ಇಂದೋರ್ (ಮಧ್ಯಪ್ರದೇಶ): ಕಳ್ಳತನ ಮಾಡಲೆಂದು ಮನೆಯೊಂದಕ್ಕೆ ನುಗ್ಗಿದ ಖದೀಮರು, ಹಣ ದೋಚಿದ್ದಲ್ಲದೆ ಒಬ್ಬಂಟಿಯಾಗಿದ್ದ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ.
ಮಧ್ಯಪ್ರದೇಶದ ಇಂದೋರ್ನಲ್ಲಿ ಈ ಘಟನೆ ನಡೆದಿದೆ. ತಡರಾತ್ರಿ ಮನೆಗೆ ನುಗ್ಗಿದ ಮೂವರು ಕಳ್ಳರು ಮಹಿಳೆಗೆ ಚಾಕು ತೋರಿಸಿ, 50 ಸಾವಿರ ರೂ. ಹಣವನ್ನು ಎಗರಿಸಿದ್ದಾರೆ. ತಾನು ಕೊರೊನಾ ಸೋಂಕಿತೆ ಎಂದರೂ ಕೇಳದೆ ಆಕೆ ಮೇಲೆ ಅತ್ಯಾಚಾರ ಎಸಗಿ ಪರಾರಿಯಾಗಿದ್ದಾರೆ.
ಇದನ್ನೂ ಓದಿ: ಕೋವಿಡ್ ಸೋಂಕಿತೆ ಮೇಲೆ ನರ್ಸ್ನಿಂದಲೇ ಅತ್ಯಾಚಾರ: 24 ಗಂಟೆಗಳಲ್ಲೇ ಸಂತ್ರಸ್ತೆ ಸಾವು
ಈ ಸಂಬಂಧ ಮಹಿಳೆ ಪೊಲೀಸರಿಗೆ ದೂರು ನೀಡಿದ್ದು, ತಾನು ಕೋವಿಡ್ ಸೋಂಕಿಗೆ ಒಳಗಾಗಿ ಹೋಂ ಕ್ವಾರಂಟೈನ್ ಆಗಿದ್ದೆ ಎಂದು ತಿಳಿಸಿದ್ದಾಳೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಇಬ್ಬರು ಆರೋಪಿಗಳನ್ನು ಬಂಧಿಸಿದ್ದು, ಓರ್ವನಿಗಾಗಿ ಬಲೆ ಬೀಸಿದ್ದಾರೆ.