ETV Bharat / crime

ಅತ್ಯಾಚಾರಕ್ಕೆ ಯತ್ನಿಸಿ ಬೆಂಕಿ ಇಟ್ಟಿದ್ದ ಬಾಲಕಿ ಚಿಕಿತ್ಸೆ ಫಲಕಾರಿಯಾಗದೇ ಸಾವು! - ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿದ್ದರು

ಆಗಸ್ಟ್ 29 ರಂದು ಐವರು ಆರೋಪಿಗಳು ಬಾಲಕಿಯನ್ನು ಆಕೆಯ ಮನೆಯಿಂದ ಬಲವಂತವಾಗಿ ಎತ್ತಿಕೊಂಡು ಹೋಗಿ ಅತ್ಯಾಚಾರಕ್ಕೆ ಯತ್ನಿಸಿದ್ದರು. ಬಾಲಕಿ ಪ್ರತಿಭಟಿಸಿದಾಗ ದುಷ್ಕರ್ಮಿಗಳು ಆಕೆಯ ಮೇಲೆ ಆಸಿಡ್ ಸುರಿದಿದ್ದರು. ಅಷ್ಟಕ್ಕೆ ಬಿಡದ ದುರುಳರು ನಂತರ ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ.

Woman burnt after she resist rape attempt in Bihar
ಅತ್ಯಾಚಾರಕ್ಕೆ ಯತ್ನಿಸಿ ಬೆಂಕಿ ಇಟ್ಟಿದ್ದ ಬಾಲಕಿ ಚಿಕಿತ್ಸೆ ಫಲಕಾರಿಯಾಗದೇ ಸಾವು
author img

By

Published : Sep 21, 2022, 9:13 PM IST

ಸೀತಾಮರ್ಹಿ(ಬಿಹಾರ): ಅತ್ಯಾಚಾರ ಯತ್ನ ವಿರೋಧಿಸಿದ 15 ವರ್ಷದ ಬಾಲಕಿಯನ್ನು ಸುಟ್ಟು ಹಾಕಿರುವ ಘಟನೆ ಬಿಹಾರದ ಸೀತಾಮರ್ಹಿಯಲ್ಲಿ ನಡೆದಿದೆ. ಸಂತ್ರಸ್ತೆ ಶ್ರೀಕೃಷ್ಣ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಬಾಲಕಿಗೆ ಬೆಂಕಿಇಟ್ಟ ಆರೋಪಿ ಆಕೆಯ ತಂದೆಯೊಂದಿಗೆ ವೈಷಮ್ಯ ಹೊಂದಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಈ ನಡುವೆ ಮ್ಯಾಜಿಸ್ಟ್ರೇಟ್ ಮುಂದೆ ಸಂತ್ರಸ್ತೆ ಹೇಳಿಕೆ ದಾಖಲು ಮಾಡಲಾಗಿದೆ. "ನನ್ನ ಸಾವಿನ ನಂತರವೂ ನನಗೆ ಖಂಡಿತವಾಗಿಯೂ ನ್ಯಾಯ ಸಿಗುತ್ತದೆ. ದ್ವೇಷವು ನನ್ನ ತಂದೆಯೊಂದಿಗೆ ಇತ್ತು. ಆದರೆ ಅವನು ನನಗೆ ಏಕೆ ಹೀಗೆ ಮಾಡಿದ ಎಂದು ಪ್ರಶ್ನಿಸಿದ್ದಾಳೆ. ಸಂತ್ರಸ್ತೆಯ ತಂದೆ ಆರೋಪಿಯೊಂದಿಗೆ ವೈ ಮನಸ್ಸು ಹೊಂದಿದ್ದ ಎಂಬುದನ್ನು ಬಾಲಕಿ ತನ್ನ ಹೇಳಿಕೆಯಲ್ಲಿ ದಾಖಲಿಸಿದ್ದಾಳೆ.

ಆಗಸ್ಟ್ 29 ರಂದು ಐವರು ಆರೋಪಿಗಳು ಬಾಲಕಿಯನ್ನು ಆಕೆಯ ಮನೆಯಿಂದ ಬಲವಂತವಾಗಿ ಎತ್ತಿಕೊಂಡು ಹೋಗಿ ಅತ್ಯಾಚಾರಕ್ಕೆ ಯತ್ನಿಸಿದ್ದರು. ಬಾಲಕಿ ಪ್ರತಿಭಟಿಸಿದಾಗ ದುಷ್ಕರ್ಮಿಗಳು ಆಕೆಯ ಮೇಲೆ ಆಸಿಡ್ ಸುರಿದಿದ್ದರು. ಅಷ್ಟಕ್ಕೆ ಬಿಡದ ದುರುಳರು ನಂತರ ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಬೆಂಕಿ ಇಟ್ಟಿದ್ದಲ್ಲದೇ ಬಾಲಕಿಯನ್ನು ಸಮೀಪದ ಹೊಂಡಕ್ಕೆ ಎಸೆದಿದ್ದರು. ಈ ಘಟನೆಯ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ತೀವ್ರ ಅಸ್ವಸ್ಥ ಸ್ಥಿತಿಯಲ್ಲಿದ್ದ ಬಾಲಕಿಯನ್ನು ಮುಜಾಫರ್‌ಪುರದ ಎಸ್‌ಕೆಎಂಸಿಎಚ್‌ಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಇಂದು ಮೃತಪಟ್ಟಿದ್ದಾಳೆ.

ಇದನ್ನು ಓದಿ:ಲಿಫ್ಟ್​ ನೆಪದಲ್ಲಿ ಬೈಕ್ ಸವಾರನಿಗೆ ವಿಷದ ಇಂಜೆಕ್ಷನ್ ಚುಚ್ಚಿದ ಆರ್​ಎಂಪಿ ವೈದ್ಯ: ಪತ್ನಿ ಫೋನ್​ ಕಾಲ್​ನಲ್ಲಿತ್ತು ಕೊಲೆ ರಹಸ್ಯ!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.