ಬೆಂಗಳೂರು: ಗ್ಲೋಬಲ್ ಐಕಾನ್ ಪ್ರಿಯಾಂಕಾ ಚೋಪ್ರಾ ಮತ್ತು ಅವರ ಪತಿ, ಹಾಲಿವುಡ್ ಗಾಯಕ ನಿಕ್ ಜೋನಾಸ್ ಇಬ್ಬರು ಹೆಚ್ಚು ಪ್ರಖ್ಯಾತಿ ಜೊತೆಗೆ ಚಾಲ್ತಿಯಲ್ಲಿರುವ ಜೋಡಿ ಎಂದರೆ ತಪ್ಪಾಗಲಾರದು. ಅದರಲ್ಲೂ ಮಾಲ್ತಿ ಮೇರಿ ಇವರ ಜೀವನಕ್ಕೆ ಆಗಮಿಸಿದ ಮೇಲೆ ಇದೀಗ ಈ ಮೂವರು ಅನೇಕ ಬಾರಿ ಸುದ್ದಿಯಾಗುತ್ತಲೇ ಇದ್ದಾರೆ. ಇದೀಗ ಅಂತಹದ್ದೇ ಮತ್ತೊಂದು ಘಟನೆ ಬಂದಿದೆ. ಅಪ್ಪನಾಗಿ ಬಡ್ತಿ ಪಡೆದಿರುವ ನಿಕ್ ಇದೀಗ ತಂದೆಯಂದಿರ ದಿನದ ಸಂಭ್ರಮದಲ್ಲಿದ್ದಾರೆ. ಇದೇ ಜೂನ್ 18ರಂದು ಫಾದರ್ಸ್ ಡೇ ಬಂದಿದ್ದು, ಇದಕ್ಕಾಗಿ ವಿಶೇಷವಾಗಿ ತಯಾರಿ ನಡೆಸಿದ್ದಾರೆ. ಆದರೆ, ಈ ದಿನವನ್ನು ಹೆಂಡತಿ ಪ್ರಿಯಾಂಕಾ ಜೊತೆ ಸೇರಿ ಮತ್ತಷ್ಟು ಅದ್ಬುತವಾಗಿರಿಸಲು ಮುಂದಾಗಿದ್ದಾರೆ. ಈ ಕಾರ್ಯಕ್ರಮದ ದಿನ ಪ್ರಿಯಾಂಕಾ ಕೂಡ ನಮ್ಮ ಜೊತೆ ಭಾಗಿಯಾಗಲಿರುವುದಾಗಿ ನಿಕ್ ತಿಳಿಸಿದ್ದಾರೆ.
ಟ್ರೆಬೆಕಾ ಫಿಲ್ಮ್ ಫೆಸ್ಟಿವಲ್ನಲ್ಲಿ ತಮ್ಮ ದಿ ಗುಡ್ ಹಾಫ್ ಸಿನಿಮಾದ ಪ್ರೀಮಿಯರ್ನಲ್ಲಿ, ಈ ಕುರಿತು ಮಾತನಾಡಿರುವ ಅವರು, ನನ್ನ ತಂದೆ ಅತ್ಯಂತ ದೊಡ್ಡ ಪಾತ್ರವನ್ನು ನಿರ್ವಹಿಸಿದ್ದಾರೆ. ಪ್ರತಿಯೊಬ್ಬ ತಂದೆ ಈ ದಿನವನ್ನು ವಿಶೇಷವಾಗಿ ಪರಿಗಣಿಸುತ್ತಾರೆ. ಇದರಲ್ಲಿ ನಾನು ಹೊಸ ಅಳವಡಿಕೆ ಮಾಡಿಕೊಳ್ಳಲು ಮುಂದಾಗಿದ್ದೇನೆ. ಮಹಿಳೆಯರು ಇಲ್ಲದೇ ನಾವು ಅದ್ಭುತ ತಂದೆಯಾಗಲು ಸಾಧ್ಯವಿಲ್ಲ. ನಮ್ಮ ಕನಸನ್ನು ನನಸಾಗಿಸುವಲ್ಲಿ ಮಹಿಳೆಯರ ಪಾತ್ರ ಹೆಚ್ಚು. ನನ್ನ ಈ ಪ್ರಯಾಣವನ್ನು ಹೆಂಡತಿ ಜೊತೆ ಹಂಚಿಕೊಳ್ಳಲು ಇಷ್ಟಪಡುತ್ತೇನೆ. ಆಕೆ ನಿಜಕ್ಕೂ ಬಾಸ್ ಮತ್ತು ಅದ್ಬುತ ತಾಯಿ. ನನಗಿಂತ ಇದು ಆಕೆಗೆ ಹೆಚ್ಚು ಮಹತ್ವಪೂರ್ಣವಾದ ದಿನವಾಗಿರಲಿದೆ ಎಂದಿದ್ದಾರೆ ನಿಕ್.
ನಿಕ್ ತಾಯಂದಿರ ದಿನದಂದು ಕೂಡ ನಟಿ ಪ್ರಿಯಾಂಕಾ ಚೋಪ್ರಾಗೆ ವಿಶಿಷ್ಟ ರೀತಿಯಲ್ಲಿ ಶುಭಾಶಯ ಕೋರಿದ್ದಾರೆ. ಮಗುವಿನೊಟ್ಟಿಗಿನ ಆಕೆಯ ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದ ನಿಕ್ ಜೋನಾಸ್, ನನ್ನ ಪ್ರೀತಿಗೆ ತಾಯಾಂದಿರ ದಿನದ ಶುಭಾಶಯಗಳು. ನೀವು ಅದ್ಬುತ ತಾಯಿ. ನೀನು ನನ್ನ ಮತ್ತು ಮಾಲ್ತಿ ಮೇರಿ ಜಗತ್ತನ್ನು ಪ್ರತಿ ನಿತ್ಯ ಎತ್ತರಕ್ಕೆ ಕೊಂಡೊಯ್ಯುತ್ತಿದ್ದೀಯಾ ಎಂದು ಕೆಂಪು ಹೃದಯದ ಎಮೋಜಿ ಹಾಕಿ ಶುಭ ಕೋರಿದ್ದರು.
2018ರಲ್ಲಿ ರಾಜಸ್ಥಾನದಲ್ಲಿ ಈ ಜೋಡಿ ಅದ್ದೂರಿ ಮದುವೆಯಾಗಿದ್ದರು. ಕಳೆದ ವರ್ಷ ಜನವರಿ 5, 2022ರಂದು ಇವರು ಸರೋಗೆಸಿ ಮೂಲಕ ಮಾಲ್ತಿ ಮೇರಿ ಪೋಷಕರಾದರು. ಮಾಲ್ತಿ ಮೇರಿ ಅವಧಿ ಪೂರ್ವ ಜನಿಸಿದ್ದರಿಂದ ನವಜಾತ ಶಿಶುಗಳ ಆರೈಕೆ ಘಟನೆಯಲ್ಲಿ 100 ದಿನಗಳನ್ನು ಕಳೆಯ ಬೇಕಾಯಿತು. ಈ ವೇಳೆ ಪ್ರತಿ ಕ್ಷಣ ನಾನು ಅಥವಾ ನಿಕ್ ಯಾರಾದರೂ ಒಬ್ಬರು ಆಕೆಯ ಜೊತೆಯಲ್ಲೇ ಇರುತ್ತಿದ್ದೆವು ಎಂದು ತಿಳಿಸಿದ್ದರು. ಮಾಲ್ತಿ ಹುಟ್ಟಿದಾಗಿನಿಂದ ನಮ್ಮಿಬ್ಬರನ್ನು ನೋಡುತ್ತಲೇ ಇದ್ದಾಳೆ. ಆಕೆಯ ಪಾಲನೆ ನಮ್ಮ ಮೊದಲ ಆದ್ಯತೆ ಎಂದು ಭಾವುಕವಾಗಿ ಸಂದರ್ಶನವೊಂದರಲ್ಲಿ ನಟಿ ಪ್ರಿಯಾಂಕಾ ಚೋಪ್ರಾ ತಿಳಿಸಿದ್ದರು.
ಮಗಳ ಲಾಲನೆ- ಪಾಲನೆ ಕುರಿತದಾದ ಫೋಟೋಗಳನ್ನು ನಟಿ ಪ್ರಿಯಾಂಕಾ ಚೋಪ್ರಾ ಆಗಿಂದಾಗ ಹಂಚಿಕೊಳ್ಳುವ ಮೂಲಕ ಮಗಳ ಕುರಿತು ಅಪ್ಡೇಟ್ಗಳನ್ನು ಅಭಿಮಾನಿಗಳಿಗೆ ನೀಡುತ್ತಿರುತ್ತಾರೆ.
ಇದನ್ನೂ ಓದಿ: Kangana Ranaut.. 'ಬಿಳಿ ಇಲಿ ರಾಮನ ಪಾತ್ರಕ್ಕೆ ಬೇಡ': ಭಗವಾನ್ನಂತೆ ಯಶ್ ಕಾಣುತ್ತಾರೆಂದ ಕಂಗನಾ