ETV Bharat / entertainment

Actor Dhruva Sarja.. ಬಾಡಿಗಾರ್ಡ್​ಗೆ ಐಷಾರಾಮಿ ಫಾರ್ಚೂನರ್ ಕಾರು ಗಿಫ್ಟ್ ಕೊಟ್ಟ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ - ಆ್ಯಕ್ಷನ್​ ಪ್ರಿನ್ಸ್​ ಧ್ರುವ ಸರ್ಜಾ

ಮಾರ್ಟಿನ್​ ಹೀರೋ ಆ್ಯಕ್ಷನ್​ ಪ್ರಿನ್ಸ್​ ಧ್ರುವ ಸರ್ಜಾ ಕೊಟ್ಟ ಗಿಫ್ಟ್​​ ನೋಡಿ, ಶಾಕ್​ ಆಗುವುದರ ಜೊತೆಗೆ ಭಾವುಕರಾದ ಬಾಡಿಗಾರ್ಡ್​ ಅಶ್ವಿನ್​

Action prince gifted a car worth lakhs to the bodyguard
ಬಾಡಿಗಾರ್ಡ್​ಗೆ ಲಕ್ಷ ಬೆಲೆ ಬಾಳುವ ಕಾರು ಗಿಫ್ಟ್ ಕೊಟ್ಟ ಆಕ್ಷನ್ ಪ್ರಿನ್ಸ್
author img

By

Published : Jun 15, 2023, 1:13 PM IST

ಸಿನಿಮಾ ಸೆಲೆಬ್ರಿಟಿಗಳು ತಮ್ಮ ಬಾಡಿಗಾರ್ಡ್ ಹಾಗೂ ಸದಾ ಜೊತೆಗೆ ಇದ್ದು ನೋಡಿಕೊಳ್ಳುವ ಗೆಳೆಯರಿಗೆ ದುಬಾರಿ ಬೆಲೆಯ ಗಿಫ್ಟ್ ಕೊಡುವ ಮೂಲಕ ಅಭಿಮಾನಿಗಳ ದೃಷ್ಟಿಯಲ್ಲಿ ನಿಜವಾದ ಹೀರೋ ಎಂದು ಕರೆಯಿಸಿಕೊಳ್ಳುತ್ತಾರೆ. ಇದೀಗ ಕನ್ನಡ ಚಿತ್ರರಂಗದಲ್ಲಿ ಮೂರು ಸಿನಿಮಾಗಳಿಗೆ ಸ್ಟಾರ್ ಹೀರೋ ಆದ ನಟರಲ್ಲಿ, ಅದ್ಧೂರಿ ಹುಡುಗ ಧ್ರುವ ಸರ್ಜಾ ಕೂಡ ಒಬ್ಬರು. ಭರ್ಜರಿ, ಪೊಗರು ಸಿನಿಮಾ ಬಳಿಕ ಧ್ರುವ ಸರ್ಜಾ ಮಾರ್ಟಿನ್ ಹಾಗು ಕೆ. ಡಿ‌ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.

ಈ ಮಧ್ಯೆ ಧ್ರುವ ಸರ್ಜಾ ತಮ್ಮ ಬಾಡಿಗಾರ್ಡ್ ಅನ್ನುವುದಕ್ಕಿಂತ ಗೆಳೆಯ ಅಶ್ವಿನ್ ಬರ್ತ್ ಡೇಗೆ ದುಬಾರಿ ಬೆಲೆಯ ಉಡುಗೊರೆ ನೀಡುವ ಮೂಲಕ ಅಶ್ವಿನ್ ದೃಷ್ಟಿಯಲ್ಲಿ ಆ್ಯಕ್ಷನ್ ಪ್ರಿನ್ಸ್ ರಿಯಲ್ ಹೀರೋ ಅನಿಸಿಕೊಂಡಿದ್ದಾರೆ. ಹೌದು, ಧ್ರುವ ಸರ್ಜಾ ಜೊತೆಗೆ ಕಳೆದ ಏಳು ವರ್ಷಗಳಿಂದ ಇರುವ ಅಶ್ವಿನ್​ಗೆ ಮಾರ್ಟಿನ್ ಭರ್ಜರಿ ಗಿಫ್ಟ್ ಕೊಟ್ಟಿದ್ದಾರೆ. ಕಪ್ಪು ಬಣ್ಣದ ಟೊಯೋಟಾ ಫಾರ್ಚುನರ್ ಕಾರನ್ನು ಧ್ರುವ ಸರ್ಜಾ ಅಶ್ವಿನ್ ಹುಟ್ಟುಹಬ್ಬಕ್ಕೆ ಗಿಫ್ಟ್ ಆಗಿ ಕೊಟ್ಟಿದ್ದಾರೆ. ಧ್ರುವ ಸರ್ಜಾ ಅವರ ಈ ಸರ್​ಪ್ರೈಸ್ ಉಡುಗೊರೆ ಕಂಡು ಅಶ್ವಿನ್ ಕೂಡ ಒಂದು ಕ್ಷಣ ಶಾಕ್​ ಆಗಿದ್ದಾರೆ. ಕಪ್ಪು ಬಣ್ಣದ ಫಾರ್ಚೂನರ್ ಕಾರು, ಬರೋಬ್ಬರಿ 51 ಲಕ್ಷ ರೂಪಾಯಿ ಬೆಲೆ ಬಾಳುವ ಐಷಾರಾಮಿ ಕಾರು ಇದಾಗಿದೆ.

ಪೊಗರು ಸಿನಿಮಾ ಬಳಿಕ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅಭಿನಯದ ಹೈ ವೊಲ್ಟೇಜ್ ಚಿತ್ರ ಮಾರ್ಟಿನ್. ನಿರ್ದೇಶಕ ಎ. ಪಿ ಅರ್ಜುನ್ ನಿರ್ದೇಶನದ ಹಾಗು ಫ್ಯಾಷನಿಟ್ ನಿರ್ಮಾಪಕ ಎಂದು ಕರೆಯಿಸಿಕೊಂಡಿರುವ ಉದಯ್ ಕೆ‌ ಮೆಹ್ತಾ ಅವರು ಬಹುಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಿರುವ ಪ್ಯಾನ್ ಇಂಡಿಯಾ ಸಿನಿಮಾ ಇದಾಗಿದೆ. ಆಲ್ ಮೋಸ್ಟ್ ಚಿತ್ರೀಕರಣ ಮುಗಿಸಿ ಪ್ರೇಕ್ಷಕರ ಮುಂದೆ ಬರೋದಿಕ್ಕೆ ಚಿತ್ರತಂಡ ಸಜ್ಜಾಗಿದೆ.

ಟೀಸರ್​ನಿಂದಲೇ ದಕ್ಷಿಣ ಭಾರತದಲ್ಲಿ ಡಿಮ್ಯಾಂಡ್ ಹೆಚ್ಚಿಸಿಕೊಂಡಿರುವ ಮಾರ್ಟಿನ್ ಚಿತ್ರ ಔಟ್ ಆ್ಯಂಡ್ ಔಟ್ ಆ್ಯಕ್ಷನ್ ಸಿನಿಮಾ. ಸಿನಿಮಾದಲ್ಲಿ ಭರ್ಜರಿ ಸಾಹಸಗಳ ಅಬ್ಬರ ರೋಚಕತೆಯಿಂದ‌ ಕೂಡಿದೆ. ಯಾವಾಗ ಈ ಸಿನಿಮಾ ಬಿಡುಗಡೆಗಾಗಿ ಅಭಿಮಾನಿಗಳು ಕೂಡ ದೊಡ್ಡ ಮಟ್ಟದ ನಿರೀಕ್ಷೆಯಿಂದ ಕಾದು ಕುಳಿತಿದ್ದಾರೆ.

ಬಹುಭಾಷೆಯಲ್ಲಿ ರಿಲೀಸ್ ಆಗುತ್ತಿರುವ ಈ ಚಿತ್ರಕ್ಕೆ ಸತ್ಯ ಹೆಗಡೆ ಕ್ಯಾಮೆರಾ ವರ್ಕ್ ಮಾಡಿದ್ದಾರೆ. ಕೆಜಿಎಫ್ ಸಿನಿಮಾ ಖ್ಯಾತಿಯ ರವಿ ಬಸ್ರೂರು ಕೂಡ ಈ ಚಿತ್ರಕ್ಕೆ ಕೆಲಸ ಮಾಡಿದ್ದಾರೆ. ಅರ್ಜುನ್ ಸರ್ಜಾ ಈ ಸಿನಿಮಾದ ಕಥೆ ಬರೆದಿದ್ದು, ನಿರ್ದೇಶಕ ಎ.ಪಿ. ಅರ್ಜುನ್ ಆ್ಯಕ್ಷನ್​ ಕಟ್​ ಹೇಳಿದ್ದಾರೆ. ಪ್ರಶಾಂತ್ ರಾಜಪ್ಪ ಡೈಲಾಗ್ ಬರೆದಿದ್ದಾರೆ. ಹಾಲಿವುಡ್​ ಆ್ಯಕ್ಷನ್ ಸಿನಿಮಾ ನೋಡಿದ ಅನುಭವ ಮಾರ್ಟಿನ್ ಚಿತ್ರದಲ್ಲಿ ಇರಲಿದೆ ಅನ್ನೋದು ನಿರ್ದೇಶಕ ಅರ್ಜುನ್ ಹಾಗು ನಿರ್ಮಾಪಕ ಉದಯ್ ಕೆ‌ ಮೆಹ್ತಾ ಅವರ ಆತ್ಮವಿಶ್ವಾಸ.

ಇದನ್ನೂ ಓದಿ: : ಚಾಲೆಂಜಿಂಗ್ ಸ್ಟಾರ್ ಅಪ್ಪಟ ಅಭಿಮಾನಿ ’ಸುದೀಪ್’​ಗೆ ಸಿಗಲಿದೆಯಾ 'ದರ್ಶನ' ಭಾಗ್ಯ!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.