಗಳನ್ನು ಸಂಪಾದಿಸಿದ್ದರು. ಅವರು 1982ರಲ್ಲಿ ತೆಲುಗು ದೇಶಂ ಪಕ್ಷ ಕಟ್ಟುವ ಮೂಲಕ ರಾಜಕೀಯಕ್ಕೆ ಪ್ರವೇಶಿಸಿದರು. ಒಂಬತ್ತು ತಿಂಗಳಲ್ಲಿ ಅಧಿಕಾರಕ್ಕೆ ಬರುವ ಮೂಲಕ ದಾಖಲೆ ಸೃಷ್ಟಿಸಿದರು.

ಓದಿ: ಚಂದ್ರಬಾಬು ಅವರ ದೃಷ್ಟಿಕೋನ ಅಳವಡಿಸಿದರೆ, ಹೈದರಾಬಾದ್​ ದೇಶದಲ್ಲಿಯೇ ಉನ್ನತ ಸ್ಥಾನಕ್ಕೆರಲಿದೆ; ರಜಿನಿಕಾಂತ್​​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.