ಕೊಪ್ಪಳ: ರಾಜ್ಯದ 28 ಕ್ಷೇತ್ರಗಳಲ್ಲಿ ಬಿಜೆಪಿ ಒಬ್ಬರೇ ಒಬ್ಬ ಹಿಂದುಳಿದವರಿಗೆ ಟಿಕೆಟ್ ನೀಡಿದ್ದಾರಾ ಎಂದು ಪ್ರಶ್ನಿಸಿದ ಮಾಜಿ ಸಿಎಂ ಸಿದ್ದರಾಮಯ್ಯ ಕೆ.ಎಸ್. ಈಶ್ವರಪ್ಪ ಸಾಮಾಜಿಕ ನ್ಯಾಯದ ವಿರೋಧಿ ಎಂದು ಜರಿದರು.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಸಿದ್ದು, ಕೆ.ಎಸ್. ಈಶ್ವರಪ್ಪ ಹಿಂದುಳಿದ ನಾಯಕರಲ್ವಾ? ಒಬ್ಬರೆ ಒಬ್ಬರಿಗೆ ಟಿಕೆಟ್ ಕೊಟ್ಟಿದ್ದಾರಾ? ಬಿಜೆಪಿಯಲ್ಲಿ ಸಾಮಾಜಿಕ ನ್ಯಾಯ ಎಲ್ಲಿದೆ ? ಎಂದು ಪ್ರಶ್ನಿಸಿದರು. ಈಶ್ವರಪ್ಪಗೆ ಸ್ವಾಭಿಮಾನವಿದ್ದರೆ ಬಿಜೆಪಿಗೆ ಗುಡ್ ಬೈ ಹೇಳಿ ಹೊರಬರಲಿ. ಬಿಜೆಪಿ, ಆರ್ಎಸ್ಎಸ್ ಮೂಲದವರು. ಅವರೆಲ್ಲ ಗೋಡ್ಸೆ ವಂಶಸ್ಥರು. ನಾವು ಆರ್ಎಸ್ಎಸ್ ಪಕ್ಷಕ್ಕೆ ಸೇರಿಸಿಕೊಳ್ಳಲ್ಲ ಎಂದರು.
ಪ್ರತಿಯೊಂದು ಕುಟುಂಬಕ್ಕೆ ವರ್ಷಕ್ಕೆ 72 ಸಾವಿರ ರೂಪಾಯಿ ಹಾಕುವ ವಿಚಾರವನ್ನು ಅತ್ಯಂತ ಯೋಜನಾ ಬದ್ದವಾಗಿ ಮಾಡುತ್ತೇವೆ. ಭಾರತದ ಬಜೆಟ್ 25 ಲಕ್ಷಕ್ಕೂ ಹೆಚ್ಚು ಕೋಟಿ ರೂಪಾಯಿ. ಆದರೆ ಕೇಂದ್ರ ಸರ್ಕಾರ ಈ ಯೋಜನೆಗೆ ವರ್ಷಕ್ಕೆ 3 ಲಕ್ಷ ಕೋಟಿ ಕೊಡೋಕೆ ಆಗಲ್ವಾ? ಇದು ಅಂತಹ ಸಮಸ್ಯೆಯಾಗೋದಿಲ್ಲ. ಬಿ. ಶ್ರೀರಾಮುಲುಗೆ ಪ್ರಣಾಳಿಕೆ ಅರ್ಥವಾಗೋದಿಲ್ಲ ಎಂದು ಸಿದ್ದರಾಮಯ್ಯ ವ್ಯಂಗ್ಯವಾಡಿದರು.
ಇನ್ನು ಮಂಡ್ಯದಲ್ಲಿ ಸುಮಲತಾರನ್ನು ಬೆಂಬಲಿಸಿರುವ ಬಿಜೆಪಿ. ಕಾಂಗ್ರೆಸ್ ಧ್ವಜವನ್ನು ಹಿಡಿದು ಹೋಗ್ತಾರೆ ಎಂದು ಆರೋಪಿಸಿದರು. ನಾವು ಯಾವುದೇ ದೇಶದ್ರೋಹ ಕಾನೂನನ್ನು ಸಡಿಲ ಮಾಡೋದಿಲ್ಲ. ಈಗಾಗಲೇ ಬಿಡುಗಡೆಯಾಗಿರುವ ಪ್ರಣಾಳಿಕೆಯಲ್ಲಿ ಕೆಲವೊಂದಿಷ್ಟು ತಿದ್ದುಪಡಿ ಮಾಡುತ್ತೇವೆ. ಬಿಜೆಪಿ ಕೇಳಿದಂತೆ ಪತ್ರಕರ್ತರು ಪ್ರಶ್ನೆ ಕೇಳಬೇಡಿ ಎಂದು ಸಿದ್ದರಾಮಯ್ಯ ಹೇಳಿದರು.