ETV Bharat / entertainment

ಲವ್​​ ಲೈಫ್​ ಬಗ್ಗೆ ಬಾಲಿವುಡ್​ ದೂದ್​ಪೇಡಾ ಕಾರ್ತಿಕ್ ಆರ್ಯನ್ ನಿರೀಕ್ಷೆಗಳೇನು? - ಕಾರ್ತಿಕ್ ಆರ್ಯನ್ ಗರ್ಲ್ ಫ್ರೆಂಡ್

ಶೆಹಜಾದ ಸಿನಿಮಾ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿರುವ ನಟ ಕಾರ್ತಿಕ್ ಆರ್ಯನ್ ತಮ್ಮ ಲವ್​​ ಲೈಫ್​ ಬಗ್ಗೆ ಮಾತನಾಡಿದ್ದಾರೆ.

actor Kartik Aaryan
ನಟ ಕಾರ್ತಿಕ್ ಆರ್ಯನ್
author img

By

Published : Feb 15, 2023, 7:31 PM IST

ಮನೋರಂಜನಾ ಕ್ಷೇತ್ರಕ್ಕೆ ಈಗಾಗಲೇ ಹಲವು ಹಿಟ್ ಸಿನಿಮಾಗಳನ್ನು ನೀಡಿದ್ದಾರೆ ಬಾಲಿವುಡ್‌ನ ರೈಸಿಂಗ್​ ಸ್ಟಾರ್​ ಕಾರ್ತಿಕ್ ಆರ್ಯನ್. ಸ್ವಂತ ಪ್ರತಿಭೆ ಮೂಲಕವೇ ಬಾಲಿವುಡ್​ ಇಂಡಸ್ಟ್ರಿಯಲ್ಲಿ ಮಿನುಗುತ್ತಿರುವ ಸ್ಟಾರ್ ಇವರು. ಚಿಕ್ಕ ವಯಸ್ಸಿನಲ್ಲೇ ಸಿನಿ ಸಾಧನೆ ಮಾಡಿದ ಪ್ರತಿಭಾವಂತ ನಟ. ತೆರೆ ಮೇಲೆ ಹೆಚ್ಚಾಗಿ ಲವರ್ ಬಾಯ್ ಆಗಿ ಕಾಣಿಸಿಕೊಳ್ಳುವ ಕಾರ್ತಿಕ್ ಆರ್ಯನ್ ಅವರಿಗೆ ನಿಜ ಜೀವನದಲ್ಲಿ ಲವರ್​ ಇದ್ದಾರೆಯೇ?. ಇದು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುವ ಪ್ರಶ್ನೆ ನೋಡಿ. ಆದರೆ ಈವರೆಗೆ ಈ ಪ್ರಶ್ನೆಗೆ ಖಚಿತ ಉತ್ತರ ಸಿಕ್ಕಿಲ್ಲ.

ಬಾಲಿವುಡ್​ನ ದೂದ್​ಪೇಡಾ ಲವ್​ಲೈಫ್: ಆನ್​ಸ್ಕ್ರೀನ್​​ನಲ್ಲಿ ಲವರ್​ ಬಾಯ್​, ನೋಡಲು ಸಖತ್​ ಹ್ಯಾಂಡ್​ಸಂ, ಸೂಪರ್​ ಹೈಟ್​ - ವೈಟ್​ - ಪರ್ಸನಾಲಿಟಿ. ಇವರ ಲುಕ್​ಗೆ ಮನಸೋಲದವರು ತೀರಾ ಕಡಿಮೆ. ಬಾಲಿವುಡ್​ನ ದೂದ್​ಪೇಡಾಗೆ ಪ್ರೇಯಸಿ ಇಲ್ಲದಿರುವುದನ್ನು ಮಾತ್ರ ಹೆಚ್ಚಿನ ಅಭಿಮಾನಿಗಳು ಒಪ್ಪಿಕೊಳ್ಳಲು ರೆಡಿ ಇಲ್ಲ.

ನಿರ್ಮಾಪಕರಾಗಿ ನಟ ಕಾರ್ತಿಕ್ ಆರ್ಯನ್: ನಟ ಕಾರ್ತಿಕ್ ಆರ್ಯನ್ ತಮ್ಮ ಮುಂಬರುವ ಚಿತ್ರ ಶೆಹಜಾದ (Shehzada)ದ ಪ್ರಚಾರದಲ್ಲಿ ನಿರತರಾಗಿದ್ದಾರೆ. ಚಿತ್ರದ ಪ್ರಚಾರಕ್ಕಾಗಿ ನಟ ನಗರಗಳಲ್ಲಿ ರೌಂಡ್ಸ್​ ಒಡೆಯುತ್ತಿದ್ದಾರೆ. ನಟನಾಗಿ ಮಾತ್ರವಲ್ಲ, ಈ ಚಿತ್ರದಲ್ಲಿ ನಿರ್ಮಾಪಕನಾಗಿಯೂ ಕೆಲಸ ಮಾಡಿದ್ದಾರೆ. ನಿರ್ಮಾಪಕರಾಗಿ ಅವರಿಗಿದು ಚೊಚ್ಚಲ ಪ್ರವೇಶ. ಶೆಹಜಾದ ಪ್ರಚಾರದ ಸಂದರ್ಶನವೊಂದರಲ್ಲಿ, ನಟ ಕಾರ್ತಿಕ್ ಆರ್ಯನ್​ ಅವರಿಗೆ​ ಲವ್​​ ಲೈಫ್​ ಮತ್ತು ಪ್ರೇಯಸಿ ಬಗ್ಗೆ ಕೇಳಲಾಯಿತು.

ಸಂಬಂಧ ಬೆಳೆಸಲು ಸಮಯವಿಲ್ಲವೆಂದಿದ್ದ ನಟ: ನಟ ಹೃತಿಕ್ ರೋಷನ್ ಅವರ ಸಂಬಂಧಿ ಪಶ್ಮಿನಾ ರೋಷನ್ ಅವರೊಂದಿಗೆ ವದಂತಿಯ ಸುದ್ದಿಯಲ್ಲಿದ್ದೇನೆ ಎಂದು ಕಾರ್ತಿಕ್​ ಆರ್ಯನ್​​ ಪ್ರತಿಕ್ರಿಯಿಸಿದರು. ಹಿಂದಿನ ಸಂದರ್ಶನವೊಂದರಲ್ಲಿ, ತಮ್ಮ ಎಲ್ಲ ಸಮಯವನ್ನು ಕೆಲಸಕ್ಕೆ ಮೀಸಲಿಡಲು ಬಯಸುತ್ತೇನೆ. ಪ್ರಭಾವಶಾಲಿ ಚಿತ್ರ ನಿರ್ಮಿಸಲು ಗಮನ ಹರಿಸಬೇಕು, ಸಂಬಂಧವನ್ನು ಬೆಳೆಸಲು ಸಮಯವಿಲ್ಲ ಎಂದು ಹೇಳಿದ್ದರು.

ಪ್ರೀತಿಯಲ್ಲಿ ಗೌರವ ಮುಖ್ಯ: ಇತ್ತೀಚಿನ ಸಂದರ್ಶನದಲ್ಲಿ, ಕಾರ್ತಿಕ್ ಆರ್ಯನ್​​ ತಮ್ಮ ಬಾಳ ಸಂಗಾತಿಯಲ್ಲಿ ತಾನು ಕಾಣಲು ಇಚ್ಛಿಸಲ್ಪಡುವ ಕೆಲ ಗುಣಗಳನ್ನು ಬಹಿರಂಗಪಡಿಸಿದರು. ಭಾವನೆ ಹೊಂದಿಕೆಯಾಗಬೇಕು, ಹಾಸ್ಯ ಪ್ರಜ್ಞೆಯೂ ಅಷ್ಟೇ ಮುಖ್ಯವಾಗಿರುತ್ತದೆ. ಬೇಷರತ್ತಾದ ಪ್ರೀತಿಯ ಸಂಬಂಧದಲ್ಲಿ ಗೌರವವೂ ಒಂದು ಪ್ರಮುಖ ಅಂಶವಾಗಿದೆ ಎಂದು ಕಾರ್ತಿಕ್ ಹೇಳಿದರು. ಬಾಲಿವುಡ್​ನಲ್ಲಿ ಕಳೆದ ಕೆಲ ದಿನಗಳಲ್ಲಿ ಸಾಲು ಸಾಲಾಗಿ ಸೆಲೆಬ್ರಿಟಿಗಳ ಮದುವೆ ನಡೆದಿದ್ದು, ಕಾರ್ತಿಕ್ ಆರ್ಯನ್ ವಿವಾಹದ ಬಗ್ಗೆ ತಿಳಿಯಲು ಅಭಿಮಾನಿಗಳು ಕಾತರರಾಗಿದ್ದಾರೆ.

ಇದನ್ನೂ ಓದಿ: "ನಾನು ಅವರಿಂದ ಕಲಿಯಬೇಕಿದೆ" ಎಂದು ಕಿಂಗ್​ ಖಾನ್​ ಹೇಳಿದ್ದು ಯಾರ ಬಗ್ಗೆ?

ಶೆಹಜಾದ ಸಿನಿಮಾ ಹೊರತುಪಡಿಸಿ ಕಾರ್ತಿಕ್ ಕೆಲ ಆಸಕ್ತಿದಾಯಕ ಚಿತ್ರಗಳನ್ನು ಮಾಡಲು ಸಜ್ಜಾಗಿದ್ದಾರೆ. ರೊಮ್ಯಾಂಟಿಕ್ ಚಿತ್ರ ಆಶಿಕಿ 3, ಕಿಯಾರಾ ಅಡ್ವಾಣಿ ಜೊತೆಗಿನ ಸತ್ಯಪ್ರೇಮ್ ಕಿ ಕಥಾ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇನ್ನೂ ಹನ್ಸಲ್ ಮೆಹ್ತಾ ಅವರ ಕ್ಯಾಪ್ಟನ್ ಇಂಡಿಯಾ ಚಿತ್ರದಲ್ಲಿ ಕಾರ್ತಿಕ್ ಆರ್ಯನ್ ಪೈಲಟ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ನಂತರ ಅವರು ಕಬೀರ್ ಖಾನ್ ಅವರ ಚಿತ್ರದಲ್ಲೂ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರಕ್ಕೆ ಶೀರ್ಷಿಕೆ ಇನ್ನಷ್ಟೇ ನಿಗದಿ ಆಗಬೇಕಿದೆ.

ಇದನ್ನೂ ಓದಿ: 'ಸವಾಲುಗಳನ್ನು ಸ್ವೀಕರಿಸಿ ಸೆಟ್​ಗೆ ಹೆಜ್ಜೆಯಿಡುತ್ತೇನೆ': ನಟಿ ರಶ್ಮಿಕಾ ಮಂದಣ್ಣ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.