ಸ್ಯಾಂಡಲ್ವುಡ್ ನಟ ಧ್ರುವ ಸರ್ಜಾ ತಂದೆಯಾಗಿ ಬಡ್ತಿ ಪಡೆದಿದ್ದಾರೆ. ಪತ್ನಿ ಪ್ರೇರಣಾ ಹೆಣ್ಣು ಮಗುವಿಗೆ ಜನ್ಮ ನೀಡಿರುವುದಾಗಿ ಸಿಹಿ ಸುದ್ದಿ ಹಂಚಿಕೊಂಡಿದ್ದಾರೆ.
ನಟ ಧ್ರುವ ಸರ್ಜಾ ಪತ್ನಿ ಪ್ರೇರಣಾ ನಿನ್ನೆ ಆಸ್ಪತ್ರೆಗೆ ದಾಖಲಾಗಿ ಸಹಜ ಹೆರಿಗೆ ಮೂಲಕ ಮಗುವಿಗೆ ಜನ್ಮ ನೀಡಿದ್ದಾರೆ. ಹೆರಿಗೆಗೆಂದು ಕೆಆರ್ ರಸ್ತೆಯಲ್ಲಿರೋ ಖಾಸಗಿ ಆಸ್ಪತ್ರೆಗೆ ಪ್ರೇರಣಾ ಅವರನ್ನು ದಾಖಲಿಸಲಾಗಿತ್ತು. ಇಂದು ಡೆಲಿವರಿ ಆಗಿದೆ.
ಈ ಹಿಂದೆ ಪ್ರೇರಣಾ ಗರ್ಭಿಣಿ ಆಗಿರುವ ವಿಚಾರವನ್ನು ಧ್ರುವ ಸರ್ಜಾ ಫೋಟೋ ಶೂಟ್ ಮೂಲಕ ಹಂಚಿಕೊಂಡಿದ್ದರು. ಇತ್ತೀಚೆಗೆ ಸೀಮಂತ ಕಾರ್ಯಕ್ರಮ ಕೂಡ ನಡೆದಿತ್ತು. ಇನ್ನು, ತಮಗೆ ಹೆಣ್ಣು ಮಗು ಬೇಕೆಂದು ಈ ದಂಪತಿ ತಮ್ಮ ಆಸೆ ವ್ಯಕ್ತಪಡಿಸಿದ್ದರು. ಅದರಂತೆ ಇದೀಗ ಹೆಣ್ಣು ಮಗುವಿನ ಪೋಷಕರಾಗಿದ್ದಾರೆ.
ಧ್ರುವ ಸರ್ಜಾ ಮತ್ತು ಪ್ರೇರಣಾ ಇಬ್ಬರು ಬಾಲ್ಯದಿಂದಲೇ ಪ್ರೀತಿಸಿದ ಜೋಡಿ. ಇವರು 14 ವರ್ಷಗಳ ಕಾಲ ಪ್ರೀತಿಸಿ 24 ನವೆಂಬರ್ 2019ರಲ್ಲಿ ವೈವಾಹಿಕ ಜೀವನಕ್ಕೆ ಹೆಜ್ಜೆಯಿಟ್ಟರು. ಇಂದು ಮನೆಗೆ ಹೊಸ ಅತಿಥಿಯ ಆಗಮನ ಆಗುತ್ತಿದ್ದು, ಸರ್ಜಾ ಕುಟುಂಬದಲ್ಲಿ ಸಂಭ್ರಮ ಮನೆ ಮಾಡಿದೆ.
ಇದನ್ನೂ ಓದಿ: ಶಕೀಲಾ ಬಾನು ಪಾತ್ರ ನನಗೆ ತುಂಬಾ ಖುಷಿ ಕೊಟ್ಟಿದೆ: ತೋತಾಪುರಿ ನಟಿ ಅದಿತಿ ಪ್ರಭುದೇವ