ETV Bharat / entertainment

ಉತ್ತರಾಖಂಡಕ್ಕೆ ನಟ ಅನುಪಮ್​ ಖೇರ್ ಭೇಟಿ - ಮುಂದಿನ ಸಿನಿಮಾ ಶೂಟಿಂಗ್​ಗೆ ತಯಾರಿ! - Anupam Kher upcoming movies

Anupam Kher visits Uttarakhand: ಬಾಲಿವುಡ್​ ಹಿರಿಯ ನಟ ಅನುಪಮ್​ ಖೇರ್ ತಮ್ಮ ಮುಂದಿನ ಸಿನಿಮಾ ಸಲುವಾಗಿ ಉತ್ತರಾಖಂಡಕ್ಕೆ ಭೇಟಿ ಕೊಟ್ಟಿದ್ದಾರೆ.

Anupam Kher visits Uttarakhand
ಉತ್ತರಾಖಂಡಕ್ಕೆ ಅನುಪಮ್​ ಖೇರ್ ಭೇಟಿ
author img

By

Published : Aug 1, 2023, 2:31 PM IST

ಹಿಂದಿ ಚಿತ್ರರಂಗದಲ್ಲಿ 500ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿರುವ ನಟ ಅನುಪಮ್​ ಖೇರ್. ಅಮೋಘ ಅಭಿನಯದ ಮೂಲಕ ಕೋಟಿಗಟ್ಟಲೇ ವೀಕ್ಷಕರನ್ನು ಆಕರ್ಷಿಸಿರುವ ಅನುಪಮ್ ಖೇರ್ ಸಂಜೆ ಉತ್ತರಾಖಂಡ್​ನ ಪೌರಿ ಗರ್ವಾಲ್‌ನ ಲ್ಯಾನ್ಸ್‌ಡೌನ್ ಪ್ರದೇಶ ತಲುಪಿದ್ದಾರೆ. ನೈಸರ್ಗಿಕ ಸೌಂದರ್ಯದಿಂದ ತುಂಬಿರುವ ಲ್ಯಾನ್ಸ್‌ಡೌನ್ ಪಟ್ಟಣದಲ್ಲಿರುವ ಪ್ರಸಿದ್ಧ ಪ್ರವಾಸಿ ತಾಣಗಳಾದ ಗರ್ವಾಲ್‌ ರೈಫಲ್ ಫೈರಿಂಗ್ ರೇಂಜ್, ಟಿಪ್​ ಆ್ಯಂಡ್​ ಟಾಪ್, ಭುಲಾತಾಲ್ ಸ್ಥಳಗಳಿಗೆ ಭೇಟಿ ನೀಡಿದರು. ಸುಂದರವಾದ ಕಣಿವೆಗಳನ್ನು ಕಣ್ತುಂಬಿಕೊಂಡರು.

ಒಂದು ತಿಂಗಳ ಕಾಲ ಚಿತ್ರೀಕರಣ: ಮುಂಬರುವ ಚಲನಚಿತ್ರವನ್ನು ಲ್ಯಾನ್ಸ್‌ಡೌನ್‌ನಲ್ಲಿ ಚಿತ್ರೀಕರಿಸುವ ಯೋಜನೆಯಿದೆ. ಲ್ಯಾನ್ಸ್‌ಡೌನ್ ಪ್ರದೇಶ ಶೂಟಿಂಗ್​ಗೆ ಸೂಕ್ತ ಸ್ಥಳ ಎಂದು ಹಿರಿಯ ನಟ ಅನುಪಮ್ ಖೇರ್ ತಿಳಿಸಿದ್ದಾರೆ. ಮುಂಬರುವ ಸಿನಿಮಾದ ಚಿತ್ರೀಕರಣಕ್ಕಾಗಿ ಅವರು ತಮ್ಮ ತಂಡದೊಂದಿಗೆ ಲ್ಯಾನ್ಸ್‌ಡೌನ್‌ನಿಂದ ಜರಿಖಲ್ ಮಾರ್ಗದವರೆಗೆ ಸ್ಥಳವನ್ನು ವೀಕ್ಷಿಸಿ, ಶೂಟಿಂಗ್​ಗೆ ಸ್ಥಳ ನಿಗದಿ ಮಾಡಿದ್ದಾರೆ. ಲ್ಯಾನ್ಸ್‌ಡೌನ್‌ನಲ್ಲಿ ಒಂದು ತಿಂಗಳ ಕಾಲ ಚಿತ್ರೀಕರಣ ನಡೆಯಲಿದೆ ಎಂದು ತಿಳಿಸಿದ್ದಾರೆ.

ಭೂಮಿ ಮೇಲಿನ ಸ್ವರ್ಗ ಖ್ಯಾತಿಯ ಉತ್ತರಾಖಂಡ್​ನ ಲ್ಯಾನ್ಸ್‌ಡೌನ್ ಪ್ರಕೃತಿಯ ಮಡಿಲಲ್ಲಿ ನೆಲೆಗೊಂಡಿದೆ. ಇಲ್ಲಿಗೆ ಭೇಟಿ ಕೊಡುವ ಪ್ರವಾಸಿಗರಿಗೆ ಶಾಂತಿಯ ಅನುಭವವಾಗುತ್ತದೆ. ಇದೀಗ ಚಿತ್ರರಂಗದಲ್ಲಿ ಪರಿಣಿತರಾಗಿರುವ ಹಿರಿಯ ನಟ ಅನುಪಮ್ ಖೇರ್ ತಮ್ಮ ಮುಂದಿನ ಸಿನಿಮಾವನ್ನು ಇಲ್ಲಿ ಚಿತ್ರೀಕರಣ ನಡೆಸಲಿದ್ದಾರೆ.

ಮಹಾದೇವ್ ಕಾಳೇಶ್ವರಕ್ಕೆ ಅನುಪಮ್ ಖೇರ್ ಭೇಟಿ: ಪ್ರಸಿದ್ಧ ಹಿಂದಿ ಚಲನಚಿತ್ರ ಕಾಶ್ಮೀರ್​ ಫೈಲ್ಸ್ ಸೇರಿದಂತೆ 500ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಪಾತ್ರ ವಹಿಸಿರುವ ಖ್ಯಾತ ನಟ ಅನುಪಮ್ ಖೇರ್ ಲಾನ್ಸ್‌ಡೌನ್ ತಲುಪಿದ ನಂತರ ಮೊದಲು ಮಹಾದೇವ್ ಕಾಳೇಶ್ವರ ದೇವಸ್ಥಾನಕ್ಕೆ ಭೇಟಿ ಕೊಟ್ಟರು. ಮಹಾದೇವನಿಗೆ ಪೂಜೆ ಸಲ್ಲಿಸಿ, ಸಂಜೆಯ ಆರತಿಯಲ್ಲಿ ಭಾಗವಹಿಸಿ, ಪ್ರಸಾದ ಸ್ವೀಕರಿಸಿದರು.

ಇದನ್ನೂ ಓದಿ: Taapsee Pannu Birthday: ಜನ್ಮದಿನದ ಸಂಭ್ರಮದಲ್ಲಿರುವ ಬಹುಭಾಷಾ ನಟಿ ತಾಪ್ಸಿ ಪನ್ನುಗೆ ಶುಭಾಶಯಗಳ ಮಹಾಪೂರ

ಕಾಳೇಶ್ವರ ದೇವಸ್ಥಾನದ ಅರ್ಚಕ ರಾಜೇಶ್ ಧ್ಯಾನಿ ಮಾತನಾಡಿ, ಹಿರಿಯ ನಟ ಅನುಪಮ್ ಖೇರ್ ಅವರು ಸೋಮವಾರದಂದು ಕಾಳೇಶ್ವರ ದೇವಸ್ಥಾನದ ಆರತಿಯಲ್ಲಿ ಭಾಗವಹಿಸಿದ್ದರು ಎಂದು ತಿಳಿಸಿದ್ದಾರೆ. ಅದಾದ ನಂತರ, ಅವರು ದುರ್ಗಾ ಮಂದಿರ ಲ್ಯಾನ್ಸ್‌ಡೌನ್‌ನ ಪ್ರಸಿದ್ಧ ಟಿಪ್‌ ಆ್ಯಂಡ್​ ಟಾಪ್‌ ವ್ಯೂವ್ ಪಾಯಿಂಟ್​ಗೆ ಭೇಟಿ ನೀಡಿದರು. ಆರ್ಮಿ ಫೈರಿಂಗ್ ರೇಂಜ್, ನಂತರ ಭುಲಾತಾಲ್ ಗರ್ವಾಲ್ ವಿಕಾಸ್ ನಿಗಮ್ ಪ್ರವಾಸಿ ವಸತಿ ಸೇರಿದಂತೆ ವಿವಿಧ ಸ್ಥಳಗಳಿಗೆ ಭೇಟಿ ನೀಡಿದ್ದಾರೆ.

ಇದನ್ನೂ ಓದಿ: ಇವರ ವಯಸ್ಸು 68 ಅಂದ್ರೆ ನಂಬ್ತೀರಾ - ಯುವ ಕಲಾವಿದರೊಂದಿಗೆ ತರುಣಿಯಂತೆ ಕಂಗೊಳಿಸಿದ ಬಾಲಿವುಡ್​ ಬ್ಯೂಟಿ ರೇಖಾ

ಸರಣಿ ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಅನುಪಮ್​ ಖೇರ್ ಅವರು ಕೆಲ ದಿನಗಳ ಹಿಂದೆ 538ನೇ ಸಿನಿಮಾವನ್ನು ಘೋಷಿಸಿದ್ದರು. ಇದರಲ್ಲಿ ಬೆಂಗಾಲಿ ಸಾಹಿತಿ ರವೀಂದ್ರನಾಥ್​ ಠಾಗೋರ್ ಪಾತ್ರವನ್ನು ನಿರ್ವಹಿಸಲಿದ್ದಾರೆ. 538ನೇ ಸಿನಿಮಾ ಘೋಷಣೆ ಬೆನ್ನಲ್ಲೇ 539ನೇ ಚಿತ್ರದ ಪೋಸ್ಟರ್ ಅನ್ನೂ ಸಹ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಇದೀಗ ಉತ್ತರಾಖಂಡ್​​ನಲ್ಲಿ ಚಿತ್ರೀಕರಣ ಆಗುವ ಸಿನಿಮಾ ಬಗ್ಗೆ ಚಿತ್ರತಂಡದಿಂದ ಹೆಚ್ಚಿನ ಮಾಹಿತಿ ಹೊರ ಬರಬೇಕಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.