ನೈನಿತಾಲ್: ಖ್ಯಾತ ಬಾಲಿವುಡ್ ನಟ ಅರ್ಜುನ್ ಕಪೂರ್ ತಮ್ಮ ಮುಂದಿನ ಚಿತ್ರ 'ದಿ ಲೇಡಿ ಕಿಲ್ಲರ್' ಶೂಟಿಂಗ್‌ನಲ್ಲಿ ಬ್ಯೂಸಿಯಾಗಿದ್ದಾರೆ. ಸಿನಿಮಾ ಚಿತ್ರೀಕರಣಕ್ಕಾಗಿ ನೈನಿತಾಲ್ಗೆ ತೆರಳಿದ್ದು, ಅಲ್ಲಿನ ಪ್ರವಾಸೋದ್ಯಮಕ್ಕೆ ಮನಸೋತಿದ್ದಾರೆ.
'ದಿ ಲೇಡಿ ಕಿಲ್ಲರ್' ಶೂಟಿಂಗ್ ಕುರಿತು ಮಾಧ್ಯಮದೊಂದಿಗೆ ಅಭಿಪ್ರಾಯ ಹಂಚಿಕೊಂಡ ನಟ, ನೈನಿತಾಲ್‌ನ ಅನೇಕ ಪ್ರವಾಸಿ ಸ್ಥಳಗಳು ಸೇರಿದಂತೆ ಸುತ್ತಮುತ್ತಲಿನ ಪ್ರದೇಶದಲ್ಲಿ ಸಿನಿಮಾ ಚಿತ್ರೀಕರಿಸುತ್ತಿದ್ದೇವೆ. ಹೊರ ದೇಶಗಳಿಗೆ ಹೋಲಿಸಿದರೆ ಇಲ್ಲಿನ ಲೊಕೇಶನ್ ತುಂಬಾ ಚೆನ್ನಾಗಿದೆ. ರಾಜ್ಯ ಸರ್ಕಾರ ಕೂಡ ಚಿತ್ರದ ಚಿತ್ರೀಕರಣಕ್ಕೆ ಬೆಂಬಲ ನೀಡುತ್ತಿದೆ. ನೈನಿತಾಲ್ ಪ್ರವಾಸೋದ್ಯಮ ತನ್ನದೇ ಆದ ಪ್ರಾಮುಖ್ಯತೆ ಹೊಂದಿದ್ದು, ಅನೇಕ ಮಂದಿ ಪ್ರವಾಸಿಗರು ಇಲ್ಲಿಗೆ ಬರುತ್ತಾರೆ ಎಂದರು.
ಚಿತ್ರದ ಶೂಟಿಂಗ್ಗೆ ಸಂಬಂಧಿಸಿದಂತೆ ಅರ್ಜುನ್ ಕಪೂರ್ ಎರಡನೇ ಬಾರಿಗೆ ನೈನಿತಾಲ್ಗೆ ಆಗಮಿಸಿದ್ದು, ಈ ಹಿಂದೆ 2013ರಲ್ಲಿ 'ಔರಂಗಜೇಬ್' ಚಿತ್ರೀಕರಣಕ್ಕಾಗಿ ನೈನಿತಾಲ್ಗೆ ಬಂದಿದ್ದರು. 'ಲೇಡಿ ಕಿಲ್ಲರ್' ಚಿತ್ರವು ರೋಮ್ಯಾಂಟಿಕ್, ಥ್ರಿಲ್ ಮತ್ತು ಪ್ರೀತಿ, ಪ್ರೇಮ ಸಂಬಂಧಗಳ ಕಥೆಯಾಧರಿತವಾಗಿದ್ದು, ಶೀಘ್ರದಲ್ಲೇ ಬಿಡುಗಡೆಯಾಗಲಿದೆ. ಇದಕ್ಕೂ ಮುನ್ನ ಅರ್ಜುನ್ ಅವರ 'ವಿಲನ್ ರಿಟರ್ನ್' ಚಿತ್ರ ತೆರೆಕಾಣಲಿದೆ.
ಇದನ್ನೂ ಓದಿ: ಚಿತ್ರೀಕರಣದ ವೇಳೆ ನಟಿ ದೀಪಿಕಾ ಪಡುಕೋಣೆ ಅಸ್ವಸ್ಥ; ಆಸ್ಪತ್ರೆಗೆ ದಾಖಲು