ETV Bharat / crime

ರೈಲ್ವೆ ಟ್ರ್ಯಾಕ್​ ಮೇಲೆ ರೀಲ್ಸ್​ ಮಾಡಲು ಹೋಗಿ ಜೀವ ಕಳೆದುಕೊಂಡ ಇಬ್ಬರು ಯುವಕರು - ಇಬ್ಬರು ಯುವಕರು ರೈಲಿಗೆ ಸಿಲುಕಿ ಮೃತ

ಮೈನ್‌ಪುರಿಯ ಬರ್ನಾಹಾಲ್ ಪೊಲೀಸ್ ಠಾಣೆ ವ್ಯಾಪ್ತಿಯ ಭಿಕನ್‌ಪುರ ಗ್ರಾಮದ ನಿವಾಸಿಗಳಾದ ಕರಣ್ ಮತ್ತು ಆತನ ಸ್ನೇಹಿತ ಶಶಾಂಕ್ ಸಮೀಪದ ಧೋಲ್‌ಪುರ ಗ್ರಾಮಕ್ಕೆ ಕೂಲಿ ಮಾಡಲು ಬಂದಿದ್ದರು ಎಂದು ಠಾಣೆ ಅಧಿಕಾರಿ ಲೈನ್‌ಪಾರ್ ಮಹೇಶ್ ಸಿಂಗ್ ತಿಳಿಸಿದ್ದಾರೆ.

Up_firozabad_do yuvakon ki maut_photo_up10114
ರೈಲ್ವೆ ಟ್ರ್ಯಾಕ್​ ಮೇಲೆ ರೀಲ್ಸ್​ ಮಾಡಲು ಹೋಗಿ ಜೀವ ಕಳೆದುಕೊಂಡ ಇಬ್ಬರು ಯುವಕರು
author img

By

Published : Dec 3, 2022, 10:37 PM IST

ಫಿರೋಜಾಬಾದ್: ಜಿಲ್ಲೆಯಲ್ಲಿ ಅತ್ಯಂತ ನೋವಿನ ಪ್ರಕರಣವೊಂದು ವರದಿಯಾಗಿದೆ. ಇಲ್ಲಿನ ಇಬ್ಬರು ಯುವಕರು ರೈಲಿಗೆ ಸಿಲುಕಿ ಮೃತಪಟ್ಟಿದ್ದಾರೆ. ಯುವಕರಿಬ್ಬರೂ ರೈಲ್ವೇ ಮಾರ್ಗದಲ್ಲಿ ನಿಂತು ಕಿವಿಗೆ ಏರ್​​​ಫೋನ್​​​ ಹಾಕಿಕೊಂಡು ರೀಲ್ ಮಾಡುತ್ತಿದ್ದರು ಎಂದು ಹೇಳಲಾಗುತ್ತಿದೆ. ಇದೇ ವೇಳೆ, ರಾಜಧಾನಿ ರೈಲಿಗೆ ಡಿಕ್ಕಿ ಹೊಡೆದು ಇಬ್ಬರೂ ಅಸುನೀಗಿದ್ದಾರೆ.

ಘಟನೆ ಕುರಿತು ಮಾಹಿತಿ ಪಡೆದ ಕೂಡಲೇ ಸ್ಥಳಕ್ಕೆ ಆಗಮಿಸಿದ ಪೊಲೀಸರು ಮೃತದೇಹಗಳನ್ನು ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.

ಮೈನ್‌ಪುರಿಯ ಬರ್ನಾಹಾಲ್ ಪೊಲೀಸ್ ಠಾಣೆ ವ್ಯಾಪ್ತಿಯ ಭಿಕನ್‌ಪುರ ಗ್ರಾಮದ ನಿವಾಸಿಗಳಾದ ಕರಣ್ ಮತ್ತು ಆತನ ಸ್ನೇಹಿತ ಶಶಾಂಕ್ ಸಮೀಪದ ಧೋಲ್‌ಪುರ ಗ್ರಾಮಕ್ಕೆ ಕೂಲಿ ಮಾಡಲು ಬಂದಿದ್ದರು ಎಂದು ಠಾಣೆ ಅಧಿಕಾರಿ ಲೈನ್‌ಪಾರ್ ಮಹೇಶ್ ಸಿಂಗ್ ತಿಳಿಸಿದ್ದಾರೆ.

ಇದೇ ವೇಳೆ ಲೈನ್‌ಪಾರ್‌ ಪೊಲೀಸ್‌ ಠಾಣೆ ವ್ಯಾಪ್ತಿಯ ರೂಪಸ್‌ಪುರ ಗೇಟ್‌ ಬಳಿ ಈ ಯುವಕರು ರೀಲ್​ ಮಾಡುತ್ತಿದ್ದಾಗ ರೀಲ್‌ ತಯಾರಿಸುತ್ತಿದ್ದಾಗ ಏಕಾಏಕಿ ರಾಜಧಾನಿ ಎಕ್ಸ್‌ಪ್ರೆಸ್‌ ರೈಲು ಬಂದಿದ್ದರಿಂದ ಅವರಿಗೆ ಗೊತ್ತಾಗಿಲ್ಲ. ಇದ್ದಕ್ಕಿದಂತೆ ಇಬ್ಬರು ಯುವಕ ಮೇಲೆ ರೈಲು ಹರಿದಿದೆ. ಈ ಘಟನೆಯ ಮಾಹಿತಿ ದೊರೆಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ಇಬ್ಬರ ಮೃತದೇಹಗಳನ್ನು ತೆಗೆದುಕೊಂಡು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.

ಇದನ್ನು ಓದಿ:ಪಿಎಸ್ಐ ನೇಮಕಾತಿ ಹಗರಣ: ಜಾಮೀನು ಕೋರಿ ದಿವ್ಯಾ ಹಾಗರಗಿ ಅರ್ಜಿ, ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.