ಬಾಲಿವುಡ್ ಹಿರಿಯ ನಟ ಅನುಪಮ್ ಖೇರ್ ಸರಣಿ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಒಂದಾದ ನಂತರ ಒಂದರಂತೆ ಚಿತ್ರಗಳನ್ನು ಘೋಷಿಸುತ್ತಲೇ ಇರುತ್ತಾರೆ. ದಿ ಕಾಶ್ಮೀರ್ ಫೈಲ್ಸ್ ಖ್ಯಾತಿಯ ನಟ ಮಹಾನ್ ಸಾಹಿತಿ ರವೀಂದ್ರನಾಥ್ ಠಾಗೋರ್ ಜೀವನಾಧಾರಿತ ತಮ್ಮ 538ನೇ ಸಿನಿಮಾವನ್ನು ಇತ್ತೀಚೆಗಷ್ಟೇ ಘೋಷಿಸಿದ್ದರು. ಇಂದು ಮತ್ತೊಂದು ಚಿತ್ರವನ್ನು ಘೋಷಿಸುವ ಮೂಲಕ ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿದ್ದಾರೆ. ವಿಶೇಷವೆಂದರೆ ತಮ್ಮ ಮುಂದಿನ ಸಿನಿಮಾವನ್ನು ಘೋಷಿಸಿದ ಅನುಪಮ್ ಖೇರ್, ಆ ಚಿತ್ರಕ್ಕೆ ಸಂಬಂಧಿಸಿದ ಪೋಸ್ಟರ್ ಅನ್ನು ಸಹ ಹಂಚಿಕೊಂಡಿದ್ದಾರೆ.
ಅನುಪಮ್ ಖೇರ್ 539ನೇ ಸಿನಿಮಾ: ಬಾಲಿವುಡ್ ನಟ ಅನುಪಮ್ ಖೇರ್ ಅವರು ತಮ್ಮ ಮುಂಬರುವ 539ನೇ ಚಿತ್ರದ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ಘೋಷಿಸಿದ್ದಾರೆ. ಅವರು ಹಂಚಿಕೊಂಡಿರುವ ಚಿತ್ರದಲ್ಲಿ, ಸಿಂಹಾಸನದ ಮೇಲೆ ಕುಳಿತಿದ್ದಾರೆ. ನಟನ ಕೈಯಲ್ಲಿ ತ್ರಿಶೂಲವಿದೆ ಮತ್ತು ಅವರ ಸಿಂಹಾಸನದ ಸುತ್ತಲೂ ಹಾವುಗಳು ಸುತ್ತಿಕೊಂಡಿವೆ. ಇದೊಂದು ಯಾವುದೋ ಹಳೇ ಕಥೆಯನ್ನು ಹೇಳುವಂತಿದೆ.
ಪ್ಯಾನ್ ಇಂಡಿಯಾ ಸಿನಿಮಾ: ಈ ಪೋಸ್ಟ್ ಅನ್ನು ಶೇರ್ ಮಾಡಿರುವ ನಟ, ''ನನ್ನ 539ನೇ ಚಿತ್ರ, ಯಾವುದೋ ಪುರಾಣ ಅಥವಾ ದೊಡ್ಡ ಕಥೆಯನ್ನು ಇದು ಆಧರಿಸಿಲ್ಲ. ಆದರೆ ಭಾರತದ ಅತಿದೊಡ್ಡ ಬಹುಭಾಷಾ ಫ್ಯಾಂಟಸಿ ಚಿತ್ರವಾಗಲಿದೆ. ಚಿತ್ರದ ಸಬ್ಜೆಕ್ಟ್ ಬಹಳ ಚೆನ್ನಾಗಿದೆ. ಚಿತ್ರ ತಯಾರಕರು ಈ ಸಿನಿಮಾದ ಸಂಪೂರ್ಣ ಮಾಹಿತಿಯನ್ನು ಆಗಸ್ಟ್ 24 ರಂದು ತಿಳಿಸಲಿದ್ದಾರೆ. ಅಷ್ಟರಲ್ಲಿ ನನ್ನ ಲುಕ್ ನೋಡಿ ಸಿನಿಮಾ ಹೇಗಿದೆ ಅಂತಾ ನೀವು ಊಹಿಸಬಹುದು, ಜೈ ಹೋ'' ಎಂದು ಬರೆದುಕೊಂಡಿದ್ದಾರೆ.
-
ANNOUNCEMENT: My 539th film is not based on mythology or our great epics. But certainly India’s biggest Multi language fantasy film and you know the subject very well.😬. The makers will announce the details on 24th of August! In the meantime you can share your guesses with me!!!… pic.twitter.com/Pg7UMy0V5A
— Anupam Kher (@AnupamPKher) July 13, 2023 " class="align-text-top noRightClick twitterSection" data="
">ANNOUNCEMENT: My 539th film is not based on mythology or our great epics. But certainly India’s biggest Multi language fantasy film and you know the subject very well.😬. The makers will announce the details on 24th of August! In the meantime you can share your guesses with me!!!… pic.twitter.com/Pg7UMy0V5A
— Anupam Kher (@AnupamPKher) July 13, 2023ANNOUNCEMENT: My 539th film is not based on mythology or our great epics. But certainly India’s biggest Multi language fantasy film and you know the subject very well.😬. The makers will announce the details on 24th of August! In the meantime you can share your guesses with me!!!… pic.twitter.com/Pg7UMy0V5A
— Anupam Kher (@AnupamPKher) July 13, 2023
ಅನುಪಮ್ ಖೇರ್ 538ನೇ ಸಿನಿಮಾ: ಇತ್ತೀಚೆಗಷ್ಟೇ 538ನೇ ಸಿನಿಮಾವನ್ನು ನಟ ಅನುಪಮ್ ಖೇರ್ ಘೋಷಿಸಿದ್ದರು. ಹಲವು ವರ್ಷಗಳಿಂದ ಬಣ್ಣದ ಜಗತ್ತಿನಲ್ಲಿ ಗುರುತಿಸಿಕೊಂಡಿರುವ ಮತ್ತು ಇತ್ತೀಚಿನ ದಿನಗಳಲ್ಲಿ ದಿ ಕಾಶ್ಮೀರ್ ಫೈಲ್ಸ್ ಸಿನಿಮಾ ಮೂಲಕ ಸದ್ದು ಮಾಡಿದ ಬಾಲಿವುಡ್ ಬಹುಬೇಡಿಕೆಯ ನಟ ಬೆಂಗಾಲಿ ಸಾಹಿತಿ ರವೀಂದ್ರನಾಥ್ ಠಾಗೋರ್ ಪಾತ್ರವನ್ನು ನಿರ್ವಹಿಸುವುದಾಗಿ ತಿಳಿಸಿದ್ದಾರೆ.
ಇದನ್ನೂ ಓದಿ: ಸುದೀಪ್, ರಜನಿಕಾಂತ್ To ಶಾರುಖ್: ತೆರೆ ಮೇಲೆ ಬಾಂಡ್ಲಿಯಾಗಿ ಕಾಣಿಸಿಕೊಂಡ ನಟರಿವರು!
ಸಾಹಿತಿ ರವೀಂದ್ರನಾಥ್ ಠಾಗೋರ್ ಕುರಿತ ಪೋಸ್ಟ್ ಹಂಚಿಕೊಂಡ ನಟ, ಈ ಅದ್ಭುತ ಅವಕಾಶ ಸಿಕ್ಕಿದ್ದು ನನ್ನ ಸೌಭಾಗ್ಯ. ಇದಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿಯನ್ನು ಆದಷ್ಟು ಬೇಗ ಹಂಚಿಕೊಳ್ಳುತ್ತೇನೆ ಎಂದು ಹೇಳಿದ್ದರು. ಕಳೆದ ದಿನ ರವೀಂದ್ರನಾಥ್ ಠಾಗೋರ್ ಅವರ ಫೋಟೋ ಶೇರ್ ಮಾಡಿದ ಅವರು, ಗುರುದೇವ್ ರವೀಂದ್ರನಾಥ್ ಠಾಗೋರ್ ಅವರ ಮೊದಲ ನೋಟದ ಬಗ್ಗೆ ಪ್ರಪಂಚದಾದ್ಯಂತ ಜನರು ಪ್ರತಿಕ್ರಿಯಿಸುತ್ತಿದ್ದು, ಬಹಳ ಸಂತೋಷವಾಗಿದೆ. ಇದು ವೈರಲ್ ಆಗಲು ಕಾರಣ ನನ್ನ ಕೂದಲು ಮತ್ತು ಮತ್ತು ನನ್ನ ತಂಡ ಪಟ್ಟ ಶ್ರಮ ಎಂದು ನಾನು ನಂಬುತ್ತೇನೆ. ನಿಮ್ಮ ಪ್ರೀತಿ ಮತ್ತು ಮೆಚ್ಚುಗೆಗೆ ಮತ್ತೊಮ್ಮೆ ಧನ್ಯವಾದಗಳು, ಇದು 538ನೇ ಚಲನಚಿತ್ರ ಎಂದು ಬರೆದುಕೊಂಡಿದ್ದರು.
ಇದನ್ನೂ ಓದಿ: ಶಾರುಖ್ ನಟನೆಯ 'ಜವಾನ್' ವಿಡಿಯೋ ಮೊದಲು ನೋಡಿದ್ದೇ ಸಲ್ಮಾನ್ ಖಾನ್
ಅನುಪಮ್ ಖೇರ್ "ಎಮರ್ಜೆನ್ಸಿ" ಹಾಗೂ "ದ ವಾಕ್ಸಿನ್ ವಾರ್" ಚಿತ್ರಗಳಲ್ಲಿ ಕೆಲಸ ಮಾಡಿದ್ದು, ಅವು ಬಿಡುಗಡೆಗೆ ಸಿದ್ಧತೆ ನಡೆಸುತ್ತಿವೆ. ಹ್ಯಾಟ್ರಿಕ್ ಹೀರೋ ಶಿವ ರಾಜ್ ಕುಮಾರ್ ಅಭಿನಯದ ಬಹುನಿರೀಕ್ಷಿತ ಘೋಸ್ಟ್ ಚಿತ್ರದಲ್ಲಿಯೂ ಕೂಡ ಕಾಣಿಸಿಕೊಳ್ಳಲಿದ್ದಾರೆ. ಮೊದಲ ಬಾರಿಗೆ ಕನ್ನಡ ಚಿತ್ರವೊಂದರಲ್ಲಿ ಬಾಲಿವುಡ್ ನಟ ಕೆಲಸ ಮಾಡಿದ್ದಾರೆ.