ETV Bharat / crime

ಪ್ರೀತ್ಸೋದ್​ ತಪ್ಪಾ?: ಲವರ್ಸ್​ಗಳನ್ನ ಮರಕ್ಕೆ ಕಟ್ಟಿ ಥಳಿಸಿದ ಗ್ರಾಮಸ್ಥರು

ಪ್ರೇಮಿಗಳಿಬ್ಬರನ್ನ ಮರಕ್ಕೆ ಕಟ್ಟಿ ಹಾಕಿ ಥಳಿಸಿರುವ ಘಟನೆ ನಡೆದಿದ್ದು, ಆ ವಿಡಿಯೋವೊಂದು ಇದೀಗ ವೈರಲ್​ ಆಗಿದೆ.

author img

By

Published : Jun 29, 2021, 3:32 PM IST

Video of beating of lover couple
Video of beating of lover couple

ಸಮಸ್ತಿಪುರ(ಬಿಹಾರ): ಪ್ರೇಮಿಗಳಿಬ್ಬರನ್ನ ಮರಕ್ಕೆ ಕಟ್ಟಿ ಅಮಾನವೀಯ ರೀತಿಯಲ್ಲಿ ಗ್ರಾಮಸ್ಥರು ಥಳಿಸಿರುವ ಘಟನೆ ಬಿಹಾರದ ಸಮಸ್ತಿಪುರದಲ್ಲಿ ನಡೆದಿದೆ. ಇದರ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ಲವರ್ಸ್​ಗಳನ್ನ ಮರಕ್ಕೆ ಕಟ್ಟಿ ಥಳಿಸಿದ ಗ್ರಾಮಸ್ಥರು

ಕಳೆದ ಕೆಲ ತಿಂಗಳಿಂದ ಜೋಡಿಯೊಂದು ಪರಸ್ಪರ ಪ್ರೀತಿಸುತ್ತಿದ್ದರು. ಇಂದು ಬೆಳಗ್ಗೆ ಯುವಕನ ಜೊತೆ ಯುವತಿ ಹೊರಗಡೆ ಹೋಗುತ್ತಿದ್ದ ವೇಳೆ ಅವರನ್ನ ಕೂಡಿ ಹಾಕಲಾಗಿದೆ. ಈ ವೇಳೆ ಸ್ಥಳೀಯರು ಮರಕ್ಕೆ ಕಟ್ಟಿ ಹಾಕಿ ಥಳಿಸಿದ್ದಾರೆ. ಕ್ಷಮಿಸುವಂತೆ ಇಬ್ಬರು ಕೇಳಿಕೊಳ್ಳುತ್ತಿದ್ದರೂ, ಅವರ ಮೇಲಿನ ದಾಳಿ ಮಾತ್ರ ನಿಂತಿಲ್ಲ. ಇದರ ವಿಡಿಯೋ ಈಗ ವೈರಲ್​​ ಆಗಿದೆ.

ಇದನ್ನೂ ಓದಿರಿ: Video: ಕ್ಷಣಾರ್ಧದಲ್ಲೇ ನಡೀತು ಭೀಕರ Accident: ಆಡಿ ಕಾರ್​ ದಾಳಿಗೆ ಆಟೋ ಧೂಳಿಪಟ

ವೈರಲ್​ ವಿಡಿಯೋ ಬಗ್ಗೆ ಮಾಹಿತಿ ಗೊತ್ತಾಗುತ್ತಿದ್ದಂತೆ ಎಚ್ಚೆತ್ತುಕೊಂಡಿರುವ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ. ಜತೆಗೆ ಘಟನೆಯ ಸಂಪೂರ್ಣ ಮಾಹಿತಿ ಪಡೆದುಕೊಂಡು ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.