ಎರ್ನಾಕುಲಂ (ಕೇರಳ): ಖ್ಯಾತ ನಟಿ ಅಮಲಾ ಪೌಲ್ ಅವರನ್ನು ದೇವಸ್ಥಾನಕ್ಕೆ ಪ್ರವೇಶಿಸದಂತೆ ಎರ್ನಾಕುಲಂನ ತಿರುವೈರಾಣಿಕುಲಂ ದೇವಸ್ಥಾನದ ಆಡಳಿತ ಮಂಡಳಿ ತಡೆದಿದೆ. ತಿರುವೈರಾಣಿಕುಲಂ ದೇವಸ್ಥಾನದ ಆಡಳಿತ ಮಂಡಳಿಯು ಕೇವಲ ಹಿಂದೂಗಳಿಗೆ ಮಾತ್ರ ದೇವಸ್ಥಾನಕ್ಕೆ ಪ್ರವೇಶವಿದ್ದು ಅನ್ಯಧರ್ಮದವರಿಗೆ ದೇವಸ್ಥಾನಕ್ಕೆ ಪ್ರವೇಶವಿಲ್ಲ ಎಂದು ಹೇಳಿದ್ದಾರೆ.
ಅನ್ಯಧರ್ಮಿಯಳಾಗಿರುವ ನಟಿ ಅಮಲಾ ಪೌಲ್, ದೇವಸ್ಥಾನದ ಉತ್ಸವದ ನಿಮಿತ್ತ ದೇವರ ದರ್ಶನಕ್ಕೆ ಬಂದಿದ್ದರು. ಪ್ರವೇಶ ನಿರಾಕರಣೆಯ ನಂತರ ನಟಿ ರಸ್ತೆಯಿಂದಲೇ ದರ್ಶನ ಮಾಡಿ, ದೇವಸ್ಥಾನದ ಪ್ರಸಾದವನ್ನು ಸಂಗ್ರಹಿಸಿ ಹಿಂತಿರುಗಿದರು. ಈ ಘಟನೆ ಬಗ್ಗೆ ಪ್ರತಿಕ್ರಿಯೆ ನೀಡಿದ ದೇವಸ್ಥಾನ ಆಡಳಿತ ಮಂಡಳಿಯು, ದೇವಸ್ಥಾನದಲ್ಲಿ ಈಗಿರುವ ಪದ್ಧತಿಯನ್ನು ಮಾತ್ರ ಅನುಸರಿಸಿದ್ದೇವೆ ಎಂದು ಸ್ಪಷ್ಟಪಡಿಸಿದೆ.
ಈ ಘಟನೆಗೆ ಸಂಬಂಧಿಸಿದಂತೆ, ದೇವಸ್ಥಾನದ ಆಡಳಿತ ಮಂಡಳಿಯ ಕ್ರಮವನ್ನು ಹಲವರು ಟೀಕಿಸಿದ್ದು. ಹಿಂದೂ ಐಕ್ಯವೇದಿ ನಾಯಕ ಆರ್ ವಿ ಬಾಬು ಫೇಸ್ ಬುಕ್ ಪೋಸ್ಟ್ನಲ್ಲಿ ನಟಿ ಅಮಲಾ ಪೌಲ್‌ಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಅವರು ತಮ್ಮ ಫೇಸ್ಬುಕ್ ಪೋಸ್ಟ್ನಲ್ಲಿ ‘‘ನಾಸ್ತಿಕ ಹಿಂದೂಗಳಿಗೆ ದೇವಸ್ಥಾನದ ಆಡಳಿತಾಧಿಕಾರಿಯಾಗಲು ಅವಕಾಶ ನೀಡಬಹುದಾಗಿದೆ ಆದರೆ, ಹಿಂದೂಯೇತರ ಭಕ್ತರನ್ನು ದೇವಸ್ಥಾನಕ್ಕೆ ಪ್ರವೇಶಿಸಲು ಅನುಮತಿಸುವುದಿಲ್ಲ’’ ಎಂದು ಬರೆದುಕೊಂಡಿದ್ದಾರೆ.
ಜನವರಿ 20ರಿಂದ ಪಠಾಣ್ ಚಿತ್ರದ ಮುಗಂಡ ಟಿಕೆಟ್ ಬುಕ್ಕಿಂಗ್ ಪ್ರಾರಂಭ: ಬಾಲಿವುಡ್ ಬಾದ್ ಶಾ ಶಾರುಖ್ ಖಾನ್ ನಟನೆಯ ಬಹು ನಿರೀಕ್ಷಿತ ಚಿತ್ರ ಪಠಾಣ್ ಚಿತ್ರದ ಮುಂಗಡ ಟಿಕೆಟ್ ಬುಕಿಂಗ್ ಇದೇ ಜನವರಿ 20 ರಂದು ಆರಂಭವಾಗಲಿದೆ. ಯಶ್ ರಾಜ್ ಫಿಲ್ಮ್ಸ್ ಪ್ರೊಡಕ್ಷನ್ ಹೌಸ್ ನಿಮಾರ್ಣದ ಚಿತ್ರ ಇದಾಗಿದ್ದು, ಪಠಾಣ್ ಚಿತ್ರವನ್ನು ಸಿದ್ಧಾರ್ಥ್ ಆನಂದ್ ನಿರ್ದೇಶನ ಮಾಡಿದ್ದಾರೆ. ಈ ಚಿತ್ರದಲ್ಲಿ ಶಾರೂಖ್ ಖಾನ್ಗೆ ಜೊತೆಯಾಗಿ ದೀಪಿಕಾ ಪಡುಕೋಣೆ ನಟಿಸುತ್ತಿದ್ದಾರೆ.
"ಪಠಾಣ್ ಚಿತ್ರದ ಮುಂಗಡ ಬುಕಿಂಗ್ ಭಾರತದಲ್ಲಿ ಜನವರಿ 20 ರಂದು ಹಿಂದಿ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ 2D ಆವೃತ್ತಿಯೊಂದಿಗೆ IMAX, 4DX, D BOX ಮತ್ತು ICE ಆವೃತ್ತಿಗಳಂತಹ ಪ್ರೀಮಿಯಂ ಫಾರ್ಮ್ಯಾಟ್‌ಗಳಲ್ಲಿ ಬಿಡುಗಡೆಯಾಗಲಿದೆ. ವೈಆರ್‌ಎಫ್ ಸ್ಪೈ ಯೂನಿವರ್ಸ್ 4ನೇ ಸ್ಪೈ ಚಿತ್ರ ಇದಾಗಿದ್ದು, ಭಾರತದ ಅತಿ ದೊಡ್ಡ ಸೂಪರ್‌ಸ್ಟಾರ್‌ಗಳಾದ ಶಾರುಖ್ ಖಾನ್, ದೀಪಿಕಾ ಪಡುಕೋಣೆ ಮತ್ತು ಜಾನ್ ಅಬ್ರಹಾಂ ನಟಿಸುತ್ತಿದ್ದಾರೆ.
ಇತ್ತೀಚೆಗೆ, ಬಿಡುಗಡೆಗೊಂಡ ಪಾಠಾಣ್ ಚಿತ್ರದ ಟ್ರೇಲರ್ಗೆ ವ್ಯಾಪಕವಾಗಿ ಮೆಚ್ಚುಗೆ ವ್ಯಕ್ತವಾಗಿದೆ. ಎರಡು ನಿಮಿಷದ ಟ್ರೇಲರ್ನಲ್ಲಿ ಶಾರುಖ್ ಮತ್ತು ದೀಪಿಕಾ ಅವರು ಸ್ಪೈ ಎಜೆಂಟ್ಗಳಾಗಿ ಕಾಣಿಸಿಕೊಂಡಿದ್ದಾರೆ, ಖಳ ನಾಯಕನ ಪಾತ್ರದಲ್ಲಿ ಜಾನ್ ಅಬ್ರಹಾಂ ಕಾಣಿಸಿಕೊಂಡಿದ್ದಾರೆ. ಈ ಚಿತ್ರಕ್ಕಾಗಿ ಎಸ್ಆರ್ಕೆ ಮತ್ತು ದೀಪಿಕಾ ಅವರು ಐಸ್ ಮೇಲೆ ಬೈಕ್ ಓಡಿಸುವುದನ್ನು ಮತ್ತು ಯುದ್ಧದಲ್ಲಿ ಹೇಳಿಕೊಡುವ ಕಠಿಣ ತರಬೇತಿಯನ್ನು ಸಹ ಪಡೆದಿದ್ದಾರೆ, ಇದರ ಜೊತೆಗೆ ಜಪಾನೀಸ್ನ ಮಾರ್ಷಲ್ ಆರ್ಟ್ಸ್ನ ಭಾಗವಾದ ಜುಜುಟ್ಸುವನ್ನು ಕಲಿತ್ತಿದ್ದಾರೆ ಎಂದು ವೈಆರ್‌ಎಫ್ ವಿತರಣೆಯ ಉಪಾಧ್ಯಕ್ಷ ರೋಹನ್ ಮಲ್ಹೋತ್ರಾ ಹೇಳಿದ್ದಾರೆ.
ವಿಶೇಷ ಪಾತ್ರದಲ್ಲಿ ಸಲ್ಮಾನ್ ಖಾನ್: ನಿರ್ಮಾಪಕ ಆದಿತ್ಯ ಚೋಪ್ರಾ ಅವರ ಮಹತ್ವಾಕಾಂಕ್ಷೆಯ ಸ್ಪೈ ಯೂನಿವರ್ಸ್‌ನಲ್ಲಿ ಸಲ್ಮಾನ್ ಖಾನ್-ಕತ್ರಿನಾ ಕೈಫ್ ನಟನೆಯ ‘ಏಕ್ ಥಾ ಟೈಗರ್’ ಮತ್ತು ‘ಟೈಗರ್ ಜಿಂದಾ ಹೈ’ ಜೊತೆಗೆ ಹೃತಿಕ್ ರೋಷನ್ ಅವರ ‘ವಾರ್’ ಸಿನಿಮಾಗಳು ತೆರೆ ಕಂಡಿವೆ. ಟೈಗರ್ ಸೀರಿಸ್ನ ಮೂರನೇ ಚಿತ್ರ ಡಿಸೆಂಬರ್‌ನಲ್ಲಿ ಬರಲಿದೆ. ಪಠಾಣ್ ಚಿತ್ರದಲ್ಲಿಯೂ ಸಲ್ಮಾನ್ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರವು ಜನವರಿ 25 ರಂದು ವಿಶ್ವದಾದ್ಯಂತ ಚಿತ್ರಮಂದಿರಗಳಲ್ಲಿ ತೆರ ಕಾಣಲಿದ್ದು. ಹಿಂದಿ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ಬಿಡುಗಡೆಯಾಗಲಿದೆ.
ಇದನ್ನೂ ಓದಿ: ಸೋಷಿಯಲ್ ಮೀಡಿಯಾ ಸ್ಟಾರ್ ಉರ್ಫಿ ಜಾವೇದ್‌ಗೆ ಭದ್ರತೆ ಒದಗಿಸುವಂತೆ ಮಹಾ ಮಹಿಳಾ ಆಯೋಗದ ಪತ್ರ