ಬುಲಂದ್‌ಶಹರ್ (ಯುಪಿ): ಮದುವೆ ಸಮಾರಂಭದ ಸಂಭ್ರಮಾಚರಣೆಯಲ್ಲಿ ಹಾರಿಸಿದ ಗುಂಡು ತಾಗಿ ಮಹಿಳೆ ಮೃತಪಟ್ಟಿರುವ ಘಟನೆ ಬುಲಂದ್‌ಶಹರ್‌ನಲ್ಲಿ ನಡೆದಿದೆ. ಜಾವಿತ್ರಿ (48) ಮೃತ ದುರ್ದೈವಿ.
ಭಾನುವಾರ ತಡರಾತ್ರಿ ಸಮಾಸ್‌ಪುರ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ವಧುವಿನ ಸೋದರ ಸಂಬಂಧಿಯೇ ಕಂಟ್ರಿಮೇಡ್ ಪಿಸ್ತೂಲ್‌ನಿಂದ ಗುಂಡು ಹಾರಿಸಿದ್ದಾನೆ. ಮದುವೆ ಸಮಾರಂಭದಲ್ಲಿ ಭಾಗವಹಿಸಿದ್ದ ಜಾವಿತ್ರಿ ಅವರಿಗೆ ಗುಂಡು ತಗುಲಿದೆ. ಗಂಭೀರ ಸ್ಥಿತಿಯಲ್ಲಿದ್ದ ಇವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಮಾರ್ಗ ಮಧ್ಯಯೇ ಮಹಿಳೆ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆ.
ಘಟನೆ ಸಂಬಂಧ ಮಾಹಿತಿ ಪಡೆದು ಸ್ಥಳಕ್ಕೆ ಬಂದ ಪೊಲೀಸರು ವಧುವಿನ ಸೋದರ ಸಂಬಂಧಿಯನ್ನು ಬಂಧಿಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.
ಇಂದು ಕೇಂದ್ರ ಬಜೆಟ್: ಮಧ್ಯಮ ವರ್ಗದವರಿಗೆ ಬಜೆಟ್ ಮೇಲಿನ ನಿರೀಕ್ಷೆಗಳೇನು?