ಗಂಗಾವತಿ (ಕೊಪ್ಪಳ): ಬಟ್ಟೆ ಹೊಲಿಸಿಕೊಂಡು ಬರುವುದಾಗಿ ಮನೆಯವರಿಗೆ ಹೇಳಿ ಟೈಲರ್ ಮನೆಗೆ ಹೋದ ಯುವತಿಯೊಬ್ಬರು ಇದ್ದಕ್ಕಿದ್ದಂತೆ ನಾಪತ್ತೆಯಾದ ಘಟನೆ ತಾಲೂಕಿನ ರಾಂಪೂರದಲ್ಲಿ ನಡೆದಿದೆ. ನಾಪತ್ತೆಯಾದ ಯುವತಿಯನ್ನು ಬಳ್ಳಾರಿ ಜಿಲ್ಲೆಯ ಕಮಲಾಪುರ ಮೂಲದ ಹತ್ತೊಂಬತ್ತು ವರ್ಷದ ಜ್ಯೋತಿ ಅಂಜಿನಪ್ಪ ಎಂದು ಗುರುತಿಸಲಾಗಿದೆ.
ಕಳೆದ ಹಲವು ವರ್ಷದಿಂದ ಮಾವನ ಮನೆ ರಾಂಪೂರದಲ್ಲಿಯೇ ವಾಸವಾಗಿದ್ದ ಯುವತಿ, ಸಾವಿತ್ರಿ ಟೈಲರ್ ಬಳಿ ಬಟ್ಟೆ ಹೊಲಿಸಿಕೊಂಡು ಬರುವುದಾಗಿ ಅಜ್ಜಿ ಬೋರಮ್ಮನಿಗೆ ಹೇಳಿ ಜೂ.9ರಂದು ಮನೆಯಿಂದ ಹೋಗಿದ್ದು ತಿರುಗಿ ಬಂದಿಲ್ಲ.
ಎಲ್ಲ ಕಡೆ ಹುಡುಕಿದ ಬಳಿಕ ಮಾವ ಛತ್ರಪ್ಪ ದಾಸಪ್ಪ ಇದೀಗ ಸೊಸೆಯನ್ನು ಹುಡುಕಿಕೊಡುವಂತೆ ಗ್ರಾಮೀಣ ಪೊಲೀಸರ ಮೊರೆ ಹೋಗಿದ್ದಾರೆ. ಈ ಕುರಿತು ದೂರು ದಾಖಲಾಗಿದೆ.