ಮುಂಬೈ: ಬಾಲಿವುಡ್ ಮೆಗಾಸ್ಟಾರ್ ಅಮಿತಾಬ್ ಬಚ್ಚನ್ ಅವರ ಮುಂಬರುವ ಚಿತ್ರ 'ಬ್ರಹ್ಮಾಸ್ತ್ರ'ದ ಫಸ್ಟ್ ಲುಕ್ ಬಿಡುಗಡೆಯಾಗಿದ್ದು, ಈ ಚಿತ್ರದಲ್ಲಿ ಅಮಿತಾಬ್ ಬಚ್ಚನ್ ಅವರು ಗುರುಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಧರ್ಮ ಪ್ರೊಡಕ್ಷನ್ಸ್ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿರುವ ಪೋಸ್ಟರ್‌ನಲ್ಲಿ ಅಮಿತಾಬ್ ಬಚ್ಚನ್ ಬಿಳಿ ಗಡ್ಡ ಮತ್ತು ಕೂದಲಿನಲ್ಲಿ ಕಾಣಿಸಿಕೊಂಡಿದ್ದಾರೆ. ಪೋಸ್ಟರ್‌ನಲ್ಲಿ ಅಮಿತಾಭ್ ಮುಖದ ಮೇಲೆ ಎರಡು ಗಾಯದ ಗುರುತುಗಳಿದ್ದು, ರಕ್ತ ಸೋರುತ್ತಿರುವುದು ಕಾಣಬಹುದಾಗಿದೆ.
ಅಮಿತಾಭ್ ಬಚ್ಚನ್ ಕೈಯಲ್ಲಿ ಆಯುಧವೂ ಇದೆ. ನಿರ್ಮಾಪಕರು ಅಮಿತಾಬ್ ಅವರ ಲುಕ್ನ್ನು ಬಿಡುಗಡೆ ಮಾಡಿ 'ಗುರು ಹೈ ಗಂಗಾ ಜ್ಞಾನ್ ಕಿ', ಗುರುವು ಆಯುಧವನ್ನು ಎತ್ತಿದಾಗ ಪಾಪಗಳು ನಾಶವಾಗಲಿವೆ ಎಂದು ಬರೆದಿದ್ದಾರೆ.
ಓದಿ: ಲವ್ ಮಾಕ್ಟೇಲ್ ಹೀರೊಗೆ ದಿಲ್ ಪಸಂದ್ ಚಿತ್ರತಂಡದಿಂದ ಸಿಗಲಿದೆ ಜನುಮದಿನದ ಉಡುಗೊರೆ
ಸ್ಟಾರ್ ಸ್ಟುಡಿಯೋಸ್, ಧರ್ಮ ಪ್ರೊಡಕ್ಷನ್ಸ್, ಪ್ರೈಮ್ ಫೋಕಸ್ ಮತ್ತು ಸ್ಟಾರ್‌ಲೈಟ್ ಪಿಕ್ಚರ್ಸ್ ನಿರ್ಮಿಸಿರುವ 'ಬ್ರಹ್ಮಾಸ್ತ್ರ' ಚಿತ್ರದಲ್ಲಿ ಅಮಿತಾಬ್ ಬಚ್ಚನ್, ರಣಬೀರ್ ಕಪೂರ್, ಆಲಿಯಾ ಭಟ್, ಮೌನಿ ರಾಯ್ ಮತ್ತು ನಾಗಾರ್ಜುನ ಅಕ್ಕಿನೇನಿ ಕೂಡ ಪ್ರಮುಖ ಪಾತ್ರವನ್ನು ಹೊಂದಿದ್ದಾರೆ ಎಂಬುದು ಗಮನಿಸಬೇಕಾದ ಸಂಗತಿ. ಚಿತ್ರವು ಸೆಪ್ಟೆಂಬರ್ 9, 2022 ರಂದು ಐದು ಭಾಷೆಗಳಾದ ಹಿಂದಿ, ತಮಿಳು, ತೆಲುಗು, ಮಲಯಾಳಂ ಮತ್ತು ಕನ್ನಡದಲ್ಲಿ ಬಿಡುಗಡೆಯಾಗಲಿದೆ.