ಹಾಸನ: ಕಾಂಗ್ರೆಸ್ ಪಕ್ಷವನ್ನು ನಾಶ ಮಾಡಿದವರನ್ನು ಇದೀಗ ಬಿಜೆಪಿ ತನ್ನ ಅಭ್ಯರ್ಥಿಯನ್ನಾಗಿ ಮಾಡಿಕೊಂಡಿದೆ ಎಂದು ಜೆಡಿಎಸ್ ಮುಖಂಡ ಅಗಿಲೆ ಯೋಗೀಶ್ ಶಾಸಕ ಪ್ರೀತಂ ಗೌಡ ವಿರುದ್ಧ ಕುಟುಕಿದ್ದಾರೆ.
ಬಿಜೆಪಿ ಶಾಸಕ ಪ್ರೀತಂ ಹೆಸರಿನಲ್ಲೇ ಕುತಂತ್ರ ಅಡಗಿದೆ. ಚುನಾವಣೆ ಸಮಯದಲ್ಲಿ ತಂತ್ರಗಾರಿಕೆ ಮಾಡುವುದು ಸಾಮಾನ್ಯ. ಈ ಮನುಷ್ಯ ಹಾಸನಕ್ಕೆ ಕಾಲಿಟ್ಟ ನಂತರ ತಂತ್ರಗಾರಿಕೆಗಿಂತ ಕುತಂತ್ರವೇ ಹೆಚ್ಚಿದೆ ಎಂದು ಟೀಕಿಸಿದರು. ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಕಾರ್ಯಕರ್ತರಿಗೆ ಬಿಜೆಪಿಗೆ ಮತ ಹಾಕುವಂತೆ ಪಕ್ಷದ ಮುಖಂಡರಿಗೆ ಹೇಳುತ್ತಾರೆ. ಆ ಪಕ್ಷಕ್ಕೆ ಉದ್ದೇಶಪೂರ್ವಕವಾಗಿ ಕೆಟ್ಟ ಹೆಸರು ಬರಲು ಹೀಗೆ ಮಾಡುತ್ತಿದ್ದಾರೆ. ಈತ ಹಣದಿಂದ ರಾಜಕೀಯ ಮಾಡುತ್ತಿದ್ದಾನೆ ಹೊರತು ಸಾಮಾಜಿಕ ಕಳಕಳಿ ಇಟ್ಟುಕೊಂಡು ಇದುವರೆಗೂ ಒಂದೇ ಒಂದು ಕೆಲಸ ಮಾಡಿಲ್ಲ ಎಂದರು.
ಪ್ರೀತಂ ಪ್ರಜ್ವಲ್ ಸೋಲಿಸುವಂತೆ ಹೇಳಿಕೆ ಕೊಡುತ್ತಾರೆ. ಮೊದಲಿನಿಂದಲೂ ಹೀಗೆ ಕುತಂತ್ರದ ಮೂಲಕವೇ ಅಧಿಕಾರಕ್ಕೆ ಬಂದರು. ಇವರಿಗೆ ಬೂತ್ ಮಟ್ಟದಲ್ಲಿ ಪಕ್ಷ ಸಂಘಟನೆಗೆ ಕಾರ್ಯಕರ್ತರೇ ಇಲ್ಲ ಎಂದು ಜರಿದರು.