ನಟ ಧ್ರುವ ಸರ್ಜಾ ಅಭಿನಯದ ಪ್ಯಾನ್ ಇಂಡಿಯಾ ಸಿನಿಮಾ 'ಮಾರ್ಟಿನ್' ರಿಲೀಸ್ ದಿನಾಂಕ ರಿವೀಲ್ ಆಗಿದೆ. ಇದೇ ವರ್ಷ ಸೆಪ್ಟಂಬರ್ 30ರಂದು ಮಾರ್ಟಿನ್ ಐದು ಭಾಷೆಗಳಲ್ಲಿ ವಿಶ್ವದಾದ್ಯಂತ ಬಿಡುಗಡೆ ಆಗಲಿದೆ ಎಂದು ಚಿತ್ರ ತಂಡ ಪ್ರಕಟಿಸಿದೆ. ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾಗೆ ಅದ್ದೂರಿ ಹಿಟ್ ಕೊಟ್ಟ ನಿರ್ದೇಶಕ ಎ.ಪಿ ಅರ್ಜುನ್ ಅವರು ಮಾರ್ಟಿನ್ ಚಿತ್ರ ನಿರ್ದೇಶಿಸುತ್ತಿದ್ದು, ಭಾರೀ ನಿರೀಕ್ಷೆ ಮೂಡಿಸಿದೆ.
ಅದ್ದೂರಿ ಸಿನಿಮಾ ಬಳಿಕ ನಿರ್ದೇಶಕ ಎ.ಪಿ.ಅರ್ಜುನ್ ಮತ್ತು ಧ್ರುವ ಸರ್ಜಾ ಒಂದಾಗುತ್ತಿರುವ ಎರಡನೇ ಚಿತ್ರ ಇದಾಗಿದೆ. ಮತ್ತೊಂದು ಹಿಟ್ ಕೊಡುವುದಕ್ಕೆ ಇವರಿಬ್ಬರು ಪಣತೊಟ್ಟಿದ್ದು, ಇವರಿಬ್ಬರ ಕಾಂಬಿನೇಷನ್ ಮೇಲೆ ನಿರೀಕ್ಷೆ ಹೆಚ್ಚಾಗಿದೆ. ಬೃಹತ್ ವೆಚ್ಚದಲ್ಲಿ ಉದಯ್ ಕೆ. ಮೆಹ್ತಾ ಈ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ಧ್ರುವ ಸರ್ಜಾ ಜೊತೆ ಮರಾಠಿ ಸುಂದರಿ ವೈಭವಿ ಶಾಂಡಿಲ್ಯ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.
-
MARTIN 😊🙏
— Dhruva Sarja (@DhruvaSarja) April 10, 2022 " class="align-text-top noRightClick twitterSection" data="
SRI RAMA NAVAMI 🙏 Jai Hanuman 😊🙏 pic.twitter.com/k6LxDIIsFE
">MARTIN 😊🙏
— Dhruva Sarja (@DhruvaSarja) April 10, 2022
SRI RAMA NAVAMI 🙏 Jai Hanuman 😊🙏 pic.twitter.com/k6LxDIIsFEMARTIN 😊🙏
— Dhruva Sarja (@DhruvaSarja) April 10, 2022
SRI RAMA NAVAMI 🙏 Jai Hanuman 😊🙏 pic.twitter.com/k6LxDIIsFE
ಕರ್ನಾಟಕದಿಂದ ಸದ್ಯ ಬಹುನಿರೀಕ್ಷಿತ ಸಿನಿಮಾಗಳಾದ ಕೆಜಿಎಫ್2, ವಿಕ್ರಾಂತ್ ರೋಣ, 777 ಚಾರ್ಲಿ ಪ್ಯಾನ್ ಇಂಡಿಯಾ ಬಿಡುಗಡೆಗೆ ಈಗಾಗಲೇ ಸಿದ್ಧವಾಗಿವೆ. ಇದೀಗ ಮಾರ್ಟಿನ್ ಚಿತ್ರ ಕೂಡ ಸಂಚಲನ ಮೂಡಿಸುವ ಭರವಸೆ ನೀಡಿದೆ. ಧ್ರುವ ಸರ್ಜಾ ಅವರು ಮಾರ್ಟಿನ್ ಚಿತ್ರ ಬಿಡುಗಡೆಯ ಟೀಸರ್ ಅನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಅಭಿಮಾನಿಗಳು ಥ್ರಿಲ್ ಆಗಿದ್ದಾರೆ.
(ಇದನ್ನೂ ಓದಿ: ಎರಡು ದೊಡ್ಡ ಕನಸುಗಳ ಸಮ್ಮಿಲನ.. ಕರುನಾಡ ಹೆಮ್ಮೆ ಆರ್‌ಸಿಬಿ-ಹೊಂಬಾಳೆ ಜುಗಲ್‌ಬಂದಿ ಜಬರ್ದಸ್ತ್!)