ಬ್ಯೂಟಿಫುಲ್ ಮನಸುಗಳು ಹಾಗೂ ಬೆಲ್ ಬಾಟಮ್ ಸಿನಿಮಾಗಳ ನಂತರ ಸ್ಯಾಂಡಲ್ವುಡ್ನಲ್ಲಿ ತನ್ನದೇ ಬೇಡಿಕೆ ಹೊಂದಿರುವ ನಿರ್ದೇಶಕ ಜಯತೀರ್ಥ. ಬನಾರಸ್ ಸಿನಿಮಾ ಬಿಡುಗಡೆ ಹೊತ್ತಲ್ಲೇ ನಿರ್ದೇಶಕ ಜಯತೀರ್ಥ ಅವರು ಬಜಾರು ಸಿನಿಮಾದ ಹೀರೋ ಧನ್ವೀರ್ ಜೊತೆ ಹೊಸ ಸಿನಿಮಾಗೆ ಕೈ ಹಾಕಿದ್ದಾರೆ. ಈ ಚಿತ್ರಕ್ಕೆ ಕೈವ ಅಂತಾ ಟೈಟಲ್ ಇಡಲಾಗಿದೆ. ಗಣೇಶ ಹಬ್ಬದ ಪ್ರಯುಕ್ತ ಕೈವ ಫಸ್ಟ್ ಲುಕ್ ರಿವೀಲ್ ( ಗೆಸ್ ಲುಕ್ ಪೋಸ್ಟರ್) ಆಗಿದ್ದು ಸಿನಿಮಾ ಬಗ್ಗೆ ಕುತೂಹಲ ಹೆಚ್ಚಿದೆ.
![Dhanveer new movie Kaiva first look revealed](https://etvbharatimages.akamaized.net/etvbharat/prod-images/kn-bng-01-bazaru-dhanaveeru-jothie-jayathirtha-movie-7204725_31082022104820_3108f_1661923100_700.jpg)
ಕೈವ 1983 ಅನ್ನೂ ಟ್ಯಾಗ್ ಕೊಟ್ಟಿರೋ ಈ ಚಿತ್ರದ ಟೈಟಲ್ ಹಾಗೂ ಪೋಸ್ಟರ್ ಥೀಮ್ ಇಂಟ್ರೆಸ್ಟಿಂಗ್ ಆಗಿ ಕಾಣುತ್ತಿದೆ. ಕೊಕ್ಕೆ ಹಿಡಿದಿರೋ ಕೈಗಳು ರಕ್ತಸಿಕ್ತವಾಗಿದೆ. ನೈಜ ಘಟನೆಗಳನ್ನಾಧರಿಸಿದ ಸಿನಿಮಾ ಅಂತ ಹೇಳಲಾಗ್ತಿದೆ.
ಇದನ್ನೂ ಓದಿ: ಹಬ್ಬದಂದೇ ಫ್ಯಾನ್ಸ್ಗೆ ಸಿಹಿಸುದ್ದಿ ಕೊಟ್ಟ ನಟಿ ರಮ್ಯಾ..
ಅಭುವನಸ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗುತ್ತಿದೆ. ಸದ್ಯ ಕೈವ ಗೆಸ್ ಲುಕ್ ಅನ್ನೋ ಪೋಸ್ಟರ್ ರಿವೀಲ್ ಆಗಿದ್ದು ಸೆಪ್ಟೆಂಬರ್ 8ರಂದು ನಟ ಧನ್ವೀರ್ ಹುಟ್ಟುಹಬ್ಬ ಹಿನ್ನೆಲೆ ಕೈವ ಸಿನಿಮಾದ ಅಸಲಿ ಲುಕ್ ರಿವೀಲ್ ಆಗಲಿದೆ. ಅಂದೇ ಈ ಗೆಸ್ ಲುಕ್ ಪೋಸ್ಟರ್ ಹುಟ್ಟಿಸಿರೋ ಎಲ್ಲಾ ಕುತೂಹಲಕ್ಕೂ ಉತ್ತರ ಸಿಗಲಿದೆ.
![Dhanveer new movie Kaiva first look revealed](https://etvbharatimages.akamaized.net/etvbharat/prod-images/16244964_thumbn.jpg)