ETV Bharat / entertainment

ಆರ್ಯ ಸೀಸನ್​ 3ರ ಟೀಸರ್​ ಬಿಡುಗಡೆ: ಒರಿಜಿನಲ್​ ಗ್ಯಾಂಗ್​ಸ್ಟರ್​ ಲುಕ್​ನಲ್ಲಿ ಸುಶ್ಮಿತಾ ಸೇನ್​ - ಒರಿಜಿನಲ್​ ಗ್ಯಾಂಗ್​ಸ್ಟರ್​ ಲುಕ್​

ಒಂದು ಹಾಗೂ ಎರಡು ಸೀಸನ್​ಗಳು ಯಶಸ್ವಿಯಾಗಿ, ವಿಮರ್ಶಾತ್ಮಕವಾಗಿ ಗೆದ್ದ ನಂತರ ಆರ್ಯ ತಂಡ ಸೀಸನ್​ ಮೂರರ ಶೂಟಿಂಗ್​ ಪ್ರಾರಂಭಿಸಿದೆ. ಇದೀಗ ಟೀಸರ್​ ಬಿಡುಗಡೆ ಮಾಡಿದೆ.

Arya 3 teaser
ಆರ್ಯ 3 ಟೀಸರ್​
author img

By

Published : Jan 30, 2023, 5:11 PM IST

ಮುಂಬೈ: ಅಂತಾರಾಷ್ಟ್ರೀಯ ಎಮ್ಮಿ-ನಾಮನಿರ್ದೇಶಿತ ವೆಬ್​ ಸಿರೀಸ್​ ಆರ್ಯ ತಯಾರಕರು ಇಂದು ಸೀಸನ್ 3 ಯ ಟೀಸರ್ ಅನ್ನು ಹಂಚಿಕೊಂಡಿದ್ದಾರೆ. ಬಾಲಿವುಡ್​ ಸ್ಟಾರ್​ ಸುಶ್ಮಿತಾ ಸೇನ್ ಅವರು ಟೈಟಲ್​ ರೋಲ್​ನಲ್ಲಿ, ನಾಯಕಿಯಾಗಿ ಕಾಣಿಸಿಕೊಂಡಿರುವ 'ಆರ್ಯ' ವೆಬ್​ ಸಿರೀಸ್​ ಮೂರನೇ ಸೀಸನ್​ನ ಟೀಸರ್​ ಅನ್ನು ಇಂದು ತಂಡ ಸಾಮಾಜಿಕ ಜಾಲತಾಣಗಳಲ್ಲಿ ಬಿಡುಗಡೆ ಮಾಡಿದೆ.

ಆರ್ಯ 3 ಟೀಸರ್​ನಲ್ಲಿ ಸುಶ್ಮಿತಾ ಸೇನ್ ಸಿಗರೇಟ್​ ಸೇದುತ್ತಾ ಗನ್​ ಲೋಡ್​ ಮಾಡುತ್ತಿರುವ ಒರಿಜಿನಲ್​ ಗ್ಯಾಂಗ್​ಸ್ಟರ್​ ಲುಕ್​ನಲ್ಲಿ ಸಖತ್​ ಇಂಪ್ರೆಸ್ಸಿವ್​ ಆಗಿ ಕಾಣಿಸಿಕೊಂಡಿದ್ದಾರೆ. ಆರ್ಯ ವೆಬ್​ ಸಿರೀಸ್​ ತನ್ನ ಕುಟುಂಬವನ್ನು ರಕ್ಷಿಸಲು ಪ್ರಯತ್ನಿಸುವ ಸ್ವತಂತ್ರ ಮಹಿಳೆಯಾಗಿ ಸುಶ್ಮಿತಾ ಸೇನ್​ ಅಭಿನಯಿಸಿದ್ದಾರೆ. ತನ್ನ ಗಂಡನ ಹತ್ಯೆಗೆ ಸೇಡು ತೀರಿಸಿಕೊಳ್ಳಲು ಮಾಫಿಯಾ ಗ್ಯಾಂಗ್​ಗೆ ಸೇರಿಕೊಳ್ಳುವ ದಿಟ್ಟ ಮಹಿಳೆಯ ಕಥೆ ಇದಾಗಿದೆ.

ಡಿಸ್ನಿ ಹಾಟ್​ಸ್ಟಾರ್​ ಇನ್​ಸ್ಟಾಗ್ರಾಂ ಅಧಿಕೃತ ಪೇಜ್​ನಲ್ಲಿ ಟೀಸರ್​ ಅನ್ನು ಹಂಚಿಕೊಂಡಿದ್ದು, 'ಅವಳು ಹಿಂತಿರುಗಿದ್ದಾಳೆ, ಅವಳೆಂದರೆ ಬ್ಯುಸಿನೆಸ್​, ಹಾಟ್​ಸ್ಟಾರ್​ ಸ್ಪೆಷಲ್​ ಆರ್ಯ 3ನೇ ಸೀಸನ್​ ಈಗ ಶೂಟಿಂಗ್​ ಹಂತದಲ್ಲಿದೆ. ಶೀಘ್ರದಲ್ಲೇ ಡಿಸ್ನಿ ಪ್ಲಸ್​ ಹಾಟ್​ಸ್ಟಾರ್​ನಲ್ಲಿ ಮಾತ್ರವೇ ತೆರೆಗೆ ಬರಲಿದೆ' ಎಂದು ಮಾಹಿತಿ ನೀಡಿದ್ದಾರೆ. ಅಂತಾರಾಷ್ಟ್ರೀಯ ಎಮ್ಮಿ-ನಾಮನಿರ್ದೇಶಿತ ಸರಣಿಯ ಮೂರನೇ ಸೀಸನ್‌ ಶೂಟಿಂಗ್​ನಲ್ಲಿ ಭಾಗವಹಿಸುತ್ತಿರುವುದು ಬಹಳ ಥ್ರಿಲ್ಲಿಂಗ್​ ಆಗಿದೆ. ಈ ಸಿರೀಸ್​ ನನಗೆ ಮನೆಯ ವಾತಾವರಣವನ್ನೇ ಕೊಡುತ್ತದೆ. ಅಷ್ಟೇ ಅಲ್ಲ, ನನ್ನೊಳಗೆ ಸಬಲೀಕರಣದ ಭಾವವನ್ನು ಹೆಚ್ಚಿಸುತ್ತದೆ ಎಂದು ಲೇಡಿ ಸೂಪರ್​ಸ್ಟಾರ್​ ಸುಶ್ಮಿತಾ ಸೇನ್ ಆರ್ಯ ಟೀಸರ್​ ಬಿಡುಗಡೆ ಬಗ್ಗೆ ಹೇಳಿದ್ದಾರೆ.

ಡಿಸ್ನಿ ಪ್ಲಸ್​ ಹಾಟ್​​ಸ್ಟಾರ್​ ಪ್ರಸ್ತುತಪಡಿಸುತ್ತಿರುವ ಹಾಗೂ ರಾಮ್ ಮಾಧ್ವನಿ ಮತ್ತು ಸಂದೀಪ್ ಮೋದಿ ಅವರ ತಯಾರಿಸುತ್ತಿರುವ ಆರ್ಯ ವೆಬ್​ಸಿರೀಸ್​ ಜನಪ್ರಿಯ ಡಚ್ ಕ್ರೈಂ ಡ್ರಾಮಾ ಪೆನೊಜಾದ ಅಧಿಕೃತ ರಿಮೇಕ್ ಆಗಿದೆ. ಇದು ಮಧ್ಯವಯಸ್ಕ ಮಹಿಳೆ ಮತ್ತು ಆಕೆಯ ಕುಟುಂಬವನ್ನು ಉಳಿಸುವ ಹೋರಾಟದ ಸುತ್ತ ಸುತ್ತುವ ಕಥಯಾಗಿದೆ. ಆರ್ಯ ಮೊದಲ ಸೀಸನ್​ 2020ರಲ್ಲಿ ಹಾಗೂ ಎರಡನೇ ಸೀಸನ್​ 2021ರಲ್ಲಿ ಡಿಸ್ನಿ ಪ್ಲಸ್​ ಹಾಟ್​​ಸ್ಟಾರ್​ನಲ್ಲಿ ಬಿಡುಗಡೆಯಾಗಿತ್ತು. ಎರಡೂ ಸೀಸನ್​ಗಳು ಯಶಸ್ವಿಯಾಗಿ, ವಿಮರ್ಶಾತ್ಮಕವಾಗಿ ಮೆಚ್ಚುಗೆ ಗಳಿಸಿದ್ದವು. ಎರಡೂ ಸೀಸನ್​ಗಳ ಹಿಟ್​ ನಂತರ ಇತ್ತೀಚೆಗೆ ತಂಡ ಮೂರನೇ ಸೀಸನ್​ ಶೂಟಿಂಗ್​ ಪ್ರಾರಂಭಿಸಿದೆ.

ತಮ್ಮ ಹೆಸರಿಗೆ ಹೊಂದುವಂತಹ ಆರ್ಯ ಪಾತ್ರವನ್ನು ಕ್ರಿಯೇಟ್​ ಮಾಡಿರುವುದಕ್ಕೆ ಸುಶ್ಮಿತಾ ಸೇನ್​ ಅವರು ಶೋ ತಯಾರಕರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ. ನಾನು ಎರಡು ಸೀಸನ್‌ಗಳಲ್ಲಿ ಆರ್ಯ ಪಾತ್ರದಲ್ಲಿ ಬದುಕಿದ್ದೇನೆ ಮತ್ತು ಆ ಸಮಯದಲ್ಲಿ ಪ್ರೇಕ್ಷಕರಿಂದ ಪಡೆದ ಪ್ರೀತಿಯು ನನ್ನನ್ನು ಇನ್ನಷ್ಟು ಸಾಧಿಸಲು ಪ್ರೋತ್ಸಾಹಿಸಿದೆ. ಆರ್ಯ 3 ಶೂಟಿಂಗ್​ ಸೆಟ್‌ಗಳಲ್ಲಿ ನಡೆಯುತ್ತಿದ್ದರೂ, ನನಗೆ ಮನೆಯಲ್ಲೇ ಇರುವಂತೆ ಭಾಸವಾಗುತ್ತದೆ. ಅಂತಹ ವಾತಾವರಣವನ್ನು ತಂಡ ನನಗೆ ನೀಡಿದೆ. ಚಿತ್ರೀಕರಣದ ವೇಳೆ ಆ ಪಾತ್ರ ನನ್ನೊಳಗೆ ಸಬಲೀಕರಣದ ಭಾವನೆಯನ್ನು ನೀಡುತ್ತದೆ ಎಂದಿದ್ದಾರೆ.

ವೆಬ್​ ಸಿರೀಸ್​ ಬಗ್ಗೆ ಮಾತನಾಡಿರುವ ಮಾಧ್ವನಿ, ಆರ್ಯ ಸೀಸನ್​ಗಳನ್ನು ಸ್ಮರಣೀಯವಾಗಿಸಿರುವ ಕಲಾವಿದರು ಮತ್ತು ಸಿಬ್ಬಂದಿಗೆ ಮತ್ತು ವಿಶೇಷವಾಗಿ ಸುಶ್ಮಿತಾ ಸೇನ್​ ಅವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಹೇಳಿದರು. ತಯಾರಕರ ಪ್ರಕಾರ, ಸುಶ್ಮಿತಾ ಸೇನ್ ಅವರು ಆರ್ಯ ಪಾತ್ರಕ್ಕೆ ಒಂದು ಸಂವೇದನಾಶೀಲತೆಯನ್ನು ತರುತ್ತಾರೆ. ಒಬ್ಬ ಒಂಟಿ ತಾಯಿಯು ಅಸಾಂಪ್ರದಾಯಿಕ ಜೀವನವನ್ನು ದಾಟುವ ಕಥೆ ಎರಸೂ ಸೀಸನ್​ಗಳಲ್ಲಿತ್ತು.

ಮುಂದೆ ಬರುತ್ತಿರುವ ಆರ್ಯ 3 ಸೀಸನ್​ನ ಕಥಾವಸ್ತು ಮತ್ತು ಪ್ರೀಮಿಯರ್ ದಿನಾಂಕವನ್ನು ತಯಾರಕರು ಇನ್ನೂ ಹಂಚಿಕೊಂಡಿಲ್ಲ. ಆದರೆ ಮುಂಬರುವ ಸೀಸನ್​ ಅನ್ನು ಆರ್ಯಾಳ ಕಥೆಯನ್ನು ಮುಂದಕ್ಕೆ ಕೊಂಡೊಯ್ಯುವಂತೆ ಕಠಿಣವಾದ ಕ್ಯಾನ್ವಾಸ್‌ನಲ್ಲಿ ನಿರ್ಮಿಸಲಾಗಿದೆ. ಆರ್ಯ 3 ಅನೇಕ ಪಾತ್ರಗಳು, ಮುರಿದ ಸಂಬಂಧಗಳು, ಸಣ್ಣ ಆತ್ಮೀಯ ಕ್ಷಣಗಳು ಮತ್ತು ಪರಿಣಾಮಕಾರಿ ಹಿನ್ನೆಲೆಗಳಿಂದ ಕೂಡಿದೆ ಎಂದು ಹೇಳಿದ್ದಾರೆ.

ಆರ್ಯ ವೆಬ್​ ಸಿರೀಸ್​ ಸೀಸನ್ 1 ಸಂತೋಷವಾಗಿರುವ ವಿವಾಹಿತ ಮಹಿಳೆ ಆರ್ಯ (ಸುಶ್ಮಿತಾ ಸೇನ್) ಸುತ್ತ ಸುತ್ತುತ್ತದೆ. ಆಕೆಯ ಪತಿ, ಫಾರ್ಮಾ ಬ್ಯಾರನ್ ಆಗಿರುವಂತಹ ತೇಜ್ ಸರೀನ್ (ಚಂದ್ರಚೂರ್ ಸಿಂಗ್) ಗುಂಡು ಹಾರಿಸಿ ಸಾಯಿಸಲಾಗುತ್ತದೆ. ತೇಜ್ ಅಕ್ರಮ ಮಾದಕ ದ್ರವ್ಯ ವ್ಯವಹಾರದಲ್ಲಿ ತೊಡಗಿರುವ ಕಾರಣದಿಂದ ಆಕೆಯ ಕುಟುಂಬಕ್ಕೆ ಬೆದರಿಕೆ ಎದುರಿಸಬೇಕಾಗುತ್ತದೆ. ಇದರಿಂದಾಗಿ ಆಕೆಯ ಪ್ರಪಂಚವೇ ತಲೆಕೆಳಗಾಗಿ ಹೋಗುತ್ತದೆ. ಎರಡನೇಯ ಸೀಸನ್​ನಲ್ಲಿ, ಆರ್ಯ ಕ್ರೈಂನ ಕರಾಳ ಪ್ರಪಂಚದ ವಿರುದ್ಧ ಹೋರಾಡುವುದನ್ನು ಮತ್ತು ಶತ್ರುಗಳು ಆಕೆಯ ಕುಟುಂಬವನ್ನು ಟಾರ್ಗೆಟ್​ ಮಾಡುವ ಬಗ್ಗೆ ಇದೆ.

ಇದನ್ನೂ ಓದಿ: ಪಠಾಣ್​ ಯಶಸ್ಸು: ಅಭಿಮಾನಿಗಳ ಪ್ರತಿಕ್ರಿಯೆ ನೋಡಲು ಥಿಯೇಟರ್​​ಗೆ ಬಂದ ದೀಪಿಕಾ ಪಡುಕೋಣೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.