ETV Bharat / crime

ಪತಿ ಜತೆ ಕಿತ್ತಾಡಿ 8 ವರ್ಷದ ಪುತ್ರಿ ಕತ್ತುಕೊಯ್ದ 'ಮಹಾ'ತಾಯಿ ಸೋಂಕು ನಿವಾರಕ ಸೇವನೆ - ಕತಿಹಾರ್ ಜಿಲ್ಲಾ ಕ್ರೈಮ್​​ ನ್ಯೂಸ್​

ಜಖೀರಾ ಖತೂನ್ ಎಂಬ ಮಹಿಳೆ ತನ್ನ ಪತಿ ಮೊಹಮ್ಮದ್ ಸೈಫುಲ್ ವಿವಾಹೇತರ ಸಂಬಂಧ ಹೊಂದಿದ್ದ ಎಂದು ಪತ್ನಿ ಶಂಕಿಸಿದ್ದಳು. ಶುಕ್ರವಾರ ಈ ಬಗ್ಗೆ ದಂಪತಿ ಜಗಳ ಮಾಡಿಕೊಂಡಿದ್ದಾರೆ. ಖತೂನ್ ಜಗಳ ಬಳಿಕ ಆಕೆಯ 8 ವರ್ಷದ ಮಗಳನ್ನು ಕೋಣೆಯೊಳಗೆ ಬೀಗ ಹಾಕಿ ಕೋಪದಿಂದ ಪುತ್ರಿಯ ಗಂಟಲು ಕೊಯ್ದು ಹತ್ಯೆ ಮಾಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

kills
kills
author img

By

Published : Mar 27, 2021, 7:57 PM IST

ಪಾಟ್ನಾ: ಬಿಹಾರದ ಕತಿಹಾರ್ ಜಿಲ್ಲೆಯಲ್ಲಿ ಪತಿಯೊಂದಿಗೆ ಜಗಳವಾಡಿದ ನಂತರ ಮಹಿಳೆಯೊಬ್ಬಳು ತನ್ನ ಮಗಳನ್ನು ಕೊಂದು ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ.

ಜಖೀರಾ ಖತೂನ್ ಎಂಬ ಮಹಿಳೆ ಹತ್ಯೆ ಮಾಡಿದ ಆರೋಪಿ. ತನ್ನ ಪತಿ ಮೊಹಮ್ಮದ್ ಸೈಫುಲ್ ವಿವಾಹೇತರ ಸಂಬಂಧ ಹೊಂದಿದ್ದ ಎಂದು ಪತ್ನಿ ಶಂಕೆ ವ್ಯಕ್ತಪಡಿಸಿದರು. ಶುಕ್ರವಾರ ಈ ಬಗ್ಗೆ ದಂಪತಿ ಜಗಳ ಮಾಡಿಕೊಂಡಿದ್ದಾರೆ. ಖತೂನ್ ಜಗಳ ಬಳಿಕ ಆಕೆಯ 8 ವರ್ಷದ ಮಗಳನ್ನು ಕೋಣೆಯೊಳಗೆ ಬೀಗ ಹಾಕಿ ಕೋಪದಿಂದ ಪುತ್ರಿಯ ಗಂಟಲು ಕೊಯ್ದು ಹತ್ಯೆ ಮಾಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

ಮಗಳ ಹತ್ಯೆಯ ಬಳಿಕ ತಾನೂ ಆತ್ಮಹತ್ಯೆ ಮಾಡಿಕೊಳ್ಳಲು ಸೋಂಕು ನಿವಾರಕ ಸೇವಿಸಿ ಮಣಿಕಟ್ಟು ಕತ್ತರಿಸಿಕೊಂಡಿದ್ದಳು ಎಂದು ಮುಫಾಸಿಲ್ ಪೊಲೀಸ್ ಠಾಣೆಯ ಎಸ್‌ಎಚ್‌ಒ ರಂಜೀತ್ ಕುಮಾರ್ ಮಾಹಿತಿ ನೀಡಿದ್ದಾರೆ.

ಪತಿ ಬಾಗಿಲು ತೆರೆಯಲು ಪ್ರಯತ್ನಿಸಿದ್ದ. ಅರ್ಧ ಘಂಟೆಯ ನಂತರವೂ ಆಕೆ ಹೊರಗೆ ಬಾರದಿದ್ದಾಗ, ನೆರೆಹೊರೆಯ ಕುಟುಂಬ ಸದಸ್ಯರನ್ನು ಕರೆದನು. ಅವರೆಲ್ಲ ಕಿಟಕಿಯಿಂದ ಕೋಣೆಯಲ್ಲಿ ನೋಡಿದಾಗ ಖತೂನ್ ಪ್ರಜ್ಞಾಹೀನನಾಗಿ ನೆಲದ ಮೇಲೆ ಮಗಳು ಬಿದ್ದಿದ್ದಳು. ಬಾಗಿಲು ಮುರಿದು ಇಬ್ಬರನ್ನೂ ಆಸ್ಪತ್ರೆಗೆ ಕರೆದೊಯ್ದರು ಎಂದರು.

ಇದನ್ನೂ ಓದಿ: ಸವರ್ಣೀಯರ ಕಿರುಕುಳ ಆರೋಪ: ಒಂದೇ ಕುಟುಂಬದ ಮೂವರು ವಿಷಸೇವಿಸಿ ಆತ್ಮಹತ್ಯೆ ಯತ್ನ

ಖತೂನ್ ಮತ್ತು ಸೈಫುಲ್ ಅವರ 8 ವರ್ಷದ ಮಗಳು ದುರ್ಘಟನೆಯಲ್ಲಿ ಮೃತಪಟ್ಟಿದ್ದಾಳೆ ಎಂದು ವೈದ್ಯರು ತಪಾಸಣೆ ಬಳಿಕ ದೃಢಪಡಿಸಿದರು.

ಸೋಂಕು ನಿವಾರಕ ಸೇವಿಸಿದ ಖತೂನ್ ಪ್ರಾಣಾಪಾಯದಿಂದ ಪಾರಾಗಿದ್ದು, ಈಗ ಚಿಕಿತ್ಸೆ ಪಡೆಯುತ್ತಿದ್ದಾಳೆ. ಆಕೆಯ ಮೇಲೆ ಕೊಲೆ ಪ್ರಕರಣ ದಾಖಲಾಗಿದೆ. ವೈದ್ಯರು ಆಸ್ಪತ್ರೆಯಿಂದ ಬಿಡುಗಡೆ ಮಾಡಿದ ನಂತರ ಅವಳನ್ನು ಬಂಧಿಸುತ್ತೇವೆ. ಆಕೆಯ ಪತಿಯನ್ನು ವಿಚಾರಣೆಗಾಗಿ ವಶಕ್ಕೆ ಪಡೆದಿದ್ದೇವೆ ಎಂದು ರಂಜೀತ್​ ಕುಮಾರ್ ಹೇಳಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.