ETV Bharat / entertainment

ಬಿಗ್ ಬಾಸ್ ಸೀಸನ್‌ 9: ದೊಡ್ಮನೆಗೆ ನಟ ಅನಿರುದ್ಧ್ ಜತ್ಕರ್ ಎಂಟ್ರಿ? - ಬಿಗ್‌ ಬಾಸ್‌ ಸೀನಸ್‌ 9 ಶೋನ ಪ್ರೋಮೋ

ಈ ಬಾರಿಯ ಕನ್ನಡದ ಬಿಗ್ ಬಾಸ್ ಮನೆಗೆ ನಟ ಅನಿರುದ್ಧ್ ಜತ್ಕರ್ ಹೋಗಲಿದ್ದಾರೆ ಎಂಬ ಸುದ್ದಿಯೊಂದು ಹರಿದಾಡುತ್ತಿದೆ.

Actor Aniruddh Jatkar
ನಟ ಅನಿರುದ್ಧ್ ಜತ್ಕರ್
author img

By

Published : Sep 13, 2022, 4:18 PM IST

ಕನ್ನಡದ ಬಿಗ್‌ ಬಾಸ್‌ ಓಟಿಟಿ ಮೊದಲ ಸೀಸನ್‌ ಕೊನೆಯ ಹಂತಕ್ಕೆ ತಲುಪಿದೆ. ಈಗಾಗಲೇ ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿರುವ ಕನ್ನಡದ ಬಿಗ್‌ ಬಾಸ್‌ ಸೀನಸ್‌ 9 ಶೋನ ಪ್ರೋಮೋ ರಿಲೀಸ್‌ ಮಾಡಲಾಗಿದೆ. ಓಟಿಟಿಯಿಂದ ಕೆಲವು ಸ್ಪರ್ಧಿಗಳು ಬಿಗ್‌ ಬಾಸ್‌ ಮೈನ್​ ಸೀಸನ್​ಗೆ (ಟಿವಿ ಶೋ) ಹೋಗಲಿದ್ದಾರೆ. ಪ್ರೋಮೋ ರಿಲೀಸ್‌ ಆದ ಬೆನ್ನಲ್ಲೇ ದೊಡ್ಮನೆಗೆ ಯಾರೆಲ್ಲಾ ಹೋಗಬಹುದೆಂಬ ಚರ್ಚೆ ಸೋಷಿಯಲ್ ಮೀಡಿಯಾದಲ್ಲಿ ಜೋರಾಗಿದೆ. ಪ್ರತಿ ಬಾರಿಯಂತೆಯೇ ಈ ಬಾರಿಯೂ ಯಾರೆಲ್ಲ ಹೊಗ್ತಾರೆ ಎಂಬ ಲೆಕ್ಕಾಚಾರ ಶುರುವಾಗಿದೆ.

Actor Aniruddh Jatkar
ನಟ ಅನಿರುದ್ಧ್ ಜತ್ಕರ್

ಅದರಂತೆ ಈ ಬಾರಿಯ ಬಿಗ್ ಬಾಸ್ ದೊಡ್ಮನೆಗೆ ನಟ ಅನಿರುದ್ಧ್ ಜತ್ಕರ್ ಹೋಗ್ತಾರೆ ಎಂಬ ಸುದ್ದಿಯೊಂದು ಹರಿದಾಡುತ್ತಿದೆ. ಮೂಲಗಳ ಪ್ರಕಾರ, ಜೊತೆ ಜೊತೆಯಲಿ ಸೀರಿಯಲ್​ನಿಂದ ಹೊರ ಬಂದಿರುವ ಆರ್ಯವರ್ಧನ್​ ಖ್ಯಾತಿಯ ಅನಿರುದ್ಧ್ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಡಲಿದ್ದಾರಂತೆ.

ಬಿಗ್‌ಬಾಸ್‌ ತಂಡ ಕೂಡ ಅನಿರುದ್ಧ್ ಅವರನ್ನು ಸಂಪರ್ಕ ಮಾಡಿದೆಯಂತೆ. ಇದಕ್ಕೆ ಅನಿರುದ್ಧ್ ಸಹ ಒಪ್ಪಿದ್ದಾರೆ ಎನ್ನಲಾಗುತ್ತಿದೆ. ಆದರೆ, ಧಾರಾವಾಹಿ ಮತ್ತು ಯಾವುದೇ ರಿಯಾಲಿಟಿ ಶೋಗಳಲ್ಲಿ ಅನಿರುದ್ಧ್ ಅವರನ್ನು ಬಳಸಿಕೊಳ್ಳಬಾದರು ಎಂದು ಕರ್ನಾಟಕ ಟೆಲಿವಿಷನ್ ಅಸೋಷಿಯೇಷನ್ ಅಂಗ ಸಂಸ್ಥೆಯಾದ ಟೆಲಿವಿಷನ್ ನಿರ್ದೇಶಕರ ಸಂಘ ಬ್ಯಾನ್ ಮಾಡಿರೋ ಕಾರಣ, ಅನಿರುದ್ಧ್ ಬಿಗ್ ಬಾಸ್ ಮನೆಗೆ ಹೋಗ್ತಾರಾ ಅನ್ನೋದು ಮಿಲಿಯನ್‌ ಡಾಲರ್ ಪ್ರಶ್ನೆಯಾಗಿದೆ.

ಇದನ್ನೂ ಓದಿ: ನಾಳೆ ತನಿಖೆಗೆ ಹಾಜರಾಗಲಿರುವ ನಟಿ ಜಾಕ್ವೆಲಿನ್​​ ಫರ್ನಾಂಡಿಸ್‌ಗಾಗಿ ದೊಡ್ಡ ಪ್ರಶ್ನೆ ಪಟ್ಟಿ ಸಿದ್ಧ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.