ETV Bharat / entertainment

ಅಮಿರ್ ಖಾನ್ ನಟನೆಯ ಬಹುನಿರೀಕ್ಷಿತ 'ಲಾಲ್ ಸಿಂಗ್ ಚಡ್ಡಾ' ಚಿತ್ರದ ಟ್ರೈಲರ್ ರಿಲೀಸ್ - ಫಾರೆಸ್ಟ್​ ಗಂಪ್​ನ ಅಧಿಕೃತ ರಿಮೇಕ್ ಚಿತ್ರ

ಬಾಲಿವುಡ್​ ತಾರೆಗಳಾದ ಅಮಿರ್ ಖಾನ್ ಮತ್ತು ಕರೀನಾ ಕಪೂರ್ ನಟನೆಯ ‘ಲಾಲ್ ಸಿಂಗ್ ಚಡ್ಡಾ’ ಚಿತ್ರದ ಟ್ರೈಲರ್ ರಿಲೀಸ್ ಆಗಿದೆ. ಐಪಿಎಲ್ 2022ರ ಫೈನಲ್ ಪಂದ್ಯದ ಮೊದಲ ಇನ್ನಿಂಗ್ಸ್​ನ ಎರಡನೇ ವಿರಾಮದ ವೇಳೆ ಈ ಟ್ರೈಲರ್ ಅನ್ನು ರಿಲೀಸ್ ಮಾಡಲಾಗಿದೆ..

Aamir Khan starrer 'Laal Singh Chaddha' trailer is a joyride of emotions
ಲಾಲ್ ಸಿಂಗ್ ಚಡ್ಡಾ’ ಚಿತ್ರದ ಟ್ರೈಲರ್ ರಿಲೀಸ್
author img

By

Published : May 30, 2022, 12:44 PM IST

ಹೊಸದಿಲ್ಲಿ : ಅಮೀರ್ ಖಾನ್ ಅಭಿನಯದ ಬಹುನಿರೀಕ್ಷಿತ 'ಲಾಲ್ ಸಿಂಗ್ ಚಡ್ಡಾ' ಚಿತ್ರದ ಟ್ರೈಲರ್ ಭಾನುವಾರ ಸಂಜೆ ಅನಾವರಣಗೊಂಡಿದೆ. 2 ನಿಮಿಷ 45 ಸೆಕೆಂಡುಗಳ ಟ್ರೇಲರ್​​ ಇದಾಗಿದ್ದು, ಚಿತ್ರದ ನಾಯಕ ಅಮೀರ್ ಖಾನ್ ಅವರ ಮಗುವಿನಂತಹ ಮುಗ್ಧ ನಟನೆಗೆ ಮೆಚ್ಚುಗೆ ವ್ಯಕ್ತವಾಗಿದೆ. ಟ್ರೈಲರ್​ ನೋಡಿದ ನೆಟಿಜನ್​​ಗಳು ತರಹೇವಾರು ಕಾಮೆಂಟ್​ ಮಾಡಲಾಂಭಿಸಿದ್ದಾರೆ.

ಅದ್ವೈತ್ ಚಂದನ್ ನಿರ್ದೇಶನ ಮಾಡಿದ್ದು, ಇದು ಹಾಲಿವುಡ್​ನ ‘ಫಾರೆಸ್ಟ್​ ಗಂಪ್’ನ ಅಧಿಕೃತ ರಿಮೇಕ್ ಚಿತ್ರವಾಗಿದೆ. ಟಾಲಿವುಡ್ ನಟ ನಾಗಚೈತನ್ಯ ಈ ಚಿತ್ರದ ಮೂಲಕ ಬಾಲಿವುಡ್​​ಗೆ ಪ್ರವೇಶಿಸುತ್ತಿದ್ದಾರೆ. ಟ್ರೈಲರ್​ನಲ್ಲಿ ಅವರೂ ಕಾಣಿಸಿಕೊಂಡಿದ್ದು, ಕುತೂಹಲ ಮೂಡಿಸಿದ್ದಾರೆ. ಟ್ರೈಲರ್​ನಲ್ಲಿ ತುಂಬಾ ಎಂದಿನಂತೆ ಅಮಿರ್ ತಮ್ಮ ಭಿನ್ನ ಅವತಾರದಲ್ಲಿ ಕಾಣಿಸಿಕೊಂಡಿದ್ದು, ಅವರ ಹೊಸ ಮ್ಯಾನರಿಸಂ ಗಮನ ಸೆಳೆದಿದೆ.

  • " class="align-text-top noRightClick twitterSection" data="">

ಅವರ ಈ ನಟನೆಯ ರಾಜ್‌ಕುಮಾರ್ ಹಿರಾನಿ ಅವರ 'ಪಿಕೆ' ಸಿನಿಮಾವನ್ನು ನೆನಪಿಸದೇ ಇರದು. ಇನ್ನು ಅಮೀರ್ ಖಾನ್​​ ಜೊತೆ ಕರೀನಾ ಕಪೂರ್​ ಕೆಮಿಸ್ಟ್ರಿ ಕೂಡ ತುಂಬಾ ಅದ್ಭುತವಾಗಿ ಮೂಡಿಬಂದಿದೆ. ಮೋನಾ ಸಿಂಗ್ ಅವರು ನಾಯಕನ ತಾಯಿಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಟ್ರೈಲರ್​ ಬಿಡುಗಡೆಯಾದ ಒಂದೇ ದಿನದಲ್ಲಿ ಭಾರಿ ಪ್ರಶಂಸೆ ವ್ಯಕ್ತವಾಗಿದೆ.

ಅಮೀರ್ ಖಾನ್​ ಮತ್ತು ಅದ್ವೈತ್ ಚಂದನ್ ಅವರು 'ಸೀಕ್ರೆಟ್ ಸೂಪರ್‌ಸ್ಟಾರ್' ಚಿತ್ರದಲ್ಲಿ ಜೊತೆಯಾಗಿ ಕೆಲಸ ಮಾಡಿದ್ದು, ಇದೀಗ 'ಲಾಲ್ ಸಿಂಗ್ ಚಡ್ಡಾ' ಚಿತ್ರದ ಮೂಲಕ ಮತ್ತೆ ಒಂದಾಗಿದ್ದಾರೆ. ಅಮೀರ್ ಖಾನ್ ಪ್ರೊಡಕ್ಷನ್ಸ್, ಕಿರಣ್ ರಾವ್ ಮತ್ತು ವಯಾಕಾಮ್ 18 ಸ್ಟುಡಿಯೋಸ್ ನಿರ್ಮಿಸಿದ ಈ ಚಿತ್ರ 11 ಆಗಸ್ಟ್ 2022ರಂದು ಬಿಡುಗಡೆಯಾಗಲಿದೆ.

ಈ ಹಿಂದೆ ಚಿತ್ರವನ್ನು ಏಪ್ರಿಲ್ 14ರಂದು ತೆರೆಗೆ ತರಲು ಉದ್ದೇಶಿಸಲಾಗಿತ್ತು. ಆದರೆ, ಅದೇ ದಿನ ‘ಕೆಜಿಎಫ್ ಚಾಪ್ಟರ್ 2’ ಕೂಡ ಬಿಡುಗಡೆ ಘೋಷಿಸಿತ್ತು. ನಂತರದಲ್ಲಿ ಚಿತ್ರದ ರಿಲೀಸ್ ದಿನಾಂಕವನ್ನು ಮುಂದೂಡಲಾಗಿತ್ತು. ಸ್ವತಃ ಅಮೀರ್​ ಖಾನ್​ ಅವರೇ ಈ ಬಗ್ಗೆ ಕಾರಣ ನೀಡಿ ಟ್ವೀಟ್​ ಮಾಡಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.