ETV Bharat / entertainment

ಮೂಲ ಮೈಸೂರು, 100ಕ್ಕೂ ಹೆಚ್ಚು ಸಿನಿಮಾಗಳಿಗೆ ನೃತ್ಯ ಸಂಯೋಜನೆ: ಪ್ರಭು ದೇವಗಿಂದು 50ನೇ ಜನ್ಮದಿನ ಸಂಭ್ರಮ

ನಟ, ನೃತ್ಯ ನಿರ್ದೇಶಕ ಪ್ರಭು ದೇವ ಇಂದು 50ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ.

prabhu deva
ಪ್ರಭು ದೇವ
author img

By

Published : Apr 3, 2023, 1:11 PM IST

ಭಾರತದ ಮೈಕೆಲ್​ ಜಾಕ್ಸನ್​ ಖ್ಯಾತಿಯ ನಟ, ನೃತ್ಯ ನಿರ್ದೇಶಕ ಪ್ರಭು ದೇವ ಅವರಿಗಿಂದು ಹುಟ್ಟುಹಬ್ಬದ ಸಂಭ್ರಮ. 1973ರ ಏಪ್ರಿಲ್​ 3 ರಂದು ಜನಿಸಿದ ಇವರು 50ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಮೂಲತಃ ಮೈಸೂರಿನವರೇ ಆದ ಪ್ರಭು ದೇವ ಸದ್ಯ ಬಹು ಭಾಷೆಗಳಲ್ಲಿ ಸಾಕಷ್ಟು ಜನಪ್ರಿಯತೆ ಸಂಪಾದಿಸಿದ್ದಾರೆ. ಕೇವಲ ಒಂದು ಭಾಷೆಗೆ ಸೀಮಿತವಾಗಿರದೇ, ಬಹುಭಾಷೆಗಳಲ್ಲಿ ತಮ್ಮ ವೃತ್ತಿ ಜೀವನವನ್ನು ವಿಸ್ತರಿಸಿದ್ದಾರೆ. ಜೊತೆಗೆ ಭಾರತ ದೇಶದಲ್ಲೇ ನೃತ್ಯ ಸಂಯೋಜನೆಗೆ ಹೊಸ ಆಯಾಮವನ್ನು ತಂದುಕೊಟ್ಟ ಒಬ್ಬ ಅದ್ಭುತ ಕಲಾವಿದ ಎಂಬ ಹೆಗ್ಗಳಿಕೆ ಇವರದ್ದು.

ಪ್ರಭು ದೇವ ಅವರ ತಂದೆ ದಕ್ಷಿಣ ಭಾರತದ ಖ್ಯಾತ ನೃತ್ಯ ನಿರ್ದೇಶಕ ಮೂಗೂರು ಸುಂದರಂ. ತಂದೆಯಿಂದಲೇ ಸ್ಪೂರ್ತಿ ಪಡೆದ ಇವರು ಭರತನಾಟ್ಯ, ಪಾಶ್ಚಾತ್ಯ ನೃತ್ಯ ಕಲಿತರು. ಇವರ ಸಹೋದರರಾದ ರಾಜು ಸುಂದರಂ ಮತ್ತು ನಾಗೇಂದ್ರ ಪ್ರಸಾದ ಕೂಡ ನೃತ್ಯ ಸಂಯೋಜಕರು ಮತ್ತು ನಟರು. ನೂರಕ್ಕೂ ಹೆಚ್ಚು ಚಿತ್ರಗಳಿಗೆ ನೃತ್ಯ ಸಂಯೋಜನೆ ಮಾಡಿರುವ ಪ್ರಭು ದೇವ, ಅನೇಕ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಇವರು ತಮಿಳು, ತೆಲುಗು, ಹಿಂದಿ, ಮಲಯಾಳಂ ಮತ್ತು ಕನ್ನಡ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ.

ಇದನ್ನೂ ಓದಿ: 'ಡಾಲಿ ನಟ ರಾಕ್ಷಸ, ನವೀನ್​​ ಹೊಸ ರಾಕ್ಷಸ': 'ಗುರುದೇವ್​ ಹೊಯ್ಸಳ'ನಿಗೆ ಸಿನಿ ತಾರೆಗಳ ಮೆಚ್ಚುಗೆ

ಪ್ರಭು ದೇವ ಸಿನಿಮಾಗಳಿವು..: ಪ್ರಭು ದೇವ ನಾಯಕ ನಟನಾಗಿ ಮೊದಲು ಅಭಿನಯಿಸಿದ ಸಿನಿಮಾ ಕಾಧಲನ್​. ಬಳಿಕ ರಾಸಯ್ಯ, ಲವ್ ಬರ್ಡ್ಸ್​, ಮಿಸ್ಟರ್​ ರೋಮಿಯೋ, ಮಿನ್ಸಾರ ಕನವ್​, ವಿಐಪಿ, ನಾಮ್​ ಇರುವರ್​ ನಮಕ್ಕೂ ಇರುವರ್​, ಎಬಿಸಿಡಿ, ದೇವಿ, ಲಕ್ಷೀ, ಚಾರ್ಲಿ ಚಾಪ್ಲಿನ್​ 2, ದೇವಿ 2, ಪೊನ್​ ಮನಿಕ್ಕಾವಿಲ್​, ಥೀಲ್​, ಮೈ ಡಿಯರ್​ ಭೂತಮ್​, ಪೊಯಿಕ್ಕಲ್ ಕುದಿರಲ್​, ಭಗೀರ ಹೀಗೆ ಅನೇಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ತೆಲುಗು ಚಿತ್ರ ನುವ್ವೊಸ್ತಾನಂತೆ ನೇನೊದ್ದಂಟಾನಾದಿಂದ ನಿರ್ದೇಶನಕ್ಕಿಳಿದ ಇವರು ಮುಂದೆ ಪೌರ್ಣಮಿ, ಪೊಕಿರಿ, ಶಂಕರದಾದಾ ಜಿಂದಾಬಾದ್​, ವಿಲ್ಲು, ವಾಂಟೆಡ್​ ಮುಂತಾದ ಚಿತ್ರಗಳಲ್ಲಿ ನಿರ್ದೇಶಿಸಿದ್ದಾರೆ.

ಇದನ್ನೂ ಓದಿ: ಇಂಡಿಯನ್ ಐಡಲ್ ಸೀಸನ್​-13: ವಿಜೇತ 'ರಿಷಿ ಸಿಂಗ್'​ಗೆ ಬಂಪರ್​ ಬಹುಮಾನ

ವೀಕೆಂಡ್​​ ವಿತ್​ ರಮೇಶ್​ ಶೋನಲ್ಲಿ ಭಾಗಿ: ನಟ ರಮೇಶ್ ಅರವಿಂದ್​ ನಡೆಸಿಕೊಡುವ ಕನ್ನಡದ ಜನಪ್ರಿಯ ರಿಯಾಲಿಟಿ ಶೋ ವೀಕೆಂಡ್ ವಿತ್​ ರಮೇಶ್​ನಲ್ಲಿ ಎರಡನೇ ಅತಿಥಿಯಾಗಿ ಪ್ರಭು ದೇವ ಭಾಗಿಯಾಗಿದ್ದರು. ಅವರು ಬಹುಭಾಷೆ ನಟನಾಗಿದ್ದರೂ ಕನ್ನಡದಲ್ಲೇ ಮಾತನಾಡಿ ಪ್ರೇಕ್ಷಕರ ಗಮನ ಸೆಳೆಯುವಲ್ಲಿ ಯಶಸ್ವಿಯಾದರು. ಕೊಂಚ ಏರುಪೇರಾದರೂ ಅವರ ಕನ್ನಡ ಪ್ರೇಮಕ್ಕೆ ಕನ್ನಡಿಗರು ಫುಲ್​ ಮಾರ್ಕ್ ಕೊಟ್ಟಿದ್ದಾರೆ. ಪ್ರಭು ದೇವ ಕುಟುಂಬಸ್ಥರೂ ಕೂಡ ಕನ್ನಡದಲ್ಲೇ ಮಾತನಾಡಿದರು. ಕಾರ್ಯಕ್ರಮದಲ್ಲಿ ಅವರ 50 ನೇ ಹುಟ್ಟುಹಬ್ಬವನ್ನು ಕೂಡ ಅದ್ದೂರಿಯಾಗಿ ಆಚರಿಸಲಾಯಿತು.

ಇದನ್ನೂ ಓದಿ: ಇನ್‌ಸ್ಟಾಗ್ರಾಮ್‌ಗೆ ಎಂಟ್ರಿ ಕೊಟ್ಟ ದಳಪತಿ ವಿಜಯ್: ಒಂದೇ ದಿನ 4 ಮಿಲಿಯನ್​ಗೂ ಹೆಚ್ಚು ಫಾಲೋವರ್ಸ್‌!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.