ಎಸ್.ಎಸ್.ರಾಜಮೌಳಿ ನಿರ್ದೇಶನದ ಟಾಲಿವುಡ್ ಸೂಪರ್ಸ್ಟಾರ್ಗಳಾದ ಜೂನಿಯರ್ ಎನ್ಟಿಆರ್ ಮತ್ತು ರಾಮ್ಚರಣ್ ಅಭಿನಯದ ತೆಲುಗು ಸಿನಿಮಾ ಆರ್ಆರ್ಆರ್ನ ನಾಟು ನಾಟು ಹಾಡಿಗೆ ಅತ್ಯುತ್ತಮ ಮೂಲ ಗೀತೆ ವಿಭಾಗದಲ್ಲಿ ಪ್ರತಿಷ್ಟಿತ ಆಸ್ಕರ್ ಪ್ರಶಸ್ತಿ ಲಭಿಸಿದೆ. ದೇಶ ವಿದೇಶದ ಗಣ್ಯರು, ಸೆಲೆಬ್ರಿಟಿಗಳು, ಅಭಿಮಾನಿಗಳು ಸೇರಿದಂತೆ ಅನೇಕರು ಚಿತ್ರ ತಂಡಕ್ಕೆ ಅಭಿನಂದನೆ ತಿಳಿಸುತ್ತಿದ್ದಾರೆ. ಈ ಸಾಲಿನಲ್ಲಿ ರಾಜಕೀಯ ನಾಯಕರು ಕೂಡ ಸೇರಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಸೇರಿದಂತೆ ಅನೇಕ ಬಿಜೆಪಿ ನಾಯಕರು ಶುಭಾಶಯಗಳನ್ನು ಕೋರಿದ್ದಾರೆ. ಆದರೆ, ಹಿಂದೊಮ್ಮೆ ಕೆಲವು ಬಿಜೆಪಿ ನಾಯಕರು ಆರ್ಆರ್ಆರ್ ಸಿನಿಮಾವನ್ನು ಟೀಕಿಸಿದ್ದರು. ಇದನ್ನು ಟ್ವಿಟರ್ನಲ್ಲಿ ಪ್ರಸ್ತಾಪಿಸಿರುವ ನಟ ಪ್ರಕಾಶ್ ರಾಜ್ ಟೀಕಾ ಪ್ರಹಾರ ನಡೆಸಿದ್ದಾರೆ. ಆರ್ಆರ್ಆರ್ ಸಿನಿಮಾವನ್ನು ಬಹಿಷ್ಕರಿಸಲು ಹೇಳಿದ್ದ, ಚಿತ್ರ ಮಂದಿರಗಳನ್ನು ಸುಡುವುದಾಗಿ ಹೇಳಿದ್ದ ಬಿಜೆಪಿಯ ಧರ್ಮಾಂಧರು ಈಗ ಎಲ್ಲಿ ಅಡಗಿಕೊಂಡಿದ್ದಾರೆ? ಎಂದು ಪ್ರಶ್ನಿಸಿದ್ದಾರೆ.
-
#Oscars2023 ..
— Prakash Raj (@prakashraaj) March 13, 2023 " class="align-text-top noRightClick twitterSection" data="
and the Bigots of supreME s bjp wanted to boycott #RRR and burn down the theatres . Where are they hiding now?? ವಿಸ್ವಗುರುವಿನ ಶಿಷ್ಯರು #RRR ಸಿನೆಮಾನ ಬ್ಯಾನ್ ಮಾಡಿ .. ಚಿತ್ರಮಂದಿರಗಳನ್ನ ಕೆಡುವುತೀವಿ ಅಂದಿದ್ರು.. ಎಲ್ ಮಕ್ಕಾಡೆ ಮಲ್ಕೊಂಡವ್ರೆ ನೋಡ್ರಪಾ… #justasking pic.twitter.com/J3o0RckKi7
">#Oscars2023 ..
— Prakash Raj (@prakashraaj) March 13, 2023
and the Bigots of supreME s bjp wanted to boycott #RRR and burn down the theatres . Where are they hiding now?? ವಿಸ್ವಗುರುವಿನ ಶಿಷ್ಯರು #RRR ಸಿನೆಮಾನ ಬ್ಯಾನ್ ಮಾಡಿ .. ಚಿತ್ರಮಂದಿರಗಳನ್ನ ಕೆಡುವುತೀವಿ ಅಂದಿದ್ರು.. ಎಲ್ ಮಕ್ಕಾಡೆ ಮಲ್ಕೊಂಡವ್ರೆ ನೋಡ್ರಪಾ… #justasking pic.twitter.com/J3o0RckKi7#Oscars2023 ..
— Prakash Raj (@prakashraaj) March 13, 2023
and the Bigots of supreME s bjp wanted to boycott #RRR and burn down the theatres . Where are they hiding now?? ವಿಸ್ವಗುರುವಿನ ಶಿಷ್ಯರು #RRR ಸಿನೆಮಾನ ಬ್ಯಾನ್ ಮಾಡಿ .. ಚಿತ್ರಮಂದಿರಗಳನ್ನ ಕೆಡುವುತೀವಿ ಅಂದಿದ್ರು.. ಎಲ್ ಮಕ್ಕಾಡೆ ಮಲ್ಕೊಂಡವ್ರೆ ನೋಡ್ರಪಾ… #justasking pic.twitter.com/J3o0RckKi7
"ಬಿಜೆಪಿಯ ಧರ್ಮಾಂಧರು ಆರ್ಆರ್ಆರ್ ಸಿನಿಮಾವನ್ನು ಬಾಯ್ಕಾಟ್ ಮಾಡಲು ಮತ್ತು ಚಿತ್ರ ಮಂದಿರಗಳನ್ನು ಕೆಡವಲು ಬಯಸಿದ್ದರು. ಈಗ ಅವರು ಎಲ್ಲಿ ಅಡಗಿದ್ದಾರೆ. ವಿಸ್ವಗುರುವಿನ ಶಿಷ್ಯರು ಆರ್ಆರ್ಆರ್ ಸಿನಿಮಾನ ಬ್ಯಾನ್ ಮಾಡಿ, ಚಿತ್ರ ಮಂದಿರಗಳನ್ನು ಕೆಡವ್ತೀವಿ ಅಂದಿದ್ರು. ಎಲ್ ಮಕ್ಕಾಡೆ ಮಲ್ಕೊಂಡವ್ರೆ ನೋಡ್ರಪಾ?" ಎಂದು ವ್ಯಂಗ್ಯ ಮಾಡಿದ್ದಾರೆ.
ಇಂದು ಪ್ರಪಂಚದಾದ್ಯಂತ ಮನ್ನಣೆ ಗಳಿಸಿರುವ ಆರ್ಆರ್ಆರ್ ಸಿನಿಮಾ ಬಿಡುಗಡೆಗೊಂಡ ಸಮಯದಲ್ಲಿ ಕೆಲವು ಬಿಜೆಪಿ ನಾಯಕರಿಂದ ವಿರೋಧ ಎದುರಿಸಿತ್ತು. ಚಿತ್ರದಲ್ಲಿ ಕೋಮರಮ್ ಭೀಮನನ್ನು ಬಿಂಬಿಸಿದ ರೀತಿಗೆ ತೆಲಂಗಾಣದ ಬಿಜೆಪಿ ನಾಯಕರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಮುಸ್ಲಿಮರು ಧರಿಸುವ ಟೋಪಿಯನ್ನು ಭೀಮನ ಪಾತ್ರಧಾರಿ ಜೂನಿಯರ್ ಎನ್ಟಿಆರ್ಗೆ ತೊಡಿಸಿದ್ದಕ್ಕೆ ಆರ್ಆರ್ಆರ್ ವಿರುದ್ಧ ಬಿಜೆಪಿ ನಾಯಕರು ಆಕ್ಷೇಪ ವ್ಯಕ್ತಪಡಿಸಿದ್ದರು. ಜೊತೆಗೆ ಚಿತ್ರಕ್ಕೆ ಅಡ್ಡಿಪಡಿಸುವುದಾಗಿಯೂ ಹೇಳಿದ್ದರು.
ಇದನ್ನೂ ಓದಿ: 'ದ ಎಲಿಫೆಂಟ್ ವಿಸ್ಪರರ್ಸ್' ಅತ್ಯುತ್ತಮ ಕಿರು ಸಾಕ್ಷ್ಯಚಿತ್ರ: ಒಲಿದು ಬಂತು ಆಸ್ಕರ್ ಪ್ರಶಸ್ತಿ!.. ಬೆಳ್ಳಿ ಹೇಳಿದ್ದೇನು?
ಆರ್ಆರ್ಆರ್ಗೆ ಆಸ್ಕರ್ ಗರಿ: 2023 ರ ಅಕಾಡೆಮಿ ಪ್ರಶಸ್ತಿಗೆ ಭಾರತದ 'ನಾಟು ನಾಟು' ಹಾಡು ಮತ್ತು ಲಿಫ್ಟ್ ಮಿ ಅಪ್ , ದಿಸ್ ಈಸ್ ಲೈಫ್, ಹೋಲ್ಡ್ ಮೈ ಹ್ಯಾಂಡ್, ಅಪ್ಲೌಸ್ ಹಾಡುಗಳು ನಾಮನಿರ್ದೇಶನಗೊಂಡಿದ್ದವು. ಆದರೆ, ಈ ಎಲ್ಲಾ ಗೀತೆಯನ್ನು ಹಿಂದಿಕ್ಕಿ ಆರ್ಆರ್ಆರ್ ಸಿನಿಮಾದ ನಾಟು ನಾಟು ಹಾಡು ಆಸ್ಕರ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ.
ಅಲ್ಲದೇ ಈ ಹಾಡಿಗೆ ಈಗಾಗಲೇ ಕ್ರಿಟಿಕ್ಸ್ ಚಾಯ್ಸ್ ಅವಾರ್ಡ್ಸ್, ಗೋಲ್ಡನ್ ಗ್ಲೋಬ್, ಹಾಲಿವುಡ್ ಮ್ಯೂಸಿಕ್ ಇನ್ ಮಿಡಿಯಾ ಅವಾರ್ಡ್ಸ್ ಸೇರಿದಂತೆ ಹಲವಾರು ಪ್ರಶಸ್ತಿಗಳು ಲಭಿಸಿವೆ. ಇದೀಗ ಆಸ್ಕರ್ ಅವಾರ್ಡ್ ಕೂಡ ದಕ್ಕಿದ್ದು, 'ಬೆಸ್ಟ್ ಒರಿಜಿನಲ್ ಸಾಂಗ್’ ವಿಭಾಗದಲ್ಲಿ ಆಸ್ಕರ್ ಪಡೆದ ಮೊದಲ ಭಾರತೀಯ ಗೀತೆಯಾಗಿ ಹೊರಹೊಮ್ಮಿದೆ.
ಇದನ್ನೂ ಓದಿ: ಏಷ್ಯಾದ ಹಳೆಯ ಆನೆ ಶಿಬಿರದಲ್ಲಿ ಆಸ್ಕರ್ ವಿಜೇತ 'ದ ಎಲಿಫೆಂಟ್ ವಿಸ್ಪರರ್ಸ್' ನಿರ್ಮಾಣ